Nikhil Kumaraswamy: ಚನ್ನಪಟ್ಟಣದ ಕಿಂಗ್ ಆಗಲು ನಿಖಿಲ್ ಸಜ್ಜು? ಯೋಗೇಶ್ವರ್ ಸೋಲಿಗೆ...
ನಿಖಿಲ್ ಕುಮಾರಸ್ವಾಮಿ & ಸಿಪಿ ಯೋಗೇಶ್ವರ್ ನಡುವಿನ ಭರ್ಜರಿ ಕಾದಾಟಕ್ಕೆ ಸಾಕ್ಷಿಯಾಗಿ, ಅಂತಿಮ ಹಂತದ ತನಕ ಭರ್ಜರಿ ಹೋರಾಟ ಕಂಡಿದ್ದ ಚನ್ನಪಟ್ಟಣ ಉಪ ಚುನಾವಣೆಯ ರಿಸಲ್ಟ್ ಕೋಟಿ ಕೋಟಿ ಕನ್ನಡಿಗರನ್ನ ಸೆಳೆಯುತ್ತಿದೆ. ನಿಖಿಲ್ ಕುಮಾರಸ್ವಾಮಿ ಗೆಲುವು ಇದೇ ಜಾಗದಿಂದ ಆರಂಭ ಆಗುವುದು ಬಹುತೇಕ ಖಚಿತವಾಗಿದ್ದು, ಜೆಡಿಎಸ್ ಪಕ್ಷಕ್ಕೆ ಈ ಗೆಲುವು ಮರುಹುಟ್ಟು ಎಂದು ಕೂಡ ವಿಶ್ಲೇಷಣೆ ಮಾಡಲಾಗುತ್ತಿದೆ. ಹಾಗಿದ್ರೆ, ಚನ್ನಪಟ್ಟಣದ ಕಿಂಗ್ ಆಗಲು ನಿಖಿಲ್ ಸಜ್ಜು? ಯೋಗೇಶ್ವರ್ ಸೋಲಿಗೆ...
ನಿಖಿಲ್ ಕುಮಾರಸ್ವಾಮಿ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ ನೇರವಾಗಿ, ಸುಲಭವಾಗಿ ಗೆಲುವಿನ ಮನೆ ಸೇರಲು ಆಗಲೇ ಇಲ್ಲ. ನಿಖಿಲ್ ಕುಮಾರಸ್ವಾಮಿ ಅವರ ತಾತ & ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಆಡಳಿತ ವೈಖರಿ ಮೂಲಕ ಜಗತ್ತಿನಾದ್ಯಂತ ಹೆಸರು ಮಾಡಿದ್ದರು. ಹಾಗೇ ನಿಖಿಲ್ ಕುಮಾರಸ್ವಾಮಿ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ 2 ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು. ಹೀಗಿದ್ದರೂ ನಿಖಿಲ್ ಹಿಂದೆ 2 ಎಲೆಕ್ಷನ್‌ನ ಸೋತಿದ್ದರು.

ಮಾಜಿ ಪ್ರಧಾನಿಯ ಮೊಮ್ಮಗ...
ಮಾಜಿ ಪ್ರಧಾನಿ ದೇವೇಗೌಡರಿಗೆ, ದೇಶದ ಮೂಲೆ ಮೂಲೆಯಲ್ಲೂ ದೊಡ್ಡ ಹೆಸರು ಇದೆ. ಕಾಶ್ಮೀರದಲ್ಲಿ ಭದ್ರತೆಯೇ ಇಲ್ಲದೆ, ಉಗ್ರರಿಗೆ ಹೆದರದೆ ಗಟ್ಟಿ ಗುಂಡಿಗೆಯಲ್ಲಿ ತೆರೆದ ವಾಹನದಲ್ಲಿ ಓಡಾಟ ನಡೆಸಿದ್ದರು ಮಾಜಿ ಪ್ರಧಾನಿ ದೇವೇಗೌಡರು. ಭಾರತದ ವಾಯು ಪಡೆ ಬಲಗೊಳಿಸಲು ಕೂಡ ಮಾಜಿ ಪ್ರಧಾನಿ ದೇವೇಗೌಡರು ಹಲವು ಮಹತ್ವದ ನಿರ್ಣಯಗಳನ್ನ ಕೈಗೊಂಡಿದ್ದರು. ಇದರ ಜೊತೆ ಕರ್ನಾಟಕದ ನೀರಾವರಿ ಮಾತ್ರವಲ್ಲ ಭಾರತದ ನೀರಾವರಿಗೂ ಇವರ ಕೊಡುಗೆ ದೊಡ್ಡದು. ಆದರೆ ಮಾಜಿ ಪ್ರಧಾನಿಯ ಮೊಮ್ಮಗ ಕೂಡ ಸುಲಭವಾಗಿ ಚುನಾವಣೆ ಗೆದ್ದು ಬೀಗಲು ಆಗಲೇ ಇಲ್ಲ.
ಚನ್ನಪಟ್ಟಣದಲ್ಲಿ ಗೆಲುವು ಗ್ಯಾರಂಟಿ!
ಹೌದು, 2019ರ ಮಂಡ್ಯ ಲೋಕಸಭಾ ಚುನಾವಣೆ & 2023ರ ರಾಮನಗರ ವಿಧಾನಸಭೆಯ ಚುನಾವಣೆಗಳು ನಿಖಿಲ್ ಕುಮಾರಸ್ವಾಮಿ ಅವರ ಜೀವನದಲ್ಲಿ ದೊಡ್ಡ ಪಾಠ ಕಲಿಸಿವೆ. ಇದೇ ಕಾರಣಕ್ಕೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದ ನಿಖಿಲ್ ಅವರಿಗೆ ಗೆಲುವು ಬಹುತೇಕ ಗ್ಯಾರಂಟಿ ಆಗಿದೆ. ಸ್ವತಃ ಮಾಜಿ ಪ್ರಧಾನಿ ದೇವೇಗೌಡರು & ಮಾಜಿ ಸಿಎಂ ಕುಮಾರಸ್ವಾಮಿ ಅವರು ನಿಖಿಲ್ ಅವರ ಪರವಾಗಿ ಮತಯಾಚನೆ ಮಾಡಿದ್ದರು. ಇಷ್ಟೆಲ್ಲಾ ಪ್ರಯತ್ನದ ನಡುವೆ ಸಿಪಿ ಯೋಗೇಶ್ವರ್ ಹಿನ್ನಡೆ ಅನುಭವಿಸುತ್ತಾರೆ ಎನ್ನಲಾಗುತ್ತಿದೆ.
ಸಿಪಿ ಯೋಗೇಶ್ವರ್ ಸೋಲು ಗ್ಯಾರಂಟಿ?
ಚುನಾವಣೆ ಸಮಯದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಸಿಪಿ ಯೋಗೇಶ್ವರ್ ಅವರಿಗೆ ಈಗ ಸೋಲಿನ ಭಯ ಆವರಿಸಿದೆ. ಇದಕ್ಕೆ ಕಾರಣವಾಗಿರುವ ಅಂಶಗಳು ಹತ್ತಾರು. ಚುನಾವಣೆಯ ಬಗ್ಗೆ ನಡೆದಿರುವ ಸಮೀಕ್ಷೆಗಳು ಕೂಡ ನಿಖಿಲ್ ಕುಮಾರಸ್ವಾಮಿ ಗೆಲ್ಲಬಹುದು & ಮತ್ತೊಂದು ಕಡೆ ಸಿಪಿ ಯೋಗೇಶ್ವರ್ ಸೋಲುವ ಸಾಧ್ಯತೆ ಇದೆ ಎನ್ನುತ್ತಿವೆ. ಹೀಗಾಗಿ ಭಾರಿ ಕುತೂಹಲವೇ ಇದೀಗ ಮೂಡಿದೆ. ಇದಕ್ಕೆಲ್ಲಾ ಉತ್ತರ ಇನ್ನು ಕೆಲವೇ ಕ್ಷಣಗಳಲ್ಲಿ ಸಿಗಲಿದೆ.
ಆರಂಭದಲ್ಲೇ ಆಘಾತ ನೀಡಿದ್ದ ಯೋಗೇಶ್ವರ್!
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಯ, ಆರಂಭಿಕ ಹಂತದಲ್ಲೇ ನಿಖಿಲ್‌ಗೆ ಹಿನ್ನಡೆ ಕಂಡುಬಂತು. ಈ ಸಮಯದಲ್ಲಿ ಸಿಪಿ ಯೋಗೇಶ್ವರ್ ಅವರು ಮುನ್ನಡೆ ಪಡೆದರು. ಹೀಗೆ ಫಲಿತಾಂಶಕ್ಕೆ ಕಾದು ಕೂತಿದ್ದ ನಿಖಿಲ್ ಕುಮಾರಸ್ವಾಮಿ & ಅವರ ಬೆಂಬಲಿಗರಿಗೆ ಇದು ಆಘಾತ ನೀಡಿತ್ತು. ಹೀಗಿದ್ದರೂ, ಆರಂಭಿಕ ಟ್ರೆಂಡ್ ಮಾತ್ರ ಎಂಬ ನೆಮ್ಮದಿ ಇತ್ತು. ನಂತರ, ನಿಖಿಲ್ ಕುಮಾರಸ್ವಾಮಿ ಅವರು ಮುನ್ನಡೆ ಸಾಧಿಸಿದ್ದು ಜಿದ್ದಾಜಿದ್ದಿನ ಪೈಪೋಟಿ ಈಗ ಅಲ್ಲಿ ಮುಂದುವರಿದಿದೆ.












Click it and Unblock the Notifications