ಸುದ್ದಿಚಿತ್ರ : ಕೈಕೊಡುವುದೋ ಸೆಲ್ಯೂಟ್ ಹೊಡೆಯುವುದೋ
ಬೆಂಗಳೂರು, ಜು. 15 : ಒಂದು ಸುಂದರವಾದ ಚಿತ್ರ ಸಾವಿರ ಪದಗಳಿಗೆ ಸಮ ಎಂಬುದು ಎಲ್ಲರೂ ತಿಳಿದಿರುವ ಸಂಗತಿ. ಆದರೆ, ಚಿತ್ರಕ್ಕೆ ತಕ್ಕಂತೆ ಸೂಕ್ತವಾದ ಶೀರ್ಷಿಕೆ ಇದ್ದರೆ ಅಥವಾ ಪೂರಕವಾದ ಮಾಹಿತಿ ಇದ್ದರೆ ಆ ಚಿತ್ರದ ಸೊಗಸು ಇನ್ನಷ್ಟು ಹೆಚ್ಚುತ್ತದೆ.
ಇಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಕಳಿಸಿರುವ ಕೆಲ ಚಿತ್ರಗಳನ್ನು ಹೆಕ್ಕಿ ನಿಮಗಾಗಿ ನೀಡುತ್ತಿದ್ದೇವೆ. ಇಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಜೀವನವನ್ನು ಹಿಡಿದಿಡುವಂಥ ಚಿತ್ರಗಳು ಇಲ್ಲಿವೆ.
ಬ್ರಜಿಲ್ ನ ಬ್ರಿಕ್ಸ್ ಸಮ್ಮೇಳನದಲ್ಲಿ ನರೇಂದ್ರ ಮೋದಿ, ಫೀಫಾ ಟ್ರೋಫಿ ಗೆಲ್ಲಿಸಿಕೊಟ್ಟ ಹೀರೋ ಮಾರಿಯೋ, ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರೂವಾರಿ ಅಬ್ದುಲ್ ನಾಸಿರ್ ಮದನಿ, ಶ್ರೀಸಾಮಾನ್ಯರ ಬದುಕುಬವಣೆ ಮತ್ತಿತರ ರೋಚಕ ಸುದ್ದಿಗಳು ಚಿತ್ರಗಳ ಸಮೇತ ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ.

ಹ್ಯಾಂಡ್ ಶೇಕ್ ಮಾಡುವುದೋ, ಸೆಲ್ಯೂಟ್ ಹೊಡೆಯುವುದೋ
ಇಂತಹ ಸಂದಿಗ್ಧ ನಾವೆಲ್ಲ ಹಲವಾರು ಬಾರಿ ಎದುರಿಸಿರುತ್ತೇವೆ. ಮುಂದಿದ್ದವರು ಕುಲುಕಲು ಬಂದರೆ, ನಾವು ನಮಸ್ಕಾರ ಎಂದು ಕೈಜೋಡಿಸಿರುತ್ತೇವೆ. ಅದು ಮತ್ತೆ ವೈಸ್ ವರ್ಸಾ ಆಗಿರುತ್ತದೆ. ನರೇಂದ್ರ ಮೋದಿ ಕೂಡ ಬ್ರಜಿಲ್‌ನ ಬ್ರಿಕ್ಸ್ ಸಮ್ಮೇಳನದಲ್ಲಿ ಇಂಥದೇ ಸಂದಿಗ್ಧತೆ ಎದುರಿಸಿದರು.

ಜೈಲಿಂದ ಹೊರಗೆ ಬಂದ ಉಗ್ರ ಅಬ್ದುಲ್ ಮದನಿ
ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ, ಕೇರಳದ ಪಿಡಿಪಿ ಸಂಘಟನೆಯ ಚೇರ್ಮನ್ ಅಬ್ದುಲ್ ನಾಸಿರ್ ಮದನಿಯನ್ನು ಸುಪ್ರೀಂ ಕೋರ್ಟ್, ಅನಾರೋಗ್ಯದ ಕಾರಣಕ್ಕಾಗಿ ಒಂದು ತಿಂಗಳ ಕಾಲ ಜಾಮೀನು ನೀಡಿದೆ. ಮದನಿ ಬೆಂಗಳೂರು ಜೈಲಿನಿಂದ ಸೋಮವಾರ ಹೋರಬರುತ್ತಿರುವುದು.

ಕೆಳಗಿಳಿಸಮ್ಮಾ ಪ್ಲೀಸ್ ನೀರಾಟ ಆಟಬೇಕು
ಗಂಗಾ ನದಿ ಉಕ್ಕಿ ಹರಿದಿದ್ದರಿಂದ ಕೋಲ್ಕತಾದ ಬೀದಿಯಲ್ಲಿ ತನ್ನ ಮಗುವನ್ನು ಹೆಗಲ ಮೇಲೆ ಕುಳ್ಳರಿಸಿಕೊಂಡು ರಸ್ತೆಯಲ್ಲಿ ಸಾಗುತ್ತಿರುವ ಅಮ್ಮ. ತಾಯಿಯ ಹೆಗಲ ಮೇಲೆ ಕೂತು ನೀರನ್ನೇ ತದೇಕಚಿತ್ತದಿಂದ ನೋಡುತ್ತಿರುವ ಮಗು ಏನು ಯೋಚಿಸುತ್ತಿರಬಹುದು?

ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳಾ?
ಫೀಫಾ ಫೈನಲ್ ಪಂದ್ಯದಲ್ಲಿ ಏಕೈಕ ಗೋಲ್ ಹೊಡೆದು ಜರ್ಮನಿಗೆ ಟ್ರೋಫಿ ದಕ್ಕಿಸಿಕೊಟ್ಟ ಯುವ ಆಟಗಾರ ಮಾರಿಯೋ ಗೋಟ್ಜೆ ತನ್ನ ಸುಂದರ ಪ್ರೇಯಸಿ ಆನ್ ಕ್ಯಾಥ್ರಿನ್ ಬ್ರೋಮೆಲ್ ಜೊತೆ ವಿಶ್ವಕಪ್ ನೊಂದಿಗೆ.

ದೇಹದಾನಕ್ಕಿಂತ ಮಹಾದಾನ ಇನ್ನೊಂದಿಲ್ಲ
ಭಾನುವಾರ ಅಸುನೀಗಿದ ವಿಶ್ವ ಹಿಂದೂ ಪರಿಷತ್ ನಾಯಕ ಗಿರಿರಾಜ್ ಕಿಶೋರ್ ಅವರ ದೇಹವನ್ನು ದೆಹಲಿಯ ಎಐಐಎಂಎಸ್‌ಗೆ ದಾನವಾಗಿ ನೀಡಲಾಯಿತು. ದೇಹದಾನಕ್ಕಿಂತ ಮಹಾದಾನ ಮತ್ತೊಂದಿಲ್ಲ.

ಹಸುಗೂಸಿನ ಪ್ರಾಣ ಉಳಿದರೆ ಸಾಕಪ್ಪಾ ದೇವರೆ
ಮಾಲ್ಡಾದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ ಹಲವಾರು ಹಸುಗೂಸುಗಳು ಅಸುನೀಗಿದ್ದು ತಾಯಂದಿರನ್ನು ಕಳವಳಕ್ಕೀಡು ಮಾಡಿದೆ. ಹುಟ್ಟಿರುವ ಕೂಸಿಗೆ ಹಾಲೂಡಿಸುತ್ತಿರುವ ತಾಯಿ.

ಕಡಲೇ ಉಕ್ಕಿಬಂದರೂ ಜೀವನ ನಿರಂತರ ಸಾಗುತ್ತಿರಲಿ
ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಮುಂಬೈನ ಅಲೆಗಳು ರಕ್ಕಸ ಗಾತ್ರದಲ್ಲಿ ತೀರವನ್ನು ಬಾರಿಸುತ್ತಿವೆ. ಇಂಥ ಪ್ರಳಯಾಂತರ ಅಲೆಗಳಿಗೆ ಹೆದರದೆ ವ್ಯಕ್ತಿಗಳಿಬ್ಬರು ಆನಂದಿಸುತ್ತಿದ್ದಾರೆ. ಜಿಂದಗಿ ಏಕ್ ಸಫರ್ ಹೈಸುಹಾನಾ. ಯಹಾ ಕಲ್ ಕ್ಯಾ ಹೋ ಕಿಸ್ನೆ ಜಾನಾ?

ಹುಂಬತನದ ಪರಮಾವಧಿ ಇದೇ ಅಲ್ವಾ?
ಸ್ಪೇನ್ ಸ್ಯಾನ್ ಫರ್ಮಿನ್ ಫೆಸ್ಟಿವಲ್ ನಲ್ಲಿ ರೋಷಾವೇಷದಿಂದ ಮುನ್ನುಗ್ಗಿ ಬರುತ್ತಿರುವ ಗೂಳಿಗಳನ್ನು ಧೈರ್ಯದಿಂದ ಎದುರಿಸುತ್ತಿರುವ ಗುಂಡಿಗೆಯ ಯುವಕರು. ಮುಂದೇನಾಗುತ್ತೋ ಬಲ್ಲವರು ಯಾರು?

ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಮೆರೆದ ಸೀರೆ
ನ್ಯೂಯಾರ್ಕ್ ನಲ್ಲಿ ನಡೆದ ಫ್ಯಾಷನ್ ಪರೇಡ್ ನಲ್ಲಿ ಸಾಂಪ್ರದಾಯಿಕವಾಗಿ ಸೀರೆಯುಟ್ಟ ಭಾರತೀಯ ನಾರಿ ಬೆಕ್ಕಿನ ನಡಿಗೆ ನಡೆಯುತ್ತಿರುವುದು. ನಾರಿಗೆ ಸೀರೆಗಿಂತ ಸುಂದರವಾದ ದಿರಿಸು ಯಾವುದಾದರೂ ಇದೆಯಾ?

ಚೀನಾ ಅಧ್ಯಕ್ಷರ ಜೊತೆ ಮೋದಿ
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್‌ನ ಫೋರ್ಟಲೇಝಾದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಡನೆಮಾತುಕತೆ ನಡೆಸಿದರು.

ಅಭೂತಪೂರ್ವ ಸ್ವಾಗತ:
ವಿಶ್ವಕಪ್‌ಜಯಿಸಿದ ಬಳಿಕ ತವರಿಗೆ ಬಂದಿಳಿದ ಜರ್ಮನಿಯ ಫುಟ್ಬಾಲ್ ಆಟಗಾರರಿಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು.

ಅಮಿತ್ ಶಾ ಸಭೆ:
ಬಿಜೆಪಿಯ ರಾಷ್ಟ್ರಧ್ಯಕ್ಷ ಅಮಿತ್‌ಶಾ, ಹಿರಿಯ ನಾಯಕ ಜೆಪಿ ನಡ್ಡಾ ಜಾರ್ಖಂಡ್‌ನ ಬಿಜೆಪಿಯ ನಾಯಕರ ಜೊತೆ ದೆಹಲಿಯ ಬಿಜೆಪಿಯ ಕೇಂದ್ರ ಕಚೇರಿಯಲ್ಲಿಸಭೆ ನಡೆಸುತ್ತಿರುವುದು.

ಇಸ್ರೇಲ್ ಕ್ಷಿಪಣಿ ದಾಳಿ
ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷ ಏಳನೇ ದಿನವೂ ಮುಂದುವರಿದಿದೆ.ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಇಸ್ರೆಲ್ ಕ್ಷಿಪಣಿ ದಾಳಿ ನಡೆಸಿದ್ದು, ಈ ಘರ್ಷಣೆಯಲ್ಲಿ
ಇದುವರೆಗೂ 175 ಮಂದಿ ಅಸುನಿಗಿದ್ದಾರೆ.

ಇಸ್ರೇಲ್ ದಾಳಿಗೆ ಕಾಶ್ಮೀರದಲ್ಲಿ ಪ್ರತಿಭಟನೆ:
ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications