ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್‌ ನಿಗಮಗಳ ಸಹಾಯಕ ಎಂಜಿನಿಯರ್ ಹುದ್ದೆ: ನೇರ ನೇಮಕಾತಿ ಇಲ್ಲ

|
Google Oneindia Kannada News

ಬೆಂಗಳೂರು, ಜನವರಿ 06: ವಿದ್ಯುತ್‌ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2 ಸಾವಿರ ಇಂಜನೀಯರುಗಳ ಭವಿಷ್ಯದ ದೃಷ್ಟಿಯಿಂದ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರುಗಳ ಹುದ್ದೆಗೆ ನೇರ ನೇಮಕಾತಿಯನ್ನು ರದ್ದುಪಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ನಗರದ ಕರ್ನಾಟಕ ವಿದ್ಯುತ್‌ ಶಕ್ತಿ ಮಂಡಳಿ ಎಂಜಿನಿಯರ್‌ಸ ಸಂಘದ ವತಿಯಿಂದ ಆಯೋಜಿಸಲಾದ 'ಸುವರ್ಣ ಮಹೋತ್ಸವ ಸಂಸ್ಕರಣಾ ಉಪನ್ಯಾಸ' ಹಾಗೂ '2020ರ ತಾಂತ್ರಿಕ ದಿನಚರಿ ಮತ್ತು ಕವಿಪ್ರನಿನಿಯ 2020' ರ ಕ್ಯಾಲೆಂಡ್‌ ಬಿಡುಗಡೆ ಸಮಾರಂಭದಲ್ಲಿ ತಾಂತ್ರಿಕ ದಿನಚರಿ ಹಾಗೂ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿದರು.

ಕೆಪಿಟಿಸಿಎಲ್ ನೇಮಕಾತಿ; ಬೆಂಗಳೂರಲ್ಲಿ ಕೆಲಸಕೆಪಿಟಿಸಿಎಲ್ ನೇಮಕಾತಿ; ಬೆಂಗಳೂರಲ್ಲಿ ಕೆಲಸ

ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2 ಸಾವಿರ ಎಂಜಿನಿಯರ್‌ಗಳ ಭವಿಷ್ಯದ ದೃಷಿಯಿಂದ ಸಹಾಯಕ ಕಾರ್ಯನಿರ್ವಹಕ ಇಂಜನೀರುಗಳ ಹುದ್ದೆಗೆ ನೇರ ನೇಮಕಾತಿ ರದ್ದುಪಡಿಸಿ, ಸುಮಾರು 9 ರಿಂದ 13 ವರ್ಷಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಇಂಜನೀಯರುಗಳಿಗೆ ಪದೊನ್ನತಿ ನೀಡಲು ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ನಿರ್ಧಾರವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿಗಳ ತಿಳಿಸಿದರು.

No Direct Recruitment For KPTCL Assistance Engineer Job

4475 ಡಿ.ಗ್ರೂಪ್ ಹುದ್ದೆಗಳ ಭರ್ತಿಗೆ ಕ್ರಮ: ಪ್ರಭು ಚೌಹಾಣ್4475 ಡಿ.ಗ್ರೂಪ್ ಹುದ್ದೆಗಳ ಭರ್ತಿಗೆ ಕ್ರಮ: ಪ್ರಭು ಚೌಹಾಣ್

ಇದರಿಂದ ರಾಜ್ಯದ ಜನತೆಗೆ ಹಾಗೂ ನಿಗಮಗಳೀಗೆ ಹೆಚ್ಚಿನ ಅನುಕೂಲ ಆಗುವುದರ ಜೊತೆಗೆ ರಾಜ್ಯಾದ್ಯಂತ ಏಕರೂಪದ ಕಾಯಿದೆಯನ್ನು ಕಾನೂನು ಮತ್ತು ನೀತಿ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. ಮತ್ತು ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ವಿದ್ಯುತ್‌ ವಿತರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಬೇಡಿಕೆಗಳ ಬಗ್ಗೆ ಮುಂದಿನ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದರು.

No Direct Recruitment For KPTCL Assistance Engineer Job

ಕೇಂದ್ರದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಖಾಲಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಕೇಂದ್ರದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಖಾಲಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್

ಶಿಕ್ಷಣ ತಜ್ಞರಾದ ಡಾ.ಗುರುರಾಜ್‌ ಕರಜಗಿ ಅವರು ಸುವರ್ಣ ಮಹೋತ್ಸವ ಸಂಸ್ಕರಣಾ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಡಾ.ಎನ್‌ ಮಂಜುಳ, ಕರ್ನಾಟಕ ವಿದ್ಯುತ್‌ ಮಂಡಳಿ ಇಂಜನೀಯರುಗಳ ಸಂಘದ ಅಧ್ಯಕ್ಷರಾದ ಶಿವಪ್ರಕಾಶ್‌.ಟಿ.ಎಂ ಸೇರಿದಂತೆ ಹಲವರು ಭಾಗವಹಿಸಿದ್ದರು.

English summary
CM Yediyurappa today announce that there will be no direct recruitment for assistance engineer job in KPTCL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X