ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನುಮುಂದೆ ರಾತ್ರಿ 11ರಿಂದ ಬೆಳಗ್ಗೆಯವರೆಗೆ ಓಲಾ ಶೇರ್ ಸೇವೆ ಇರಲ್ಲ

|
Google Oneindia Kannada News

ಬೆಂಗಳೂರು, ಏ.13: ನಗರದಲ್ಲಿರುವ ಶೇ.90ರಷ್ಟು ಮಂದಿ ಓಲಾ ಇನ್ನಿತರೆ ಕ್ಯಾಬ್ ಸೇವೆಯನ್ನು ನಂಬಿದ್ದಾರೆ.

ಕಚೇರಿ, ಶಾಲೆ, ಕಾಲೇಜು, ಸಿನಿಮಾ ನೋಡಲು ಹೀಗೆ ಎಲ್ಲಿ ಹೋಗುವುದಾದರೂ ಓಲಾವನ್ನೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ.

ಓಲಾಗೆ ಹೊಡೆತ! ಆರು ತಿಂಗಳು ಕರ್ನಾಟಕದಲ್ಲಿ ಕ್ಯಾಬ್ ನಿಷೇಧ ಓಲಾಗೆ ಹೊಡೆತ! ಆರು ತಿಂಗಳು ಕರ್ನಾಟಕದಲ್ಲಿ ಕ್ಯಾಬ್ ನಿಷೇಧ

ಆದರೆ ರಾತ್ರಿಯಿಂದ ಬೆಳಗ್ಗೆಯವರೆಗೆ ಓಲಾ ಶೇರ್‌ಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆಯವರೆಗೆ ಓಲಾ ಶೇರ್ ಸೇವೆ ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ.

No Ola Share rides from night 11 to morning 6

ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಅವರು ಹೋಗಬೇಕಾಗಿರುವ ಪ್ರದೇಶಗಳಿವೆ ಅವರನ್ನು ತಲುಪಿಸಲು ಓಲಾ ಶೇರ್ ಸೇವೆ ಆರಂಭಿಸಿತ್ತು.

ಇದೀಗ ರಾತ್ರಿಹೊತ್ತು ಪ್ರಯಾಣಿಕರು ಓಲಾ ಶೇರ್‌ ಬಳಕೆ ಮಾಡದೆ ಪ್ರತ್ಯೇಕ ಕ್ಯಾಬ್ ಬುಕ್ ಮಾಡುತ್ತಿರುವ ಕಾರಣ ಚಾಲಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಸಮಯ ವ್ಯರ್ಥ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಓಲಾ ನಿಯಮವನ್ನು ಪಾಲಿಸದ ಕಾರಣ ಅವರ ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿತ್ತು.

ಜನರ ಒತ್ತಾಯಕ್ಕೆ ಮಣಿದು ನಿಷೇಧವನ್ನು ಹಿಂಪಡೆಯಲಾಯಿತೇ ಖಂಡಿತ ಇಲ್ಲ.ಓಲಾ ಕಂಪನಿ ಮೇಲೆ ಮೃದು ಧೋರಣೆ ತೋರಿರುವ ಸಾರಿಗೆ ಇಲಾಖೆ, ನಿಯಮ ಉಲ್ಲಂಘಿಸಿ ಬೈಕ್ ಟ್ಯಾಕ್ಸಿ ಆರಂಭಿಸಿರುವುದಕ್ಕೆ 15 ಲಕ್ಷ ರೂ ದಂಡ ವಿಧಿಸಿದೆ.

ಅಗ್ರಿಗೇಟರ್ಸ್ ಪರವಾನಗಿ ಅಮಾನತು ಆದೇಶವನ್ನು ಹಿಂಪಡೆದಿದೆ. ಓಲಾ ಮುಂದೆಂದೂ ನಿಯಮ ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದೆ.. ಪ್ರಾಧಿಕಾರ ವಿಧಿಸುವ ದಂಡ ಅಥವಾ ಕ್ರಮಕ್ಕೆ ಬದ್ಧ ಎಂದು ತಿಳಿಸಿರುವ ಕಂಪನಿ ಅಮಾನತು ಆದೇಶ ಹಿಂಪಡೆಯಲು ಕೋರಿದೆ.

ನೋಟಿಸ್ ನೀಡಿದ ನಂತರ ಬೈಕ್ ಟ್ಯಾಕ್ಸಿ ಸ್ಥಗಿತ: ಆರು ತಿಂಗಳು ಪರವಾನಗಿ ಅಮಾನತು ಆದೇಶ ನೀಡಿದ ಬೆನ್ನಲ್ಲೇ ಓಲಾ ಕಂಪನಿ ಸಾರಿಗೆ ಇಲಾಖೆಗೆ ವಿವರಣೆ ಸಲ್ಲಿಸಿದೆ.

ಪ್ರಾಯೋಗಿಕವಾಗಿ ಬೈಕ್ ಟ್ಯಾಕ್ಸಿ ಪ್ರಾರಂಭಿಸಿದ್ದೆವು. ನೋಟಿಸ್ ನೀಡಿದ ಬೆನ್ನಲ್ಲೇ ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

English summary
Citing poor demand for shared rides, taxi aggregator Ola has stopped the service between 11 p.m and 6 a.m. The decision, however, has not gone down well with passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X