ನಾಳೆಯಿಂದ ಮೂರು ದಿನಗಳ ಕಾಲ ನೇರಳೆ ಮೆಟ್ರೋ ಬಂದ್

ಬೆಂಗಳೂರು, ಡಿಸೆಂಬರ್ 27: ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದ ಟ್ರಿನಿಟಿ ವೃತ್ತ ಬಳಿ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಸ್ತಿ ಕಾರ್ಯಕ್ಕಾಗಿ ಮೂರು ದಿನಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ.

ಎಂಜಿ ರಸ್ತೆಯಿಂದ ಇಂದಿರಾನಗರದವರೆಗೆ ಮೆಟ್ರೋ ಸ್ಥಗಿತಗೊಳ್ಳಲಿದ್ದು, ಎಂಜಿ ರಸ್ತೆಯಿಂದ ಬಿಎಂಟಿಸಿ ಉಚಿತ ಸೇವೆ ದೊರೆಯಲಿದೆ.

ಕಾಂಕ್ರೀಟ್ ಹಾಕುವ ಕಾಮಗಾರಿ ಶುಕ್ರವಾರ ಸಂಜೆಯಿಂದ ಆರಂಭವಾಗಲಿದೆ. ಈ ಸಮಯದ ನಂತರ ಎಂಜಿ ರಸ್ತೆ-ಹಲಸೂರು-ಇಂದಿರಾನಗರ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

No metro service between MG road to Indiranagar

ಡಿ.29 ಮತ್ತು 30ರಂದು ಇಡೀ ದಿನ ರೈಲು ಸಂಚಾರ ಇರುವುದಿಲ್ಲ ಶುಕ್ರವಾರ ನಾಯಂಡಹಳ್ಳಿಯ ಮೈಸೂರು ರಸ್ತೆ ನಿಲ್ದಾಣದಿಂದ ಸಂಜೆ 7.30ಕ್ಕೆ ಹೊರಡುವ ರೈಲು ಬೈಯಪ್ಪನಹಳ್ಳಿವರೆಗೆ ಹೋಗಲಿದೆ. ಇದಾದ ಬಳಿಕ ಹೊರಡುವ ರೈಲು ಎಂಜಿ ರಸ್ತೆ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.

ಬೈಯಪ್ಪನಹಳ್ಳಿಯಿಂದ ಸಂಜೆ 7.45ಕ್ಕೆ ಹೊರಡುವ ರೈಲು ಮೈಸೂರು ರಸ್ತೆವರೆಗೆ ಹೋಗಲಿವೆ. ಈ ಸಮಯ ನಂತರ ಹೊರಡುವ ರೈಲು ಇಂದಿರಾನಗರ ನಿಲ್ದಾಣಕ್ಕೆ ಸೇವೆ ಸ್ಥಗಿತಗೊಳ್ಳಲಿದೆ. ಕಬ್ಬನ್‌ಪಾರ್ಕ್ ನಿಂದ ಬೈಯಪ್ಪನಹಳ್ಳಿಗೆ ಡಿ.28ರಂದು ರಾತ್ರಿ 8 ರಿಂದ 11ರವರೆಗೆ ಬಿಎಂಟಿಸಿ ಉಚಿತ ಸೇವೆ ದೊರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+