ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂತಕರಿಗೆ ಗಲ್ಲು: ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸಿದ ಸಚಿವೆ ಶಶಿಕಲಾ ಜೊಲ್ಲೆ

|
Google Oneindia Kannada News

ಬೆಂಗಳೂರು, ಮಾರ್ಚ್ 20: ನಿರ್ಭಯ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ ನೀಡಿದ್ದು, ನ್ಯಾಯಾಲಯಕ್ಕೆ ನಾವು ಅಭಿನಂದನೆ ಸಲ್ಲಿಸಬೇಕು ಎಂದಿದ್ದಾರೆ.

''ನಿನ್ನೆ ರಾತ್ರಿ ಏನ್ ಏನೋ ಪ್ರಶ್ನಾವಳಿಗಳೆಲ್ಲ ಬಂದಿತ್ತು ಕೊನೆಗೆ ಇವತ್ತು ಅವರಿಗೆ ಗಲ್ಲಾಗಿದೆ ಇದರಿಂದ ಒಂದು ಸಂದೇಶ ಕೊಟ್ಟಂತಾಗಿದೆ. ಆ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲು 7 ವರ್ಷ ಬೇಕಾಯ್ತು. ಆ ತಾಯಿ ಎಷ್ಟು ನೋವು ಅನುಭವಿಸರಬೇಕು?'' ಎಂದು ಶಶಿಕಲಾ ಜೊಲ್ಲೆ ಪ್ರಶ್ನೆ ಮಾಡಿದರು.

ನಿರ್ಭಯಾ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ವಕೀಲೆ ಸೀಮಾನಿರ್ಭಯಾ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ವಕೀಲೆ ಸೀಮಾ

''ಇದೀಗ ಅವರ ನೋವಿಗೆ ನ್ಯಾಯ ಸಿಕ್ಕಿದೆ ಇಂಥ ಪ್ರಕರಣಗಳಲ್ಲಿ ಆದಷ್ಟು ಬೇಗ ತೀರ್ಪು ಬರವಂತಾಗಬೇಕು ಇದಕ್ಕಾಗಿ ನಾನು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಇಂಥ ಪ್ರಕರಣಗಳನ್ನ ಆದಷ್ಟು ಬೇಗ ತ್ವರಿತಗತಿಯಲ್ಲಿ ತೀರ್ಪು ಪ್ರಕಟಿಸಿ ಶಿಕ್ಷಿಸಬೇಕು.'' ಎಂದರು.

Nirbhaya case: Minister Shashikala Jolle Thanked Court

''ನಿರ್ಭಯ ಕುಟುಂಬದ ಜೊತೆ ಇಡೀ ದೇಶದ ಹೆಣ್ಣು ಮಕ್ಕಳು ಇರುತ್ತೇವೆ. ಎಲ್ಲಾ ಹೆಣ್ಣುಮಕ್ಕಳು ಧೈರ್ಯವಾಗಿರಬೇಕು. ನನಗೆ ನಿರ್ಭಯ ತಾಯಿ ಮಾತು ಕೇಳಿ ಖುಷಿ ಆಯ್ತು. ಇಂಥ ನೋವಿನಲ್ಲೂ ಎಲ್ಲಾ ಹೆಣ್ಣು ಮಕ್ಕಳ ಪರವಾಗಿ ನಾನು ನಿಲ್ಲುತ್ತೇನೆ ಎಂದಿದ್ದಾರೆ.'' ಎಂದು ಶಶಿಕಲಾ ಮಾತನಾಡಿದರು.

ಮಗಳ ಸಾವಿಗೆ ಕೊನೆಗೂ ಸಿಕ್ಕ ನ್ಯಾಯ: ನಿರ್ಭಯಾ ತಾಯಿ ಪ್ರತಿಕ್ರಿಯೆಮಗಳ ಸಾವಿಗೆ ಕೊನೆಗೂ ಸಿಕ್ಕ ನ್ಯಾಯ: ನಿರ್ಭಯಾ ತಾಯಿ ಪ್ರತಿಕ್ರಿಯೆ

2012 ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಈಗ ನ್ಯಾಯ ಸಿಕ್ಕಿದೆ. ಇಂದು (ಮಾರ್ಚ್ 20) ಬೆಳಗ್ಗೆ 5.30ಕ್ಕೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಯಿತು. ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಅರ್ಜಿಗಳು ತಿರಸ್ಕಾರಗೊಂಡಿದ್ದವು. ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಲಯದ ಡೆತ್ ವಾರೆಂಟ್‌ನಂತೆ ಶುಕ್ರವಾರ ಮುಂಜಾನೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.

English summary
Nirbhaya case: Minister Shashikala Jolle thanked court. The Nirbhaya Four Convicts Now executed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X