ಬೆಂಗಳೂರು, ಕೋಲಾರದಲ್ಲಿ ಎನ್‌ಐಎ ದಾಳಿ; ಮೂವರು ಶಂಕಿತ ಉಗ್ರರ ಬಂಧನ
NIA Raid: ಉಗ್ರರಿಗೆ ನೆರವು ನೀಡುತ್ತಿದ್ದ ಆರೋಪದಡಿಯಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಇಂದು (ಜುಲೈ 8) ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ. ಹಾಗಾದ್ರೆ ಯಾರೆಲ್ಲಾ ಗಾಳಕ್ಕೆ ಎನ್‌ಐಎ ಬೀಸಿದ ಗಾಳಕ್ಕೆ ಬಿದ್ದಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಧಿತರ ವಿವರ: ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಾನ್‌ಪಾಷಾ, ಕೋಲಾರದ ಅನೀಸಾ ಫಾತಿಮಾ ಬಂಧಿತರಾಗಿದ್ದಾರೆ. ಈ ಪೈಕಿ ಆರೋಪಿ ಅನಿಸಾ, ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಅಹಮ್ಮದ್‌ನ ತಾಯಿ ಆಗಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರಾದ ಮೂವರು ಶಂಕಿತ ಉಗ್ರರು ಜೈಲಿನಲ್ಲಿ ಇರುವ ಎಲ್‌ಇಟಿ ಉಗ್ರ ಟಿ.ನಾಸೀರ್‌ನ ಉಗ್ರ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂಬ ಕುರಿತು ದಾಖಲೆಗಳಿ ಲಭ್ಯವಾಗಿವೆ. ಕೋಲಾರ ಹಾಗೂ ಬೆಂಗಳೂರು ಸೇರಿದಂತೆ 5 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ, ಚಿನ್ನಾಭರಣ, ಎರಡು ವಾಕಿಟಾಕಿ, ಡಿಜಿಟಲ್ ಪರಿಕರಗಳು ಸಿಕ್ಕಿವೆ. ಇವುಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ ಕೆಲ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ನಾಗರಾಜ್, ಉಗ್ರ ನಾಸೀರ್ ಸೇರಿ ಇತರ ಉಗ್ರರಿಗೆ ಕಳ್ಳ ಮಾರ್ಗದ ಮೂಲಕ ಮೊಬೈಲ್ ಕೊಡುತ್ತುದ್ದರು. ಇದಕ್ಕೆ ಪವಿತ್ರಾ ಎಂಬಾಕೆ ಸಹಾಯ ಮಾಡುತ್ತಿದ್ದಳು. ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಚಾನ್ ಪಾಷಾ, 2022ರಿಂದ ಉಗ್ರ ನಾಸೀರ್‌ಗೆ ಮಾಹಿತಿ ರವಾನಿಸುವುದು, ಬೇರೆ ಕೋರ್ಟ್‌ಗಳಿಗೆ ಕರೆದುಕೊಂಡು ಹೋದಾಗ ಸಹಕಾರಿಸುವುದು, ಎಲ್‌ಇಟಿ ಸಂಘಟನೆ ಬಲಪಡಿಸಲು ದೇಣಿಗೆ ಸಂಗ್ರಹ ಮಾಡಲು ನೆರವಾಗುತ್ತಿದ್ದರು ಎಂದು ತಿಳಿದುವಂದಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಲ್‌ಇಟಿ ಸಂಘಟನೆ ಬಲಪಡಿಸುವಿಕೆ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿ ತಲೆಮರೆಸಿಕೊಂಡ ಉಗ್ರ ಜುನೈದ್ ಅಹಮದ್‌ನ್ ತಾಯಿ ಆಗಿರುವ ಅನಿಸಾ ಸಹ ನಾಸೀರ್‌ಗೆ ಸಹಕಾರ ನೀಡಿದ್ದಾಳೆ ಎಂದು ಎನ್‌ಐಎ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿಎಲ್‌ಇಟಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಂಕೆಯ ಮೇರೆಗೆ 2023ರ ಜುಲೈನಲ್ಲಿ ಸಿಸಿಬಿ ಪೊಲೀಸರು, ಆರ್.ಟಿ.ನಗರದ ಸೈಯದ್ ಸುಹೈಲ್ ಸೇರಿ 6 ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದರು. ಈ ವೇಳೆ ಅವರಿಂದ ನಾಲ್ಕು ಹ್ಯಾಂಡ್ ಗ್ರೇನೆಡ್ ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಗಳಿಗೆ ಎಲ್‌ಇಟಿ ಉಗ್ರ ಟಿ.ನಾಸೀರ್ ಸಂಪರ್ಕ ಇದ್ದು, ಆತನ ಪ್ರೇರಣೆಯಿಂದಲೇ ಉಗ್ರ ಚಟುವಟಿಕೆ ನಡೆಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬಟಾ ಬಯಲಾಗಿತ್ತು.












Click it and Unblock the Notifications