ನೋ ಪಾರ್ಕಿಂಗ್ ವಾಹನ ಟೋಯಿಂಗ್: ಸಂಚಾರ ಪೊಲೀಸರ ಮೇಲೆ ಕಲ್ಲು ತೂರಿ ಫೈಟಿಂಗ್ !
ಬೆಂಗಳೂರು, ಆ. 19: " ಲೇ.. ಹೊಡೆಯೋ ಅವನಿಗೆ.. ನೋಡು ಕ. ಸೂ ಮಗ ಡ್ರೈವರ್‌ನ ಹಿಡ್ಕೋ.. ಓಡ್ತಿದ್ದಾನೆ ನೋಡು.. ಹಿಡ್ಕೊಂಡು ಬಾರಿಸು... ಹಬ್ಬದ ದಿನವೂ ಗಾಡಿ ಎತ್ತಿ ವಸೂಲಿಗೆ ಬಂದ್ರಾ ? ಅಲ್ಲಿ ಟೋಯಿಂಗ್ ಹುಡುಗರನ್ನು ಹಿಡ್ಕೊಂಡು ಬಾರಿಸು.. ಹೀಗೆ ಕೆಟ್ಟ ಪದಗಳಿಂದ ಥಳಿಸುತ್ತಿರುವರು ಹಲಸೂರು ಸಮೀಪದ ಸಾರ್ವಜನಿಕರು. ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಾಹನವನ್ನು ಟೋಯಿಂಗ್ ಮಾಡಲು ತೆರಳಿದ ಟೋಯಿಂಗ್ ವಾಹನ ಚಾಲಕ ಹಾಗೂ ಸಿಬ್ಬಂದಿಗೆ ಹಲಸೂರು ಜನರು ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಟೋಯಿಂಗ್ ವಾಹನದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ಕೆಳಗೆ ಇಳಿಸಿ ತಳ್ಳಾಡಿ ಟೋಯಿಂಗ್ ವಾಹನ ಸಿಬ್ಬಂದಿಯನ್ನೇ ಓಡಿಸಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಬೆಂಗಳೂರಿನ ಹೃದಯಭಾಗದಲ್ಲಿರುವ ಹಲಸೂರು ಸಮೀಪ. ನಾಳೆ ವರ ಮಹಾಲಕ್ಷ್ಮೀ ಹಬ್ಬ. ಹಬ್ಬಕ್ಕೆ ಬೇಕಿರುವ ವಸ್ತು ಖರೀದಿಸಲು ಜನ ಸಾಮಾನ್ಯರು ಹೊರ ಬಂದಿದ್ದಾರೆ. ಹಲಸೂರು, ಕೆ.ಆರ್. ಪುರ, ಕೆ.ಆರ್. ಮಾರ್ಕೆಟ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ಯಶವಂತಪುರ ಮತ್ತಿತರ ಪ್ರದೇಶದಲ್ಲಿ ನಿರ್ವಹಣೆ ಮಾಡಲಾಗದಷ್ಟು ಜನ ಸೇರಿದ್ದಾರೆ. ಸಿಕ್ಕ ಸಿಕ್ಕಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಎಂದಿನಂತೆ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವ ವಾಹನಗಳ ವಿರುದ್ಧ ಕಾರ್ಯಾಚರಣೆಗೆ ಹಲಸೂರು ಸಂಚಾರ ಪೊಲೀಸ್ ಠಾಣೆಯ ಟೈಗರ್ ವಾಹನ ನುಗ್ಗಿದೆ. ಹಲಸೂರು ಸಮೀಪ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಟೋಯಿಂಗ್ ಸಿಬ್ಬಂದಿ ಎಳೆಯುವಷ್ಟರಲ್ಲಿ ಒಬ್ಬ ಬಂದು ಜಗಳ ತೆಗೆದಿದ್ದಾನೆ. ಈ ವೇಳೆ ಸುತ್ತಮುತ್ತಲಿನ ಜನರು ಜಮಾಯಿಸಿ ಟೋಯಿಂಗ್ ಸಿಬ್ಬಂದಿ ಮೇಲೆ ಎರಗಿದ್ದಾರೆ. ಜನ ಸೇರುವುದನ್ನು ನೋಡಿದ ವಾಹನ ಸವಾರನೊಬ್ಬ ಟೈಗರ್ ವಾಹನ ಹತ್ತಿ ಸಿಬ್ಬಂದಿಯನ್ನು ಕೆಳಗಿಳಿಸಿ ಹಲ್ಲೆ ಮಾಡಿದ್ದಾನೆ. ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾನೆ. ಸಮೀಪದಲ್ಲಿಯೇ ಇದ್ದ ಟೋಯಿಂಗ್ ಸಿಬ್ಬಂದಿಯೊಬ್ಬನಿಗೆ ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಓಡಿದ ಟೋಯಿಂಗ್ ಹುಡುಗರನ್ನು ಅಲ್ಲಿಂದ ಅಟ್ಟಾಡಿಸಿ ಹಲ್ಲೆ ಮಾಡಿರುವ ದೃಶ್ಯಗಳು ಒನ್ಇಂಡಿಯಾ ಕನ್ನಡಕ್ಕೆ ಲಭ್ಯವಾಗಿವೆ.

ಪೊಲೀಸ್ ಸಿಬ್ಬಂದಿಗೆ ಎಳೆದಾಡಿ ನಿಂದನೆ
ಇನ್ನು ಟೋಯಿಂಗ್ ವಾಹನ ಓಡಿಸುತ್ತಿದ್ದ ಚಾಲಕನನ್ನು ಎಳೆದು ಥಳಿಸಿದ್ದಾರೆ. ಹಬ್ಬದ ದಿನವೂ ಗಾಡಿ ಎತ್ತೋಕೆ ಬರ್ತೀರಾ ಸೂ... ಮಕ್ಕಳಾ, ಆ ಚಾಲಕ ಸೂ... ಮಗ ಹೋಗ್ತಿದ್ದಾನೆ ಹಿಡ್ಕೊಳ್ಳಿ ಎಂದು ಕೆಟ್ಟ ಪದಗಳಿಂದ ನಿಂದನೆ ಮಾಡಿ ಸಾರ್ವಜನಿಕವಾಗಿ ಥಳಿಸಿದ್ದಾರೆ. ಟೋಯಿಂಗ್ ವಾಹನದಲ್ಲಿ ಕೂತಿದ್ದ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಯನ್ನು ಕೆಳೆಗೆ ಇಳಿಸಿ ಎಳೆದಾಡಿ ಜಗಳ ತೆಗೆದಿದ್ದಾರೆ. ಒಬ್ಬನಿಂದ ಆರಂಭವಾದ ಗಲಾಟೆ ಸುಮಾರು ಅರ್ಧ ತಾಸು ಬೀದಿ ರಂಪಕ್ಕೆ ಕಾರಣವಾಗಿತ್ತು. ಅಲ್ಲಿದ್ದವರು ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಕೂಗುತ್ತಿದ್ದ ಕಾರಣ ಅಕ್ಕ ಪಕ್ಕ ನಿಂತಿದ್ದವರು ಜಮಾಯಿಸಿ ಹಲ್ಲೆಗೆ ಫುಸಲಾಯಿಸಿರುವ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಸಾರ್ವಜನಿಕರು ಥಳಿತದಿಂದ ತಪ್ಪಿಸಿಕೊಳ್ಳಲು ಪೊಲೀಸ್ ಸಿಬ್ಬಂದಿ ಓಡಿ ಹೋಗಿದ್ದಾರೆ.
|
ಹಲ್ಲೆಕೋರರ ವಿರುದ್ಧ ದೂರು
ಟೋಯಿಂಗ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗಳ ದೃಶ್ಯಗಳನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗುವುದು. ಸಂಚಾರ ಪೊಲೀಸ್ ಸಿಬ್ಬಂದಿ ಹಾಗೂ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಮಾರಣಾಂತಿಕ ಹಲ್ಲೆ, ಅವಾಚ್ಯ ಪದಗಳಿಂದ ನಿಂದನೆ ಹಾಗೂ ಸಾರ್ವಜನಿಕ ಆಸ್ತಿಗೆ ನಷ್ಟವುಂಟು ಮಾಡಿದ ಆರೋಪದಡಿ ಕೇಸು ದಾಖಲಿಸಿ ತಪ್ಪಿಸ್ಥರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಮಾಡಿದವರ ದೃಶ್ಯಗಳು ಲಭ್ಯವಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಹಾಗೂ ಸಂಚಾರ ಪೊಲೀಸರ ಸಂಘರ್ಷ
ಸಂಚಾರ ನಿಯಮ ಉಲ್ಲಂಘನೆ ದಂಡ ಹೆಚ್ಚಳದ ನಂತರ ಬೆಂಗಳೂರಿನಲ್ಲಿ ಸಂಚಾರ ಪೊಲೀಸರ ದಂಡ ಪ್ರಯೋಗದ ವಿರುದ್ಧ ಸಾರ್ವಜನಿಕರು ತಿರುಗಿ ಬೀಳುತ್ತಿದ್ದಾರೆ. ಸಿಗ್ನಲ್ ಜಂಪ್ ಮೊಬೈಲ್ ನಲ್ಲಿ ಮಾತನಾಡಿ ಚಾಲನೆ ಮಾಡುವುದು, ಹೆಚ್ಚು ಸ್ಪೀಡ್ ಆಗಿ ವಾಹನ, ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಾರ್ವಜನಿಕರು ಚಕಾರ ಎತ್ತದೇ ದಂಡ ಪಾವತಿ ಮಾಡುತ್ತಿದ್ದಾರೆ. ನೋ ಪಾರ್ಕಿಂಗ್ ಮತ್ತು ಟೋಯಿಂಗ್ ವಿಚಾರ ಬಂದರೆ ಸಾರ್ವಜನಿಕರ ಹಾಗೂ ಸಂಚಾರ ಪೊಲೀಸರ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪದೇ ಪದೇ ಸಂಚಾರ ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಟೋಯಿಂಗ್ ಹಾಗೂ ನೋ ಪಾರ್ಕಿಂಗ್ ದಂಡದ ವಿರುದ್ಧ ಇರುವ ಅಸಹನೆಯನ್ನು ಟೋಯಿಂಗ್ ಮಾಡುವರ ಮೇಲೆ ಘರ್ಷಣೆಗೆ ಇಳಿಯುವ ಮೂಲಕ ಹೊರ ಹಾಕುತ್ತಿದ್ದಾರೆ.

ಟೋಯಿಂಗ್ ಬಗ್ಗೆ ಯಾಕೆ ಸಿಟ್ಟು?
ನೋ ಪಾರ್ಕಿಂಗ್ ಮಾಡಿದ ದ್ವಿಚಕ್ರ ವಾಹನ ಟೋಯಿಂಗ್ ಮಾಡಿದರೆ 1650 ರೂ. ದಂಡ ವಸೂಲಿ ಮಾಡಲಾಗುತ್ತದೆ. ಅದರಲ್ಲಿ 325 ರೂ. ಟೋಯಿಂಗ್ ಮಾಡುವ ವಾಹನ ಮಾಲೀಕರಿಗೆ ಹೋಗುತ್ತದೆ. ನೋ ಪಾರ್ಕಿಂಗ್ ದಂಡ 1000 ಜತೆಗ ಟೋಯಿಂಗ್ ಮಾಡಿದ್ದಕ್ಕೆ 325 ರೂ. ಸರ್ಕಾರಕ್ಕೆ ಪಾವತಿಯಾಗುತ್ತದೆ. ನೋ ಪಾರ್ಕಿಂಗ್ ಮಾಡುವ ಕಾರುಗಳಿಗೆ ಒಂದು ಸಲ ಟೋಯಿಂಗ್ ಮಾಡಿದರೆ 2000 ಸಾವಿರಕ್ಕೂ ಹೆಚ್ಚು ದಂಡ ಬೀಳುತ್ತದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳು ಹೆಚ್ಚಿವೆ. ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳಿಗೆ ವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಮಾಡದ ಕಾರ ಎಲ್ಲೆಂದರೆ ಅಲ್ಲಿ ನಿಲ್ಲಿಸಲಾಗುತ್ತದೆ. ನೋ ಪಾರ್ಕಿಂಗ್ ಉಲ್ಲಂಘನೆ ಪೊಲೀಸರಿಗೆ ನಿಯಂತ್ರಿಸಲಾಗದಷ್ಟು ಕಷ್ಟವಾಗಿ ಪರಿಣಮಿಸಿದೆ. ವಾಹನಗಳ ನೋ ಪಾರ್ಕಿಂಗ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟೋಯಿಂಗ್ ಮಾಡಿ ದಂಡ ವಸೂಲಿ ಮಾಡಲಾಗುತ್ತಿದೆ. ದುಬಾರಿ ಮೊತ್ತದ ದಂಡ, ಯಾವುದೇ ಸೂಚನೆ ನೀಡದೇ ಟೋಯಿಂಗ್ ಮಾಡುವ ಸಿಬ್ಬಂದಿ ಮೇಲೆ ಸಾರ್ವಜನಿಕರಲ್ಲಿ ಸಿಟ್ಟು ಮನೆ ಮಾಡಿದೆ.
Recommended Video

ಪರಿಹಾರ ಇಲ್ಲವೇ?
ಕೆಲ ದಿನಗಳ ಹಿಂದಷ್ಟೇ ಟೋಯಿಂಗ್ ಮಾಡಿದ್ದ ವಾಹನದ ಸವಾರನೊಬ್ಬ ಟೋಯಿಂಗ್ ವಾಹನ ಹತ್ತಿ ಹೆಲ್ಮೆಟ್ ನಿಂದ ಹಲ್ಲೆ ಮಾಡುವ ಘಟನೆ ಯಲಹಂಕದಲ್ಲಿ ವರದಿಯಾಗಿತ್ತು. ಈ ದೃಶ್ಯ ಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಹಲ್ಲೆ ಮಾಡಿದ ವ್ಯಕ್ತಿಯನ್ನು ಅನೇಕ ಸಾರ್ವಜನಿಕರು ಸಮರ್ಥನೆ ಮಾಡಿಕೊಂಡು, ಟೋಯಿಂಗ್ ವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವುದನ್ನು ಗಮನಿಸಬಹುದು. ದಿನಕ್ಕೆ ಇಂತಿಷ್ಟು ಖಾಯಂ ಹಣ ಗಳಿಕೆ ಮಾಡಬೇಕೆಂಬ ಉದ್ದೇಶದೊಂದಿಗೆ ಟೋಯಿಂಗ್ ವಾಹನ ಮಾಲೀಕರು ಸಂಚಾರ ಪೊಲೀಸರ ಜತೆ ಶಾಮೀಲಾಗಿ ಮಾಡುವ ಎಡವಟ್ಟುಗಳಿಂದ ಈ ರೀತಿ ಸಂಘರ್ಷಕ್ಕೆ ಕಾರಣವಾಗಿದೆಯೇ ? ಇಲ್ಲವೇ ಟೋಯಿಂಗ್ ವಿರುದ್ಧ ಜನರಿಗೆ ಇರುವ ಸಿಟ್ಟು ಈ ರೀತಿ ಹೊರ ಹಾಕುತ್ತಿದ್ದಾರೆ ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿ ಪರಿಹಾರ ಕಂಡಕುಳ್ಳುವುದಕ್ಕೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳೇ ಉದಾಹರಣೆ.












Click it and Unblock the Notifications