ಬೆಂಗಳೂರಿಗರಿಗೆ ಡಬ್ಬಲ್ ಡೆಕ್ಕರ್ ಬಸ್ ಭಾಗ್ಯ ಸದ್ಯಕ್ಕಿಲ್ಲ

ಬೆಂಗಳೂರು, ಡಿಸೆಂಬರ್ 26: ಸೂಕ್ತ ತಯಾರಿಕರು ಸಿಗದೆ ಡಬ್ಬಲ್ ಡೆಕ್ಕರ್ ಬಸ್ ಸದ್ಯಕ್ಕೆ ಕನಸಾಗಿಯೇ ಉಳಿಯಲಿದೆ. ಡಬಲ್ ಡೆಕ್ಕರ್ ಬಸ್ ಹೊಂದಲು ಬಿಎಂಟಿಸಿ ಹಾಕಿಕೊಂಡಿದ್ದ ಡಿಸೆಂಬರ್ ಅಂತ್ಯದ ಸ್ವಯಂ ಗಡುವು ಮುಗಿಯುತ್ತಾ ಬಂದಿದೆ ಆದರೂ ಡಬ್ಬಲ್ ಡೆಕ್ಕರ್ ತಯಾರಿಗೆ ಸಾದ್ಯವಾಗಿಲ್ಲ.

ಐದು ಡಬಲ್ ಡೆಕ್ಕರ್ ಬಸ್ ಖರೀದಿಗೆ ನಿಗಮದ ಆಡಳಿತ ಮಂಡಳಿ ಜೂನ್ ನಲ್ಲಿ ಒಪ್ಪಿಗೆ ನೀಡಿತ್ತು. ವರ್ಷಾಂತ್ಯದೊಳಗೆ ಬಸ್ ಖರೀದಿಸಲು ಉದ್ದೇಶಿಸಲಾಗಿತ್ತು. 1970 ಮತ್ತು 80 ರ ಅವಧಿಯಲ್ಲಿ ಡಬಲ್ ಡೆಕ್ಕರ್ ಬಸ್ ಗಳು ಬೆಂಗಳೂರಿನ ರಸ್ತೆಗಳಲ್ಲಿ ಕಾಣಸಿಗುತ್ತಿದ್ದವು. 1972 ರ ಹೊತ್ತಿಗೆ ಅವುಗಳು ಮಾಯವಾದವು. ಸುಸ್ಥಿತಿಯಲ್ಲಿದ್ದ ಒಂದು ಬಸ್ಸನ್ನು ನಗರ ದರ್ಶನ ಉದ್ದೇಶಕ್ಕೆ 2014 ರವರೆಗೂ ಉಪಯೋಗಿಸಲಾಗುತ್ತಿತ್ತು.

No manufacturers for double decker bus

ಡಬಲ್ ಡೆಕ್ಕರ್ ಬಸ್ ಬಂದಲ್ಲಿ ನಗರಕ್ಕೆ ಹಾಗೂ ಬಿಎಂಟಿಸಿಗೂ ಕಳೆ ಬರಲಿದೆ. ಪುಣೆ ಮೂಲದ ಸಂಸ್ಥೆ ನಮಗೆ ಕೆಲ ಮಾದರಿಗಳನ್ನು ತೋರಿಸಿತ್ತು. ಆ ಸಂಸ್ಥೆ ನಿರ್ಮಿಸಿದ ಬಸ್ ಗೋವಾದಲ್ಲಿ ಸಂಚರಿಸುತ್ತಿದೆ. ಕೆಳಭಾಗದ ಡೆಕ್ ಏರ್ ಕಂಡಿಶನರ್ ವ್ಯವಸ್ಥೆ ಹೊಂದಿದ್ದರೆ ಮತ್ತು ಮೇಲ್ಭಾಗ ತೆರೆದ ಛಾವಣಿಯ ಮಾದರಿಯಲ್ಲಿತ್ತು.

ಇಂತಹ ಬಸ್ಸುಗಳು ಬಿಎಂಟಿಸಿಗೆ ಆದಾಯವನ್ನು ತಂದುಕೊಡಲಿದೆ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಮಾಹಿತಿ ನೀಡಿದರು. ಬಸ್ ಖರೀದಿ ಸಂಬಂಧ ಪುಣೆ ಮೂಲದ ಸಂಸ್ಥೆಯೊಂದಿಗೆ ನಿಗಮ ಮಾತುಕತೆ ನಡೆಸುತ್ತಿದೆ. ನಾವು ಇಂತಹ ಬಸ್ ಗಳನ್ನು ಹುಟ್ಟುಹಬ್ಬ ಆಚರಣೆಯಂತಹ ಕಾರ್ಯಕ್ರಮಗಳಿಗೆ ಬಾಡಿಗೆ ಕೊಡಲು ಉದ್ದೇಶಿಸಿದ್ದೇವೆ. ನಗರದಲ್ಲಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆಗೆ ಸಾರಿಗೆ ಇಲಾಖೆಯಿಂದ ಶೀಘ್ರ ಅನುಮತಿ ಪಡೆಯಲಾಗುವುದು ಎಂದು ಹೇಳಿದರು.

ಬಿಎಂಟಿಸಿಯು ಸದ್ಯ ಬೆಂಗಳೂರು ದರ್ಶನ್ (ನಗರದ ಪ್ರವಾಸಿ ತಾಣಗಳ ವೀಕ್ಷಣೆ ಸೇವೆ) ಸೇವೆಗೆ ಏರ್ ಕಂಡೀಶನರ್ ಇರುವ ಬಸ್ ಬಳಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಪ್ಲಿಕೇಷನ್ ಆಧರಿಸಿ ಕ್ಯಾಬ್ ಸೇವೆ ನೀಡುವ ಸಂಸ್ಥೆಗಳು ಪ್ಯಾಕೇಜ್ ಪ್ರವಾಸಗಳನ್ನು ಆರಂಭಿಸಿರುವುದರಿಂದ ಮೊದಲಿನ ಬೇಡಿಕೆಯಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+