ಬೆಂಗಳೂರಿನ ನಿಮ್ಮ ಏರಿಯಾದಲ್ಲಿ ಆಗಸ್ಟ್ 07- 14ರ ನಡುವೆ ವಿದ್ಯುತ್ ಕಟ್

ಬೆಂಗಳೂರು, ಆಗಸ್ಟ್ 08; ಬೆಂಗಳೂರು ನಗರದ ವಿವಿಧ ಪ್ರದೇಶದಲ್ಲಿ ಆಗಸ್ಟ್ 07 ಮತ್ತು 14ರ ನಡುವೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಅವಧಿಯಲ್ಲಿ ನಿರ್ವಹಣಾ ಕಾರ್ಯ ಇರುವುದರಿಂದ ಜನರು ಸಹಕರಿಸಬೇಕು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮನವಿ ಮಾಡಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಈ ಕುರಿತು ಪ್ರಕಟಣೆ ಹೊರಡಿಸಿದೆ.

ಆಗಸ್ಟ್ 7 ಶನಿವಾರ ಹಾಗೂ ಆಗಸ್ಟ್ 8 ಭಾನುವಾರದಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಆಗಸ್ಟ್ 7ರಂದು ಸರ್ಜಾಪುರ, ಇಟ್ಟಗನೂರು, ಹೊಸಹಳ್ಳಿ, ಬಿಳಕೇನಹಳ್ಳಿ, ಸೊಲ್ಲೆಪುರ, ನರಸಾಪುರ, ಸಿಲ್ಕ್ ಫಾರ್ಮ್, ಸುಲ್ತಾನ್ ಪಾಳ್ಯ, ತಿಂಡ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

No Power Supply In Various Areas of Bengaluru between Aug 7 And 14: BESCOM

ಆಗಸ್ಟ್ 8ರಂದು ಸಿಟಿ ಮಾರುಕಟ್ಟೆ, ಅವಿನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಆರ್ ಟಿ ರಸ್ತೆ, ಸಿಟಿ ರಸ್ತೆ, ಎಸ್ ಪಿ ರಸ್ತೆ, ಜೆಸಿ ರಸ್ತೆ, ಚಿಕ್ಕಪೇಟೆ, ಚಾಮರಾಜಪೇಟೆ, ಎಂಎಂ ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್, ಶಂಕರಪುರ, ಮೆಡಿಕಲ್ ಕಾಲೇಜ್, ಎಸ್ ಜೆ ಪಾರ್ಕ್ ಹಾಗೂ ಸುತ್ತಮುತ್ತ ವಿದ್ಯುತ್ ಕಡಿತಗೊಳ್ಳಲಿದೆ. ಬೆಂಗಳೂರು ಪೂರ್ವ ವೃತ್ತದ ವೈಟ್ ಫೀಲ್ಡ್ ವಿಭಾಗ, ಪಶ್ಚಿಮ ವೃತ್ತದ ರಾಜಾಜಿನಗರ, ಆರ್ ಆರ್ ನಗರ ಮತ್ತು ಕೆಂಗೇರಿ ವಿಭಾಗ, ಬೆಂಗಳೂರು ಉತ್ತರ ವೃತ್ತದ ಪೀಣ್ಯ, ಜಾಲಹಳ್ಳಿ ಮತ್ತು ಮಲ್ಲೇಶ್ವರಂ ವಿಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

ಆಗಸ್ಟ್ 9 ರಿಂದ ಆಗಸ್ಟ್ 15: ಜಯನಗರ ಉಪ ವಿಭಾಗದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರ ಅವಧಿಯಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ದಿನಾಂಕ 09.08.2021 ರಂದು ಬೆಂಗಳೂರು ಉತ್ತರ ವೃತ್ತದ ಪೀಣ್ಯ, ಜಾಲಹಳ್ಳಿ ಮತ್ತು ಮಲ್ಲೇಶ್ವರಂ ವಿಭಾಗ, ಬೆಂಗಳೂರು ಪೂರ್ವ ವೃತ್ತದ ವೈಟ್ ಫೀಲ್ಡ್, ಶಿವಾಜಿನಗರ ಮತ್ತು ಇಂದಿರಾನಗರ ವಿಭಾಗ, ಪಶ್ಚಿಮ ವೃತ್ತದ ರಾಜಾಜಿನಗರ, ಆರ್ ಆರ್ ನಗರ ಮತ್ತು ಕೆಂಗೇರಿ ವಿಭಾಗ, ಬೆಂಗಳೂರು ದಕ್ಷಿಣ ವೃತ್ತದ ಕೋರಮಂಗಲ, ಜಯನಗರ ಮತ್ತು ಎಚ್ ಎಸ್ ಆರ್ ವಿಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

ಆಗಸ್ಟ್ 9ರಂದು ಜೆಪಿ ನಗರ 6ನೇ ಹಂತ, ಕೆಆರ್ ಲೇ ಔಟ್ ಪುಟ್ಟೇನಹಳ್ಳಿ ಕೆರೆ, ಅಶ್ವಥ್ ನಾರಾಯಣ್ ಲೇಔಟ್, ಅಣ್ಣಯ್ಯ ರೆಡ್ಡಿ ಲೇಔಟ್, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3ನೇ ಹಂತ, ಪುಟ್ಟೇನಹಳ್ಳಿ ಸರ್ಕಲ್, ಬನಶಂಕರಿ 5ನೇ ಹಂತ, ಪದ್ಮನಾಭನಗರದ ಕೆಲ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಆಗಸ್ಟ್ 10ರಂದು ನಾಗಾರ್ಜುನ ಎನ್ ಕ್ಲೇವ್, ಸಿಂಧೂರ ಚೌಲ್ಟ್ರಿ, ಜರಗನಹಳ್ಳಿಯ ಕೆಲ ಭಾಗ, ಇಟ್ಟಮಡು, ಜೆಪಿ ನಗರ 1ಹಾಗೂ 6ನೇ ಹಂತ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕೆಇಬಿ ಲೇಔಟ್,ರಾಮರಾವ್ ಲೇಔಟ್, ಅರ್ಕಹಳ್ಳಿ ಮುಖ್ಯರಸ್ತೆ, ಪದ್ಮನಾಭನಗರದ ಕೆಲ ಭಾಗಗಳು, ಬನಶಂಕರಿ 2ನೇ ಹಂತ.

ದಿನಾಂಕ 10.08.2021 ರಂದು ಬೆಂಗಳೂರು ಉತ್ತರ ವೃತ್ತದ ಪೀಣ್ಯ, ಜಾಲಹಳ್ಳಿ ಮತ್ತು ಮಲ್ಲೇಶ್ವರಂ ವಿಭಾಗ, ಬೆಂಗಳೂರು ದಕ್ಷಿಣ ವೃತ್ತದ ಕೋರಮಂಗಲ, ಜಯನಗರ ಮತ್ತು ಎಚ್ ಎಸ್ ಆರ್ ವಿಭಾಗ, ಬೆಂಗಳೂರು ಪಶ್ಚಿಮ ವೃತ್ತದ ರಾಜಾಜಿನಗರ, ಆರ್ ಆರ್ ನಗರ ಮತ್ತು ಕೆಂಗೇರಿ ವಿಭಾಗ, ಬೆಂಗಳೂರು ಪೂರ್ವ ವೃತ್ತದ ವೈಟ್ ಫೀಲ್ಡ್, ಶಿವಾಜಿನಗರ ಮತ್ತು ಇಂದಿರಾನಗರ ವಿಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

No Power Supply In Various Areas of Bengaluru between Aug 7 And 14: BESCOM

ಆಗಸ್ಟ್ 11, 12, 13: ಸುಧಾಮ ನಗರ, ಜರಗನಹಳ್ಳಿ ಸಿಎಸ್ ಲೇ ಔಟ್, ನಾಯ್ಡು ಲೇ ಔಟ್, ಬಸವರಾಜು ಲೇ ಔಟ್, ಅಯ್ಯಪ್ಪ ದೇಗುಲ, ಜೆಪಿ ನಗರ 2, 3 ಹಾಗೂ 5ನೇ ಹಂತ, ಭುವನೇಶ್ವರಿ ನಗರ, ಇಟ್ಟಮಡು, ಸಿದ್ದಣ್ಣ ಬಡಾವಣೆ, ಶ್ರೀನಿಧಿ ಬಡಾವಣೆ, ಚುಂಚನಘಟ್ಟ ಲೇ ಔಟ್, ಕಾಮಾಕ್ಯ ಬಡಾವಣೆ, 100 ಅಡಿ ರಿಂಗ್ ರಸ್ತೆ, ಕೃಷ್ಣಪ್ಪ ಲೇ ಔಟ್, ಪದ್ಮನಾಭನಗರ ಹಾಗೂ ಬನಶಂಕರಿ 2ನೇ ಹಂತದ ಕೆಲ ಭಾಗಗಳು.

ಆಗಸ್ಟ್ 14,15: ಎಚ್ ಸಿದ್ದಯ್ಯ ರಸ್ತೆ, ಪದ್ಮನಾಭನಗರ ಬಿಡಬ್ಲ್ಯೂ ಎಸ್ಎಸ್ ಬಿ ಕಚೇರಿ,ಗುರುರಾಜ ಬಡಾವಣೆ, ಹಳ್ಳಿ ಎಸ್ ಬಿಎಂ ರಸ್ತೆ, ಕರ್ನಾಟಕ ಬ್ಯಾಂಕ್ ರಸ್ತೆ ಮುಂತಾದೆಡೆ ವಿದ್ಯುತ್ ಪೂರೈಕೆ ಇರುವುದಿಲ್ಲ.

ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಜನರು ಬೆಸ್ಕಾಂ ಟ್ವಿಟರ್, ಫೇಸ್ ಬುಕ್ ಖಾತೆಯನ್ನು ನೋಡಬಹುದಾಗಿದೆ. ವಿದ್ಯುತ್ ವ್ಯತ್ಯಯದ ಬಗ್ಗೆ ಅಲ್ಲಿ ಅಪ್‌ ಡೇಟ್ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+