ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ಕೋವಿಡ್ ಸೋಂಕಿತರ ಮನೆಗೆ ಪೋಸ್ಟರ್ ಸಹ ಹಾಕಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02 : "ಬೆಂಗಳೂರು ನಗರದಲ್ಲಿ ಕಂಟೈನ್ಮೆಂಟ್ ವಲಯಗಳಲ್ಲಿನ ಕೋವಿಡ್ ಸೋಂಕಿತರು ಇರುವ ಮನೆಗಳಿಗೆ ಇನ್ನು ಮುಂದೆ ಪೋಸ್ಟರ್ ಹಾಕುವುದಿಲ್ಲ. ಆದರೆ ಅಕ್ಕ ಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡಲಾಗುತ್ತದೆ" ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದರು.

Recommended Video

Sandalwood Drug Mafiaಗೆ ರಾಜಕೀಯ ನಂಟು ಇದೆ - HD Kumaraswamy | Oneindia Kannada

ಬುಧವಾರ ಬೆಂಗಳೂರು ನಗರದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆಯುಕ್ತರು ಸಭೆ ನಡೆಸಿದರು. ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು. "ಇನ್ನು ಮುಂದೆ ಕೋವಿಡ್ ಸೋಂಕಿತರು ಇರುವ ಮನೆಗೆ ಪೋಸ್ಟರ್ ಹಾಕುವುದಿಲ್ಲ" ಎಂದರು.

ಕೋವಿಡ್; ಬೆಂಗಳೂರಲ್ಲಿ ಶೀಟ್‌ ಹಾಕಿ ಮನೆ, ರಸ್ತೆ ಸೀಲ್ ಡೌನ್ ಇಲ್ಲ ಕೋವಿಡ್; ಬೆಂಗಳೂರಲ್ಲಿ ಶೀಟ್‌ ಹಾಕಿ ಮನೆ, ರಸ್ತೆ ಸೀಲ್ ಡೌನ್ ಇಲ್ಲ

"ಬೆಂಗಳೂರು ನಗರದಲ್ಲಿನ ಕಂಟೈನ್ಮೆಂಟ್ ವಲಯದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗುತ್ತದೆ. ಯಾವುದೇ ಪ್ರದೇಶದಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ 1 ಅಥವ 2 ಕೋವಿಡ್ ಪ್ರಕರಣಗಳು ಇದ್ದರೆ ಬ್ಯಾರಿಕೇಡ್ ಹಾಕುವುದಿಲ್ಲ" ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಕೆಲವು ಕೋವಿಡ್ ಕೇರ್ ಸೆಂಟರ್‌ ಮುಚ್ಚಲಿದೆ ಬಿಬಿಎಂಪಿ ಕೆಲವು ಕೋವಿಡ್ ಕೇರ್ ಸೆಂಟರ್‌ ಮುಚ್ಚಲಿದೆ ಬಿಬಿಎಂಪಿ

ಮಂಗಳವಾರ ಬೆಂಗಳೂರು ನಗರದಲ್ಲಿ 2967 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,32,092ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 38,906.

ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಮಾರ್ಗಸೂಚಿ

ಬೆಂಗಳೂರಿನ ಜನರಿಗೆ ಆತಂಕ ಬೇಡ

ಬೆಂಗಳೂರಿನ ಜನರಿಗೆ ಆತಂಕ ಬೇಡ

* ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಗೆ ಗುರಿ ನಿಗದಿ ಮಾಡಿಲ್ಲ. ಕೋವಿಡ್ ಪಾಸಿಟಿವ್ ಸೋಂಕಿತರು ಇರುವ ಕಡೆ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನು ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ.

* ಕೋವಿಡ್ ಪರೀಕ್ಷೆ ಹೆಚ್ಚು ಪ್ರಮಾಣದಲ್ಲಿ ಕೈಗೊಂಡಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ.

ಪಾಸಿಟಿವ್ ರೇಟ್ ಕಡಿಮೆಯಾಗಿದೆ

ಪಾಸಿಟಿವ್ ರೇಟ್ ಕಡಿಮೆಯಾಗಿದೆ

* ಜುಲೈಗೆ ಹೋಲಿಕೆ ಮಾಡಿದರೆ ಆಗಸ್ಟ್ ತಿಂಗಳಲ್ಲಿ ಅಂಕಿ ಅಂಶಗಳ ಪ್ರಕಾರ ಶೇ 10ರಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ. ರ‍್ಯಾಪಿಡ್‌ ಆ್ಯಂಟಿಜೆನ್ ಪರೀಕ್ಷೆ ಶೇ 9ರಷ್ಟು ಆಗಿದೆ. ಆರ್ ಟಿ ಪಿಸಿಆರ್ ಶೇ.10 ಆಗಿದೆ. ಪಾಸಿಟಿವ್ ರೇಟ್ ಕಡಿಮೆಯಾಗಿದೆ.

* ಬೆಂಗೂರು ನಗರದಲ್ಲಿನ ಸಾವಿನ ಪ್ರಮಾಣ ಶೇ.1.52% ಆಗಿದೆ. ಕಂಟೈನ್ಮೆಂಟ್ ವಲಯದಲ್ಲಿ ಎರಡು ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ. 100 ಮೀಟರ್ ವ್ಯಾಪ್ತಿಯಲ್ಲಿ 1 ಅಥವ 2 ಪ್ರಕರಣ ಇದ್ದರೆ ಬ್ಯಾರಿಕೇಡ್ ಹಾಕುವುದಿಲ್ಲ.

ಅಕ್ಕ-ಪಕ್ಕದ ಮನೆಗಳಿಗೆ ಮಾಹಿತಿ

ಅಕ್ಕ-ಪಕ್ಕದ ಮನೆಗಳಿಗೆ ಮಾಹಿತಿ

* ಬಿಬಿಎಂಪಿ ವ್ಯಾಪ್ತಿಯಲ್ಲಿ 17,159 ಪ್ರಕರಣಗಳಲ್ಲಿ 1 ಅಥ 2 ಪಾಸಿಟಿವ್ ಪ್ರಕರಣ ಒಂದು ಪ್ರದೇಶದಲ್ಲಿ ವರದಿಯಾಗಿದೆ. ಅಲ್ಲಿ ಬ್ಯಾರಿಕೇಡ್ ಹಾಕಿಲ್ಲ. ಒಂದೇ ಕಡೆ 3 ಪ್ರಕರಣಗಳಿರುವ ಸಂಖ್ಯೆ 1018.

* ಕೋವಿಡ್ ಸೋಂಕಿತರು ಇರುವ ಮನೆಗೆ ಪೋಸ್ಟರ್ ಹಾಕಲಾಗುತ್ತಿತ್ತು. ಇನ್ನು ಪೋಸ್ಟರ್ ಹಾಕುವುದಿಲ್ಲ. ಅಕ್ಕ ಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡಲಾಗುತ್ತದೆ.

ಡೆತ್ ಆಡಿಟ್ ಮಾಡಲಾಗುತ್ತಿದೆ

ಡೆತ್ ಆಡಿಟ್ ಮಾಡಲಾಗುತ್ತಿದೆ

* ಪಾಲಿಕೆ ವತಿಯಿಂದ ಖಾಸಗಿ ಆಸ್ಪತ್ರೆಗಳಿಗೆ 24,368 ಕೋವಿಡ್ ಪೀಡಿತರನ್ನು ದಾಖಲು ಮಾಡಲಾಗಿತ್ತು. ಕೋವಿಡ್ ಪೀಡಿತರಾಗಿ ಹೆಚ್ಚು ಸಾವು ಸಂಭವಿಸಿರುವ ಆಸ್ಪತ್ರೆಗಳಿಗೆ ಪಾಲಿಕೆ ಸಮಿತಿ ತೆರಳಿ ಡೆತ್ ಆಡಿಟ್ ವರದಿ ಪಡೆಯಲಿದೆ.

* ಐಸಿಎಂಆರ್‌ನಿಂದ ವರದಿ ಬಂದ ಬಳಿಕ ಸೋಂಕಿತರ ಮನೆಗೆ ತೆರಳಿ ಹೋಂ ಐಸೊಲೇಷನ್ ಸೌಲಭ್ಯ ಪರಿಶೀಲಿಸಲಾಗುವುದು. ಕುಶಲ ಆಪ್ ನಲ್ಲಿ ಮಾಹಿತಿ ಅಪ್ ಲೋಡ್ ಮಾಡಲಾಗುತ್ತದೆ.

English summary
BBMP commissioner N. Manjunath Prasad said that no poster will be displayed in the house where Covid 19 cases found in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X