ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್‌ಜಿಟಿಯಿಂದ ದಂಡ : ಕರ್ನಾಟಕ ಸಲ್ಲಿಸಿದ್ದ ಅರ್ಜಿ ವಜಾ

|
Google Oneindia Kannada News

ಬೆಂಗಳೂರು, ಫೆಬ್ರವರಿ 07 : ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ವಿಧಿಸಿರುವ ದಂಡದ ಕುರಿತು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮುರು ಪರಿಶೀಲನಾ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಜಾಗೊಳಿಸಿದೆ.

ಗುರುವಾರ ಈ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯಲ್ಲಿ ವಿಚಾರಣೆ ನಡೆಯಿತು. ರಾಜ್ಯ ಸರ್ಕಾರಕ್ಕೆ ವಿಧಿಸಿದ್ದ 50 ಕೋಟಿ, ಬಿಬಿಎಂಪಿಗೆ ವಿಧಿಸಿದ್ದ 25 ಕೋಟಿ ದಂಡದ ಕುರಿತು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.

ಬಿಬಿಎಂಪಿಗೆ ಎನ್‌ಜಿಟಿ ದಂಡ, ಸುಪ್ರೀಂ ಮೊರೆ ಹೋಗಲಿದೆ ಪಾಲಿಕೆಬಿಬಿಎಂಪಿಗೆ ಎನ್‌ಜಿಟಿ ದಂಡ, ಸುಪ್ರೀಂ ಮೊರೆ ಹೋಗಲಿದೆ ಪಾಲಿಕೆ

NGT dismissed Karnataka Government review petition

ಬೆಂಗಳೂರಿನ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಮಾಲಿನ್ಯ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಎನ್‌ಜಿಟಿ ದಂಡವನ್ನು ವಿಧಿಸಿತ್ತು.

ಬೆಳ್ಳಂದೂರು ಕೆರೆಗೆ ಬೆಂಕಿ ಇಟ್ಟ 4 ಕಿಡಿಗೇಡಿಗಳ ಬಂಧನಬೆಳ್ಳಂದೂರು ಕೆರೆಗೆ ಬೆಂಕಿ ಇಟ್ಟ 4 ಕಿಡಿಗೇಡಿಗಳ ಬಂಧನ

ಮೂರು ಕೆರೆಗಳ ಸಂರಕ್ಷಣೆಯನ್ನು ರಾಜ್ಯ ಸರ್ಕಾರ, ಬಿಬಿಎಂಪಿ ತೀವ್ರವಾಗಿ ನಿರ್ಲಕ್ಷಿಸಿವೆ. ನೀರು ಹರಿದುಬರುವ ರಾಜಾ ಕಾಲುವೆಗಳ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿವೆ ಎಂದು ಹೇಳಿದ್ದ ಎನ್‌ಜಿಟಿ ದಂಡ ವಿಧಿಸಿತ್ತು.

ಬೆಳ್ಳಂದೂರು ಕೆರೆ ಬಳಿಕ ವರ್ತೂರು ಕೆರೆಯಲ್ಲಿ ಬೆಂಕಿ, ಆತಂಕಬೆಳ್ಳಂದೂರು ಕೆರೆ ಬಳಿಕ ವರ್ತೂರು ಕೆರೆಯಲ್ಲಿ ಬೆಂಕಿ, ಆತಂಕ

6/12/2018ರಲ್ಲಿ ಎನ್‌ಜಿಟಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಕೆರೆಗಳ ಅಭಿವೃದ್ಧಿ ಕುರಿತು ಗ್ಯಾರಂಟಿ ಹಣವನ್ನಾಗಿ 100 ಕೋಟಿ ಪ್ರತ್ಯೇಕವಾಗಿ ಇರಿಸಬೇಕು ಎಂದು ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠ ಆದೇಶ ನೀಡಿತ್ತು.

ಬೆಳ್ಳಂದೂರು ಕೆರೆಯಲ್ಲಿ 2017ರ ಫೆಬ್ರವರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಎನ್‌ಜಿಟಿ ಸುಮೋಟೋ ದೂರು ದಾಖಲು ಮಾಡಿಕೊಂಡಿತ್ತು. ನಮ್ಮ ಬೆಂಗಳೂರು ಪೌಂಡೇಷನ್ ಸಹ ಈ ಕುರಿತು ಎನ್‌ಜಿಟಿಗೆ ಅರ್ಜಿ ಸಲ್ಲಿಸಿತ್ತು.

English summary
The National Green Tribunal (NGT) dismissed the Government of Karnataka’s review petition against the NGT final order directed to deposit 500 Crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X