ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

9 ವರ್ಷ ತಡವಾಗಿ ಮೇಲ್ಮನವಿ; ಬಿಡಿಎಗೆ ಹೈಕೋರ್ಟ್ ತಪರಾಕಿ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 04; ಎಚ್‌ಬಿಆರ್ ಬಡಾವಣೆ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗವೊಂದರ ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಿ ಏಕಸದಸ್ಯಪೀಠ ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ 9 ವರ್ಷ ತಡವಾಗಿ ಮೇಲ್ಮನವಿ ಸಲ್ಲಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ( ಬಿಡಿಎ)ಕ್ರಮಕ್ಕೆ ಹೈಕೋರ್ಟ್ ಕಿಡಿ ಕಾರಿದೆ. ಅಲ್ಲದೇ ಅದೇ ಕಾರಣಕ್ಕೆ ಮೇಲ್ಮನವಿಯನ್ನು ವಜಾಗೊಳಿಸಿ ಬಿಡಿಎ ಆಯಕ್ತರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.

ಹೈಕೋರ್ಟ್ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ 2022ರ ಫೆ. 25ರಂದು ಬಿಡಿಎ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅತಿಕ್ರಮಣವಾಗಿದ್ದ ₹30 ಕೋಟಿ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ, ನಕಲಿ NOC ಇದ್ದರೆ ಕ್ರಿಮಿನಲ್ ಕೇಸ್ ಅತಿಕ್ರಮಣವಾಗಿದ್ದ ₹30 ಕೋಟಿ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ, ನಕಲಿ NOC ಇದ್ದರೆ ಕ್ರಿಮಿನಲ್ ಕೇಸ್

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, 2014ರಲ್ಲಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶಿಸಿದೆ. ಆ ನಂತರ ಕಾನೂನು ಅಧಿಕಾರಿಯು ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಭಿಪ್ರಾಯ ನೀಡಿದ್ದಾರೆ. ಆದರೆ, ಅಂದಿನಿಂದಲೂ ಕಡತವು ಬಿಡಿಎ ಆಯುಕ್ತರ ಬಳಿಯಿದೆ.

ಕೆರೆ ನುಂಗಿ ನಿರ್ಮಿಸಲಾದ ಬಿಡಿಎ ಲೇಔಟ್‌ಗಳಲ್ಲಿ ಸೈಟ್ ಪಡೆದ ರಾಜಕಾರಣಿಗಳ ಲಿಸ್ಟ್ ಇಲ್ಲಿದೆ!ಕೆರೆ ನುಂಗಿ ನಿರ್ಮಿಸಲಾದ ಬಿಡಿಎ ಲೇಔಟ್‌ಗಳಲ್ಲಿ ಸೈಟ್ ಪಡೆದ ರಾಜಕಾರಣಿಗಳ ಲಿಸ್ಟ್ ಇಲ್ಲಿದೆ!

bda news

ಪ್ರಕರಣ ಸಂಬಂಧ ಸರ್ಕಾರ ಪ್ರಶ್ನಿಸಿದ ಮೇಲೆ ಎಚ್ಚೆತ್ತ ಬಿಡಿಎ ಆಯ್ತುಕ್ತರು ಮೇಲ್ಮನವಿ ಸಲ್ಲಿಸಿದ್ದಾರೆ. ಇಷ್ಟು ವಿಳಂಬ ಮಾಡುವುದರಲ್ಲಿಯಾವುದೇ ದುರುದ್ದೇಶವಿಲ್ಲಎಂದು ನ್ಯಾಯಾಲಯಕ್ಕೆ ಅನಿಸುತ್ತಿಲ್ಲ. ಇನ್ನೂ ಮೇಲ್ಮನವಿ ಸಲ್ಲಿಸಲು ಇಷ್ಟು ವಿಳಂಬ ಮಾಡಿರುವುದಕ್ಕೆ ಬಿಡಿಎ ಸೂಕ್ತ ಕಾರಣ ನೀಡಿಲ್ಲಎಂದು ತಿಳಿಸಿದ ವಿಭಾಗೀಯ ಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತು.

Big Scam: 23 ಕೆರೆ ನಾಶ ಮಾಡಿ, 3,530 ನಿವೇಶನ ನಿರ್ಮಿಸಿದ ಬಿಡಿಎ! Big Scam: 23 ಕೆರೆ ನಾಶ ಮಾಡಿ, 3,530 ನಿವೇಶನ ನಿರ್ಮಿಸಿದ ಬಿಡಿಎ!

ಪ್ರಕರಣದ ಹಿನ್ನೆಲೆ ಏನು?; ಎಚ್‌ಆರ್‌ಬಿ ಲೇಔಟ್ 3ನೇ ಹಂತದ ಬಡಾವಣೆ ನಿರ್ಮಾಣ ಹಿನ್ನೆಲೆಯಲ್ಲಿ ಚೋಳನಾಯಕನಹಳ್ಳಿ ಗ್ರಾಮದಲ್ಲಿಸಾಕಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ 1978ರ ಜೂ.2ರಂದು ಪ್ರಾಥಮಿಕ ಮತ್ತು 1989ರ ಫೆ.2 ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು.

ಅದರಲ್ಲಿಸರ್ವೇ ನಂ 47ರಲ್ಲಿನ 17.5 ಗುಂಟೆ ಜಾಗವು ರಾಮಯ್ಯ ಎಂಬುವರಿಗೆ ಸೇರಿತ್ತು. ಆ ಜಾಗವನ್ನು ಬಿಡಿಎ ಸ್ವಾಧೀನಪಡಿಸಿಕೊಳ್ಳಲೂ ಇಲ್ಲ ಹಾಗೂ ಪರಿಹಾರವೂ ನೀಡಲಿಲ್ಲ. ಈ ಮಧ್ಯೆ ರಾಮಯ್ಯ ಅವರ ಜಮೀನು ಸುತ್ತಲಿನ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟು ಬಿಡಿಎ ಆದೇಶಿಸಿತ್ತು. ಆ ಭೂಮಿಯನ್ನು ಸಂಬಂಧಪಟ್ಟ ಮಾಲೀಕರು ಅಭಿವೃದ್ಧಿಪಡಿಸಿದ್ದರು.

ಇದರಿಂದ ತಮಗೆ ಸೇರಿದ ಸಣ್ಣ ಜಾಗದಲ್ಲಿ ಬಡಾವಣೆ ರಚಿಸಲಾಗದ ಕಾರಣಕ್ಕೆ ಭೂ ಸ್ವಾಧೀನದಿಂದ ಕೈ ಬಿಡಬೇಕು. ಹಾಗೆಯೇ, ಕೃಷಿಯೇತರ ಚಟುವಟಿಕೆಗೆ ಬಳಸಲು ಅನುಮತಿ ನೀಡಲು ಕೋರಿ ರಾಮಯ್ಯ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕರಿಸಲ್ಪಟ್ಟ ಕಾರಣ ರಾಮಯ್ಯ 2012ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

high court

ರಾಮಯ್ಯ ಅವರ ಭೂಮಿಗೆ ಸಂಬಂಧಿಸಿದಂತೆ ಬಿಡಿಎ ಹೊರಡಿಸಿದ ಅಂತಿಮ ಭೂ ಸ್ವಾಧೀನ ಅಧಿಸೂಚನೆ ಮತ್ತು ಭೂ ಪರಿವರ್ತನೆಗೆ ನಿರಾಕರಿಸಿ ಬಿಡಿಎ ನೀಡಿದ್ದ ಹಿಂಬರಹವನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ರದ್ದುಪಡಿಸಿತು. ಜತೆಗೆ, ಭೂ ಪರಿವರ್ತನೆಗೆ ಕೋರಿ ರಾಮಯ್ಯ ಅರ್ಜಿ ಸಲ್ಲಿಸಿದರೆ, ಅದನ್ನು ಜಿಲ್ಲಾಧಿಕಾರಿ ಪರಿಗಣಿಸಿ ಕಾನೂನು ಪ್ರಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ 2013ರ ಫೆ.22 ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಡಿಎ ಆಯುಕ್ತರು 2022ರ ಫೆ.25ರಂದು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

3688 ಅಂಬ್ಯುಲೆನ್ಸ್ ಗಳಿಗೆ ಮಾತ್ರ ಜಿಪಿಎಸ್: ಈ ಮಧ್ಯೆ, ಸರ್ಕಾರ ಮತ್ತೊಂದು ಪ್ರಕರಣದಲ್ಲಿ ಆಂಬ್ಯುಲೆನ್ಸ್‌ಗಳ ತಡೆ ರಹಿತವಾಗಿ ಸಂಚಾರಕ್ಕೆ ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಈವರೆಗೂ ಒಟ್ಟು 3688 ಆಂಬ್ಯಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಸರ್ಕಾರಿ ವಕೀಲರು, ಆಂಬ್ಯುಲೆನ್ಸ್‌ಗಳು ತಡೆ ರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಅಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ನ.8ರಂದು ಹೈಕೋರ್ಟ್ ನೀಡಿರುವ ಆದೇಶದ ಅನುಪಾಲನಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ 12,107 ಆಂಬುಲೆನ್ಸ್‌ಗಳಿವೆ. ಅವುಗಳನ್ನು ಸರ್ಕಾರ ತಪಾಸಣೆ ನಡೆಸಿದಾಗ 3688 ಗಳಿಗೆ ಮಾತ್ರ ಜಿಪಿಎಸ್ ಅಳವಡಿಸಿರುವುದು ಕಂಡುಬದಿದೆ. ಉಳಿದ ಆಂಬುಲೆನ್ಸ್‌ಗಳಿಗೂ ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.

ಇನ್ನೂ ಸಂಚರಿಸುವ ಮಾರ್ಗದ ಕುರಿತು ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಎಲ್ಲಾ ಆಂಬುಲೆನ್ಸ್‌ಗಳ ಚಾಲಕರಿಗೆ ಮಾಹಿತಿ ನೀಡಲಾಗಿದೆ. ಅದಕ್ಕಾಗಿ ವಿಶೇಷ ಸಹಾಯವಾಣಿ ಸಂಖ್ಯೆಯನ್ನೂ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

English summary
Karnataka high court upset against Bangalore Development Authority (BDA) for filing appeal after 9 years. Court dismissed BDA appeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X