ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ಸಂಚಾರ ವ್ಯವಸ್ಥೆ

ಬೆಂಗಳೂರು, ನ. 23: ಚೆನ್ನೈ ಮೆಟ್ರೋ ರೈಲು ಮಾರ್ಗ ಕಾಮಗಾರಿಗಾಗಿ ಚೆನ್ನೈ ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ಸಂಚಾರ ವ್ಯವಸ್ಥೆಯ ಸೂಚನೆಯನ್ನು ಆವಡಿ ಪೊಲೀಸರು ಘೋಷಿಸಿದ್ದಾರೆ.

ಪೋರೂರಿನಿಂದ ಪೂನಮಲ್ಲಿ ಬೈಪಾಸ್‌ವರೆಗೆ ಚೆನ್ನೈ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸಲು ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಸಂಚಾರ ಬದಲಾವಣೆಯನ್ನು ಘೋಷಿಸಿಲಾಗಿದೆ.

ಈ ಹೊಸ ಸಂಚಾರ ವ್ಯವಸ್ಥೆಯು ನವೆಂಬರ್ 22 ರಿಂದ ಮುಂದಿನ ವರ್ಷ ಫೆಬ್ರವರಿ 11 ರವರೆಗೆ ಜಾರಿಯಲ್ಲಿರುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

New Traffic Guidelines for Chennai-Bengaluru Highway Vehicles

ಆವಡಿ ಪೊಲೀಸರು ಹೊರಡಿಸಿರುವ ಹೊಸ ಸಂಚಾರ ವ್ಯವಸ್ಥೆಗಳ ಪ್ರಕಾರ, ಚೆನ್ನೈ ಬೆಂಗಳೂರು ಹೆದ್ದಾರಿಯಲ್ಲಿ ನಜರೆತ್‌ಪೇಟೆ ಜಂಕ್ಷನ್‌ನಲ್ಲಿ ರಿಂಗ್ ರಸ್ತೆಯ ಕಡೆಗೆ ಸಾಗುವ ವಾಹನಗಳು ಮಿಂಜೂರು ಕಡೆಗೆ ಸರ್ವಿಸ್ ರಸ್ತೆಯನ್ನು ತೆಗೆದುಕೊಳ್ಳಲು ಎಡ ತಿರುವು ಪಡೆಯಲು ಸರ್ವೀಸ್ ರಸ್ತೆಯನ್ನು ತೆಗೆದುಕೊಳ್ಳುವಂತಿಲ್ಲ.

ಇದಕ್ಕೆ ಬದಲಾಗಿ ವಾಹನಗಳು ಕೆಲವು ಮೀಟರ್‌ಗಳಷ್ಟು ಮುಂದೆ ಸಾಗಿ, ಮೇಲ್ಸೇತುವೆಯ ಕೆಳಗೆ ಎಡದಿಂದ ರಿಂಗ್ ರಸ್ತೆಗೆ ಹೋಗಬೇಕು ಎಂದು ತಿಳಿಸಲಾಗಿದೆ.

ಅದೇ ರೀತಿ ರಿಂಗ್ ರಸ್ತೆಯಲ್ಲಿ ವಂಡಲೂರು ಕಡೆಯಿಂದ ಬರುವ ವಾಹನಗಳು ನಜರೆತ್‌ಪೇಟೆ ಜಂಕ್ಷನ್‌ನಲ್ಲಿ ಪೂನಮಲ್ಲಿ ಕಡೆಗೆ ಹೋಗಲು ಎಡ ತಿರುವು ಪಡೆದು ನೇರವಾಗಿ ಟೋಲ್ ಗೇಟ್ ಬಳಿ ಯು ಟರ್ನ್ ಪಡೆದು ಪೂನಮಲ್ಲಿಗೆ ತೆರಳಬೇಕು.

New Traffic Guidelines for Chennai-Bengaluru Highway Vehicles

ಇನ್ನು, ಸಂಚಾರ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಸಲಹೆಗಳಿದ್ದಲ್ಲಿ, ವಾಹನ ಚಾಲಕರು ಮತ್ತು ಸ್ಥಳಿಯ ನಿವಾಸಿಗಳು ತಮ್ಮ ಪ್ರತಿಕ್ರಿಯೆಯನ್ನು [email protected] ಗೆ ಮೇಲ್ ಮಾಡಬಹುದು ಎಂದು ಆವಡಿ ಪೊಲೀಸರು ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+