ಬೆಂಗಳೂರಿನ ಕೆಲವೆಡೆ ಗುರುವಾರ ನೀರು ಬರೋಲ್ಲ
ಬೆಂಗಳೂರು, ಸೆಪ್ಟೆಂಬರ್ 30 : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಸಂಜೆ ಮತ್ತು ಗುರುವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ ನೀರು ಪೂರೈಕೆ ಮಾಡುವ ಪೈಪ್ ಒಡೆದಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ಜಲ ಮಂಡಳಿ ಈ ಕುರಿತು ಮಾಹಿತಿ ನೀಡಿದೆ. ಕಾವೇರಿ 4ಹಂತದ 1ನೇ ಘಟ್ಟದ ನೀರು ಪೂರೈಕೆ ಮಾಡುವ ಪೈಪ್ ಒಡೆದಿರುವುದರಿಂದ ಬೆಂಗಳೂರಿನ ಈಶಾನ್ಯ ಭಾಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬುಧವಾರ ಸಂಜೆ ಮತ್ತು ಅಕ್ಟೋಬರ್ 1ರ ಗುರುವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

ಎಲ್ಲೆಲ್ಲಿ ನೀರು ಬರೋಲ್ಲ : ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಮಡಿವಾಳ, ಅಗ್ರಹಾರ ದಾಸರಹಳ್ಳಿ, ಬಸವೇಶ್ವರ ನಗರ, ರಾಜಾಜಿನಗರ ಸುತ್ತಮುತ್ತ, ಮಂಗಮ್ಮನಪಾಳ್ಯ, ಜೆಪಿನಗರ, ಶಂಕರಮಠ, ಶಕ್ತಿಗಣಪತಿ ನಗರ, ರಾಜ್ ಕುಮಾರ್ ವಾರ್ಡ್.
ವೃಷಭಾವತಿ ನಗರ, ನಂದಿನಿ ಲೇಔಟ್, ನಾಗರಭಾವಿ, ಗೋವಿಂದರಾಜ ನಗರ, ಚಂದ್ರಾ ಲೇಔಟ್, ಅನ್ನಪೂರ್ಣ ನಗರ ಮುಂತಾದ ಕಡೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. [ನೀರಿನ ಬೆಲೆ ಎಷ್ಟು ಏರಿಕೆಯಾಗಿದೆ?]












Click it and Unblock the Notifications