ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗರೇಟ್‌ ಡೀಲರ್‌ಗಳಿಂದ ಲಂಚ; ಪೊಲೀಸ್ ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆ

|
Google Oneindia Kannada News

ಬೆಂಗಳೂರು, ಜೂನ್ 18 : ಎಸಿಪಿ ಪ್ರಭುಶಂಕರ್ ವಿರುದ್ಧ ಎಸಿಬಿ ದಾಖಲು ಮಾಡಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳಿಗೆ ನೀಡಿರುವ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 23ರ ತನಕ ವಿಸ್ತರಣೆ ಮಾಡಿದೆ.

Recommended Video

BJP High Command ignores CM Yeddyurappa in election Council | Oneindia Kannada.

ಸಿಗರೇಟ್ ವ್ಯಾಪಾರಿಗಳಿಂದ ಹಣ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಎಸಿಪಿ ಪ್ರಭುಶಂಕರ್ ವಿರುದ್ಧ ಎಸಿಬಿ ಎಫ್‌ಐಆರ್ ದಾಖಲು ಮಾಡಿದೆ. ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಗರೇಟ್ ಲಂಚ: ಎಸಿಪಿ ಪ್ರಭುಶಂಕರ್ ಮೇಲೆ ತನಿಖೆಗೆ ಅನುಮತಿಸಿಗರೇಟ್ ಲಂಚ: ಎಸಿಪಿ ಪ್ರಭುಶಂಕರ್ ಮೇಲೆ ತನಿಖೆಗೆ ಅನುಮತಿ

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಮುಂದಿನ ಪ್ರಕ್ರಿಯಿಗೆ ತಡೆಯಾಜ್ಞೆಯನ್ನು ನೀಡಿತ್ತು. ಈಗ ಅದನ್ನು ಜೂನ್ 23ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

crime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣcrime beat 1: ಲಾಕ್ಡೌನ್ ಟೈಮಲ್ಲಿ ಪೊಲೀಸರ ಸಿಗರೇಟ್ ಸುಲಿಗೆ ಪ್ರಕರಣ

No Proceedings On FIR Against ACP Prabhushankar Till June 23 Says High Court

ಅರ್ಜಿಯ ವಿಚಾರಣೆ ವೇಳೆ ಸರ್ಕಾರಿ ವಕೀಲರು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.

ಇದೇ ಪ್ರಕರಣದಲ್ಲಿ ಕಾಟನ್‌ಪೇಟೆ ಪೊಲೀಸರು ದಾಖಲು ಮಾಡಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳಿಗೂ ತಡೆ ನೀಡಲಾಗಿದೆ. ಸಿಸಿಬಿಯ ಎಸಿಪಿ ಪ್ರಭುಶಂಕರ್ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದಾರೆ.

ಏನಿದು ಪ್ರಕರಣ? : ಕೊರೊನಾ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದಾಗ ಸಿಗರೇಟ್ ಡೀಲರ್‌ಗಳಿಂದ ಲಂಚ ಪಡೆದ ಪ್ರಕರಣ ಇದಾಗಿದೆ. ಅಕ್ರಮವಾಗಿ ಸಿಗರೇಟ್ ಮಾರಾಟ ಮಾಡಲು ಅವಕಾಶ ನೀಡಲು 62.5 ಲಂಚ ಸ್ವೀಕಾರ ಮಾಡಲಾಗಿದೆ ಎಂಬುದು ಆರೋಪ.

English summary
Karnataka high court has directed that no proceedings be initiated against ACP Prabhushankar till June 23 in FIR lodged against him by ACB. He is accused in taking kickbacks from tobacco dealers to let them operate during the time of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X