Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಬಿ ಖಾತೆ ಸೈಟ್‌ಗಳಿಗೆ ಮುಕ್ತಿ; ಇದು ಅಕ್ರಮ ಸಕ್ರಮವಾ?

ಬೆಂಗಳೂರು, ಏ. 26: ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದಂತೆ ನಗರದಲ್ಲಿರುವ ಎಲ್ಲಾ ನಿವೇಶನಗಳಿಗೂ ಏಕರೀತಿಯ ಖಾತೆ ದಾಖಲೆಗಳನ್ನ ನೀಡಲು ಬಿಬಿಎಂಪಿ ಸಜ್ಜಾಗಿದೆ. ಅಂದರೆ ಬೆಂಗಳೂರಿನ ನಿವೇಶನಗಳಲ್ಲಿ ಎ ಖಾತೆ ಮತ್ತು ಬಿ ಖಾತೆ ಎಂದು ವರ್ಗೀಕರಣ ಇರುವುದಿಲ್ಲ. ಬಿ ಖಾತೆ ಇರುವ ನಿವೇಶನಗಳನ್ನ ಎ ಖಾತೆಗೆ ಪರಿವರ್ತಿಸುವ ಕೆಲಸವನ್ನು ಮಾಡಲಾಗುತ್ತದೆ. ನಗರದಲ್ಲರುವ ಎಲ್ಲಾ ಆಸ್ತಿಗಳಿಗೂ ಖಾತೆ ಮತ್ತು ಪಿಐಡಿ ನಂಬರ್ ಒದಗಿಸುವಂತೆ ಸರಕಾರದಿಂದ ಬಿಬಿಎಂಪಿಗೆ ಸೂಚನೆ ರವಾನೆಯಾಗಿದೆ.

ರೆವೆನ್ಯೂ ಭೂಮಿಯಲ್ಲಿ ಮನೆಗಳನ್ನ ಕಟ್ಟಿಕೊಂಡು ಬಿ ಖಾತೆ ಹೊಂದಿರುವವರು ನಿರ್ದಿಷ್ಟ ಮೊತ್ತದಷ್ಟು ಬೆಟರ್‌ಮೆಂಟ್ ಶುಲ್ಕ ಪಾವತಿಸಿ ಎ ಖಾತೆ ಸರ್ಟಿಫಿಕೇಟ್ ಪಡೆಯಬಹುದು. ಈ ಕ್ರಮದಿಂದ ಬೆಂಗಳೂರಿನಲ್ಲಿರುವ 6.16 ಲಕ್ಷ ರೆವೆನ್ಯೂ ನಿವೇಶನಗಳ ಮಾಲೀಕರಿಗೆ ಅನುಕೂಲವಾಗುತ್ತದೆ. ಈ ನಿವೇಶನಗಳ ಮೌಲ್ಯ ಹೆಚ್ಚಳವಾಗುತ್ತದೆ, ಜೊತೆಗೆ ಈ ನಿವೇಶನದ ದಾಖಲೆಗಳ ಮೇಲೆ ಬ್ಯಾಂಕ್ ಲೋನ್ ಕೂಡ ಸಿಗುತ್ತದೆ.

ಏಪ್ರಿಲ್ 13ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸುವ ಈ ಕಾರ್ಯದಿಂದ ಬಿಬಿಎಂಪಿಗೆ 1000 ಕೋಟಿ ರೂ ಆದಾಯ ಹರಿದುಬರುವ ನಿರೀಕ್ಷೆ ಇದೆ.

No B khatas in Bengaluru, Converting into A Khata is not Akrama Sakrama

ಖಾತೆ ಪರಿವರ್ತನೆಯಾದರೆ ನಿವೇಶನ ಸಕ್ರಮವಾಗುತ್ತಾ?

ರೆವೆನ್ಯೂ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ನಿವೇಶನಗಳಿಗೆ ಎ ಖಾತೆ ಸಿಕ್ಕಿದರೆ ಅದು ಸಕ್ರಮವಾಗುತ್ತದಾ ಎಂದು ಹಲವರಿಗೆ ಗೊಂದಲವಾಗಿದೆ. ಆದರೆ, ಸರಕಾರದ ಅಕ್ರಮ ಸಕ್ರಮ ಯೋಜನೆಗೂ ಈ ಖಾತೆ ಪರಿವರ್ತನೆ ಕಾರ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

"ಸಕ್ರಮವಾಗಿರಲಿ ಅಥವಾ ಅಕ್ರಮದ್ದಾಗಿರಲಿ ಯಾವುದೇ ನಿವೇಶನಕ್ಕೂ ನಾವು ಖಾತೆ ಕೊಡುತ್ತೇವೆ. ಹೈಕೋರ್ಟ್ ಆದೇಶದಲ್ಲಿ ಇದು ಸ್ಪಷ್ಟವಾಗಿದೆ. ಹಾಗೆಯೇ ಬಿಬಿಎಂಪಿ ಕಾಯ್ದೆಯಲ್ಲೂ ಎ ಖಾತೆ ಮತ್ತು ಬಿ ಖಾತೆ ಎಂಬ ವರ್ಗೀಕರಣ ಇಲ್ಲ. ಎಲ್ಲಾ ಆಸ್ತಿಗಳಿಗೂ ಒಂದೇ ರೀತಿಯ ಖಾತೆಯನ್ನ ನೀಡಲು ನಿರ್ಧರಿಸಿದ್ದೇವೆ. ಆದರೆ, ಅಧಿಕೃತ ಮತ್ತು ಅನಧಿಕೃ ಕಟ್ಟಡಗಳಿಗೆ ಪ್ರತ್ಯೇಕ ರಿಜಿಸ್ಟರ್ ಇಡಲಾಗುತ್ತದೆ" ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಸ್ಥಗಿತಗೊಂಡಿರುವ ಅಕ್ರಮ ಸಕ್ರಮ ಯೋಜನೆ ಬಗ್ಗೆ ಏಪ್ರಿಲ್ ೧೩ರ ಸಭೆಯಲ್ಲಿ ಚರ್ಚಿಸಲಾಗಿದೆ. ಸರಕಾರದ ಈ ಯೋಜನೆಗೆ ೨೦೧೭ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಕೋರ್ಟ್‌ನಿಂದ ಅಂತಿಮ ತೀರ್ಪು ಬರುವವರೆಗೂ ಯಾವುದೇ ಅನಧಿಕೃತ ಕಟ್ಟಡಗಳನ್ನ ಸಕ್ರಮ ಮಾಡುವ ಕಾರ್ಯಕ್ಕೆ ಕೈಹಾಕದಿರಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಖಾತೆ ವರ್ಗೀಕರಣ ಯಾವಾಗ ಶುರುವಾಗಿದ್ದು?
2007ರಲ್ಲಿ ಆಸ್ತಿ ತೆರಿಗೆ ಪದ್ಧತಿಯನ್ನು ಸರಳಗೊಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿರುವ ಆಸ್ತಿಗಳನ್ನ ಎ ಖಾತೆ ಮತ್ತು ಬಿ ಖಾತೆಗಳೆಂದು ಬಿಬಿಎಂಪಿ ವರ್ಗೀಕರಣ ಮಾಡಿತ್ತು. ಅಧಿಕೃತವಾದ ನಿವೇಶನಗಳಿಗೆ ಮಾತ್ರ ಪಿಐಡಿ ನಂಬರ್ ಒದಗಿಸಲಾಗಿತ್ತು. (ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+