Breaking; ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರ ಗಮನಕ್ಕೆ

ಬೆಂಗಳೂರು, ಜುಲೈ 03; ವಿವಿಧ ನಿರ್ವಹಣಾ ಕಾಮಗಾರಿಗಳ ಹಿನ್ನಲೆಯಲ್ಲಿ ಬೆಂಗಳೂರು-ಮೈಸೂರು ನಡುವಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದೆ.

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ನಾನ್ ಇಂಟರ್ ಲಾಕಿಂಗ್‌ ಕೆಲಸಗಳನ್ನು ಕೈಗೊಳ್ಳಲಿದೆ. ಬಿಡದಿ ಮತ್ತು ರಾಮನಗರ ನಿಲ್ದಾಣಗಳ ನಡುವೆ ಈ ನಿರ್ವಹಣಾ ಕಾಮಗಾರಿಗಳು ನಡೆಯಲಿವೆ.

ಇದರಿಂದಾಗಿ ಜುಲೈ 5, 6 ಮತ್ತು 7ರಂದು ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಲೆವೆಲ್ ಕ್ರಾಸಿಂಗ್ ನಂ 34, 35ರ ಇಂಟರ್ ಲಾಕಿಂಗ್ ಮತ್ತು ಬಿಡದಿ-ರಾಮನಗರ ನಡುವೆ 120 ಮೀಟರ್ ಲೈನ್ ಬ್ಲಾಕ್ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತದೆ.

Non Interlocking Work Bengaluru Mysuru Train Cancelled

ರೈಲುಗಳ ಸಂಚಾರ ರದ್ದು

* ರೈಲು ಸಂಖ್ಯೆ 06526 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ಜುಲೈ 5, 6ರಂದು ರದ್ದು
* ರೈಲು ಸಂಖ್ಯೆ 06559 ಕೆಎಸ್ಆರ್ ಬೆಂಗಳೂರು- ಮೈಸೂರು ಮೆಮು ರೈಲು ಜುಲೈ 6, 7ರಂದು ರದ್ದು

ರೈಲುಗಳು ಭಾಗಶಃ ರದ್ದು

* ಜುಲೈ 5 ಮತ್ತು 7ರಂದು ರೈಲು ಸಂಖ್ಯೆ 06255 ಕೆಎಸ್ಆರ್ ಬೆಂಗಳೂರು- ಮೈಸೂರು ಮೆಮು ಸಂಚಾರ ಭಾಗಶಃ ರದ್ದಾಗಲಿದೆ. ರೈಲು ಕೆಂಗೇರಿ ತನಕ ಮಾತ್ರ ಸಂಚಾರ ನಡೆಸಲಿದೆ.

* ಜುಲೈ 5 ಮತ್ತು 7ರಂದು ರೈಲು ಸಂಖ್ಯೆ 06560 ಮೈಸೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಮೈಸೂರು-ಕೆಂಗೇರಿ ನಡುವೆ ಭಾಗಶಃ ರದ್ದಾಗಲಿದೆ. ನಿರ್ಗಮನದ ಸಮಯದಲ್ಲಿ ಕೆಂಗೇರಿಯಿಂದ ಹೊರಟು ಬೆಂಗಳೂರು ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+