ಬೆಂಗಳೂರು : ಪೇದೆ ಮೇಲೆ ನೈಜೀರಿಯನ್ ಮಹಿಳೆಯಿಂದ ಹಲ್ಲೆ
ಬೆಂಗಳೂರು, ಜನವರಿ 19 : ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ನೈಜೀರಿಯನ್ ಮೂಲದ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಹಲ್ಲೆ ನಡೆಸಲಾಗಿತ್ತು.
ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಪೇದೆ ಆನಂದ್ ಮೇಲೆ ನೈಜೀರಿಯನ್ ಮೂಲದ ವಿದ್ಯಾರ್ಥಿನಿ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಯಾವ ಕಾರಣಕ್ಕೆ ವಿದ್ಯಾರ್ಥಿನಿ ಹಲ್ಲೆ ನಡೆಸಿದ್ದಾಳೆ ಎಂಬುದು ತಿಳಿದುಬಂದಿಲ್ಲ. ಮೂರು ದಿನಗಳ ಹಿಂದೆ ನಡೆದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಕಿಲಾಂಬೋ ನಜೀಬಾ ಎಂಬ ವಿದ್ಯಾರ್ಥಿನಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾಳೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications