ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಸದಸ್ಯರಿಗೆ ಲಕ್ಷುರಿ ಭೋಜನ ಬದಲು ಇಂದಿರಾ ಕ್ಯಾಂಟೀನ್ ಊಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಬಿಬಿಎಂಪಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೇಯರ್ ಗಂಗಾಂಬಿಕೆ ಇನ್ನೊಂದು ಹೆಜ್ಜೆ ಮುಂದಿರಿಸಿದ್ದು, ಇದೀಗ ಕಾರ್ಪೊರೇಟರ್‌ಗಳಿಗೆ ಲಕ್ಷುರಿ ಹೋಟೆಲ್ ಊಟ ಬೇಡ ಬದಲಾಗಿ ಇಂದಿರಾ ಕ್ಯಾಂಟೀನ್ ಊಟ ಮಾಡುವಂತೆ ಸೂಚಿಸಿದ್ದಾರೆ.

ಇಷ್ಟುದಿನ ಕಾರ್ಪೊರೇಟರ್ ಗಳಿಗೆ ಪ್ರಿ ಊಟವನ್ನು ಲಕ್ಷುರಿ ಹೋಟೆಲ್‌ಗಳಿಂದ ತರಿಸಿಕೊಳ್ಳಲಾಗುತ್ತಿತ್ತು, ಪ್ರತಿ ಊಟಕ್ಕೆ 280ರೂ ವೆಚ್ಚವಾಗುತ್ತಿತ್ತು, ಇದರಿಂದ ಪಾಲಿಕೆಗೆ ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತಿತ್ತು ಹಾಗಾಗಿ ಈ ದುಂದುವೆಚ್ಚವನ್ನು ತಡೆಯಲು ಮೇಯರ್ ನಿರ್ಧರಿಸಿದ್ದು ಇನ್ನುಮುಂದೆ ಇಂದಿರಾ ಕ್ಯಾಂಟೀನ್ ಊಟವನ್ನು ಮಾಡಲು ನಿರ್ದೇಶನ ನೀಡಿದ್ದಾರೆ.

ಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನುಶೀಘ್ರದಲ್ಲೇ ಬದಲಾಗಲಿದೆ ಇಂದಿರಾ ಕ್ಯಾಂಟೀನ್ ಮೆನು

ಇಂದಿರಾ ಕ್ಯಾಂಟೀನ್ ಊಟದ ಜತೆಗೆ ಚಪಾತಿ, ಮುದ್ದೆ, ಸ್ವೀಟ್ ನೀಡಲು ನಿರ್ಧರಿಸಿದ್ದಾರೆ, ಇಂದಿರಾ ಕ್ಯಾಂಟೀನ್ ಊಟಕ್ಕೆ ಮಾಸಿಕ ಕೇವಲ 5 ಸಾವಿರ ರೂ ಖರ್ಚಾಗುತ್ತದೆ. ಇದರ ಜತೆಗೆ ಮುದ್ದೆ, ಸೊಪ್ಪಿನ ಸಾರು, ಚಪಾತಿ, ಗ್ರೇವಿ, ಅನ್ನ ರಸಂ, ಸಾಂಬಾರ್, ಮುದ್ದೆ, ಸೊಪ್ಪಿನ ಸಾರು, ಒಂದು ಬಗೆಯ ಸ್ವೀಟ್ ನೀಡಲಾಗುತ್ತದೆ.

No luxury meals for corporators

ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್ ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್

ಬಿಬಿಎಂಪಿಗೆ ತೆರಿಗೆ ಹಣ ಪಾವತಿ ಮಾಡದವರ ಸಂಖ್ಯೆಯೂ ಹೆಚ್ಚಿದೆ, ಇದಕ್ಕೆ ವಿಶಿಷ್ಟ ರೀತಿಯಲ್ಲಿ ತಮಟೆ ಚಳವಳಿ ಮೂಲಕ ತೆರಿಗೆ ವಸೂಲಿ ಮಾಡಲು ಮುಂದಾಗಿದೆ, ಮೇಯರ್ ಹಾಗೂ ಆಯುಕ್ತರಿಗೆ ನೀಡುತ್ತಿದ್ದ ಮನೆಯನ್ನೂ ಕೂಡ ಮೇಯರ್ ನಿರಾಕರಿಸಿದ್ದಾರೆ. ಒಟ್ಟಿನಲ್ಲಿ ಯಾವ ಯಾವ ವಿಧದಿಂದ ಪಾಲಿಕೆಯ ಆದಾಯ ಗಳಿಕೆ ಹಾಗೂ ಉಳಿಕೆ ಮಾಡಬಹುದು ಎನ್ನುವ ಆಲೋಚನೆಯಲ್ಲಿ ಗಂಗಾಂಬಿಕೆ ತೊಡಗಿದ್ದಾರೆ.

English summary
Mayor Gangambike has decided to cut down luxury lunch for corporators during council meeting and to provide Indira canteen food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X