ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ದಾಳಿಕೋರ ತಪ್ಪಿಸಿಕೊಳ್ಳೋಕೆ ನೆರವಾಗಿದ್ದು ಟಿವಿ!

|
Google Oneindia Kannada News

ಬೆಂಗಳೂರು ಮಾರ್ಚ್ 9: ನಾನು ಪ್ರತಿದಿನ ಟಿವಿ ನೋಡಿ ತಪ್ಪಿಸಿಕೊಳ್ಳೋದು ಹೇಗೆ ಅಂತ ಪ್ಲಾನ್ ಮಾಡ್ತಿದ್ದೆ. ಟಿವಿಯಲ್ಲಿ ನನ್ನ ಬಗ್ಗೆ ಪ್ರತಿದಿನ ಬರುತ್ತಿದ್ದ ನ್ಯೂಸ್ ಗಳು ಪೊಲೀಸರು ನನಗಾಗಿ ಎಲ್ಲೆಲ್ಲ ಹುಡುಕುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುತ್ತಿದ್ದವು ಎಂದು ಎಟಿ ಎಂ ದಾಳಿಕೋರ ಮಧಕರ ರೆಡ್ಡಿ ಹೇಳಿಕೊಂಡಿದ್ದಾನೆ.

ಇತ್ತೀಚೆಗೆ ಪೊಲೀಸರಿಗೆ ಸೆರೆಸಿಕ್ಕ ರೆಡ್ಡಿ ತಾನು 2013ರ ನವೆಂಬರ್ 19 ರಂದು ಬೆಂಗಳೂರಿನ ಜ್ಯೋತಿ ಉದಯ್ ಎಂಬುವವರ ಮೇಲೆ ಎಟಿ ಎಂ ನಲ್ಲಿ ದಾಳಿ ನಡೆಸಿದ ನಂತರ ಹೇಗೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದೆ ಎಂಬುದನ್ನು ಸವಿವರವಾಗಿ ಹೇಳಿದ್ದಾನೆ.[8 ದಿನಗಳ ಪೊಲೀಸ್ ಕಸ್ಟಡಿಗೆ ಎಟಿಎಂ ಹಲ್ಲೆಕೋರ ಮಧುಕರ್ ರೆಡ್ಡಿ]

News channels help me to escape from plice: Madhukar reddy, ATM attacker

ಘಟನೆ ನಡೆದ ಒಂದು ವರ್ಷದವರೆಗೂ ರೆಡ್ಡಿ ಕೇರಳದಲ್ಲಿದ್ದ. ಅಲ್ಲಿಯವರೆಗೂ ಅವನಿಗೆ ತನ್ನನ್ನು ಪೊಲೀಸರು ಎಲ್ಲೆಲ್ಲಿ ಹುಡುಕುತ್ತಿದ್ದಾರೆ ಎಂಬ ಮಾಹಿತಿ ನ್ಯೂಸ್ ಚಾನೆಲ್ ಗಳಿಂದ ದೊರಕುತ್ತಿತ್ತು. ಪೊಲೀಸರಿಗೆ ತಾನಿರುವ ಜಾಗ ತಿಳಿದಿದೆ ಎಂಬುದನ್ನೂ ನ್ಯೂಸ್ ಚಾನೆಲ್ ನಿಂದಲೇ ತಿಳಿದುಕೊಳ್ಳುತ್ತಿದ್ದ ಈತ ಅಲ್ಲಿಂದ ತಕ್ಷಣವೇ ಕಾಲುಕೀಳುತ್ತಿದ್ದ.[ಎಟಿಎಂ ಹಲ್ಲೆ ಪ್ರಕರಣದ ಆರೋಪಿ ಮಧುಕರ್ ರೆಡ್ಡಿ ಬೆಂಗಳೂರಿಗೆ]

ಕೊನೆಗೆ ಪೊಲೀಸರು ತನ್ನನ್ನು ಮರೆತಿದ್ದಾರೆ ಎಂದೆನ್ನಿಸಿ ಆಂಧ್ರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗಿ ಮೊನ್ನೆಯವರೆಗೂ ಹಾಯಾಗಿದ್ದ. ಹೇಗೂ ಪೊಲೀಸರು ತನ್ನನ್ನು ಮರೆತಿದ್ದಾರೆ ಎಂದುಕೊಂಡು ಹಾಯಾಗಿದ್ದ ರೆಡ್ಡಿ ಇತ್ತೀಚೆಗೆ ಅಚಾನಕ್ಕಾಗಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಆಂಧ್ರ ಪ್ರದೇಶದಲ್ಲಿ ಪೊಲೀಸರ ಕೈಗೆ ಸಿಕ್ಕ ರೆಡ್ಡಿಯನ್ನು ಇತ್ತೀಚೆಗೆ ಬೆಂಗಳೂರಿಗೆ ರವಾನಿಸಲಾಗಿದೆ.

English summary
The ATM attacker Madhukar reddy had collected news about him from various news channels. The news helped him a lot to escape from the police. Reddy himself told this to police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X