• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಬಿಟ್ಟು ಓಡಿ ಹೋಗಿದ್ದ ಜೆಎಂಬಿ ಉಗ್ರನ ಬಂಧನ

|

ಬೆಂಗಳೂರು, ಡಿಸೆಂಬರ್ 17: ರಾಜಧಾನಿ ಹಾಗೂ ದೇಶಾದ್ಯಂತ ವಿಧ್ವಂಸಕ ಚಟುವಟಿಕೆ ನಡೆಸಲು ಹೊಂಚು ಹಾಕಿದ್ದ ಓರ್ವ ಉಗ್ರನನ್ನು ಎನ್‌ಐಎ ತಂಡ ಕೊಲ್ಕತ್ತದಲ್ಲಿ ಸೆರೆಹಿಡಿದಿದೆ.

ಬೆಂಗಳೂರು ಮಾಡ್ಯೂಲ್ ಪ್ರಕರಣದ ಪ್ರಮುಖ ಆರೋಪಿ (ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ)ಜೆಎಂಬಿ ಉಗ್ರ ಮೊಸರಫ್ ಹುಸೇನ್ ಅಲಿಯಾಸ್‌ ಹುಸೇನ್‌ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಷರಾಬಾದ್ ಜಿಲ್ಲೆಯ ರಘುನಾಥ ಗಂಜ್‌ನಿವಾಸಿಯಾಗಿರುವ ಈತ ಬಾಂಗ್ಲಾದೇಶದ ನಿಷೇಧಿತ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.

ಆರೋಪಿಯನ್ನು ಇಂದು ಕೊಲ್ಕತ್ತ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತಿದ್ದು, ಬೆಂಗಳೂರು ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತಿದೆ.

ಕಳೆದ ಜುಲೈನಲ್ಲಿ ಚಿಕ್ಕಬಾಣಾವರದ ಮನೆಯೊಂದರ ಮೇಲೆ ದಾಳಿ ನಡೆಸಿದ ಎನ್‌ಐಎ ಐದು ಗ್ರಾನೈಡ್ , ಐಇಡಿ ಬಾಂಬ್‌ಗಳು ಏರ್‌ಗನ್‌ಗಳು ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

22 ವರ್ಷದ ಹುಸೇನ್ ಜೆಎಂಬಿಯ ಸಕ್ರಿಯ ಸದಸ್ಯನಾಗಿದ್ದು, ಬೆಂಗಳೂರಿನಲ್ಲಿದ್ದುಕೊಂಡು ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ವಿಧ್ವಂಸಕ ಚಟುವಟಿಕೆ ನಡೆಸುವ ಜವಾಬ್ದಾರಿಯನ್ನು ಹೊಂದಿದ್ದ.

ಎನ್‌ಐಎಯ ಸಂಯೋಜಿತ ಕಾರ್ಯಾಚರಣೆಯಿಂದ ಬೆಂಗಳೂರು ಹಾಗೂ ದೇಶಾದ್ಯಂತ ನಡೆಯಲಿದ್ದ ವಿಧ್ವಂಸಕ ಕೃತ್ಯವನ್ನು ಎನ್‌ಐಎ ನಿಯಂತ್ರಿಸಿದೆ.

ಎನ್‌ಐಎ ತನಿಖೆ ಪ್ರಕಾರ ಮುಷರಫ್ ಹುಸೇನ್ ಈಗಲೂ ಜೆಎಂಬಿಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ.

ಈತ ಬೆಂಗಳೂರಿಗೆ 2018ರ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಬಂದಿದ್ದ, ಈತನಿಗೆ ಆಶಿಕ್ ಇಕ್ಬಾಲ್ ಎನ್ನುವ ವ್ಯಕ್ತಿ ಕೂಡ ನೆರವು ನೀಡಿದ್ದ.

English summary
NIA On Monday Arrested JMB Active Member Mosaraf Hossain Alias Hossain By NIA Kolkata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X