ಹೊಸ ವರ್ಷದ ದಿನದಂದು ಬೆಂಗಳೂರಿನಲ್ಲಿ ತ್ರಿಬಲ್ ಮರ್ಡರ್

ಬೆಂಗಳೂರು, ಜನವರಿ 01: ಬೆಂಗಳೂರಿನಲ್ಲಿ ಒಂದು ಕಡೆ 2018ನ್ನು ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸಿ ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರೆ, ಮತ್ತೊಂದಡೆ ಕ್ಷುಲ್ಲಕ ಕಾರಣಗಳಿಗೆ ಕುಡಿದ ಮತ್ತಿನಲ್ಲಿ ಮೂರು ಕೊಲೆಗಳು ನಡೆದಿರುವುದು ಅತ್ಯಂತ ದುಃಖಕರ ಸಂಗತಿ.

ಹೊಸ ವರ್ಷ ಆಚರಣೆಯ ಸಂಭ್ರಮದ ಅಮಲಿನಲ್ಲಿ ಭಾನುವಾರ ಮಧ್ಯರಾತ್ರಿ ನಗರದ ಬೊಮ್ಮನಹಳ್ಳಿ, ಜೆಪಿ ನಗರ ಹಾಗೂ ಜಯನಗರದಲ್ಲಿ ಹತ್ಯೆಗಳು ನಡೆದಿವೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿಯ ವರ್ಷಾಚರಣೆ ವೇಳೆ ಮಹಿಳೆಯರ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಆಗಿರುವ ಘಟನೆ ನಡೆದಿಲ್ಲ. ಎಲ್ಲವೂ ಸುಸೂತ್ರವಾಗಿ ವರ್ಷಾಚರಣೆ ನಡೆದಿದೆ. ಆದರೆ, ನಗರದಲ್ಲಿ ಈ ಮೂರು ಕೊಲೆಗಳು ಮಾತ್ರ ನಿಜಕ್ಕೂ ಆಘಾತ ತಂದಿದೆ.

New Year Celebration takes the toll! 3 Stabbed to death in drunken brawl incidents at Bengaluru

ಬೆಳ್ಳಂದೂರಿನಲ್ಲಿ ಕೊಲೆ: ಹೊಸ ವರ್ಷಾಚರಣೆ ಸಂಭ್ರದಲ್ಲಿ ಕೇಕ್ ಕತ್ತರಿಸುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಸ್ನೇಹಿತರೇ ಯುವಕನೊರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವರಾಮ್ (30) ಕೊಲೆಯಾದ ಯುವಕ. ಈ ಸಂಬಂಧ ಬೆಳ್ಳಂದೂರು ಪೊಲೀಸರು ಏಳು ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಜಯನಗರ: ಕುಡಿದ ಮತ್ತಿನಲ್ಲಿ ಅಮಿತ್ (22) ಎನ್ನುವ ಯುವಕನ್ನು ಗೆಳೆಯರೇ ಹತ್ಯೆ ಮಾಡಿರುವ ಘಟನೆ ಜಯನಗರದ ಶಾಕಂಬರಿ ನಗರದಲ್ಲಿ ನಡೆದಿದೆ.

ಜೆಪಿ ನಗರ: ಕ್ಷುಲ್ಲಕ ಕಾರಣಕ್ಕೆ ಗೆಳೆಯರು ಸೇರಿಕೊಂಡು ಹೇಮಂತ್ ಎನ್ನುವಾತನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ನೆಲಮಂಗಲ: ಇಲ್ಲಿನ ಶಿವಗಂಗೆ ದೇವಾಲಯದ ನೀರಿನ ಟ್ಯಾಂಕಿನಲ್ಲಿ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+