Property Tax: ಆಸ್ತಿದಾರರಿಗೆ ಹೊಸ ಶಾಕ್‌: ಮುಂದಿನ ತಿಂಗಳಿಂದ ಆಸ್ತಿ ತೆರಿಗೆ ಹೆಚ್ಚಳ ?!

Property Tax: ಬೆಂಗಳೂರಿನ 25 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಶಾಕ್‌ ನೀಡುವುದಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರ ಮುಂದಾಗಿದೆ. ಏಪ್ರಿಲ್ 1ರಿಂದ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಳವಾಗಲಿದೆ. ಕರ್ನಾಟಕ ಸರ್ಕಾರವು ನಗರದ ಎಲ್ಲಾ ಮನೆಗಳಿಂದ ಕಸ ವಿಲೇವಾರಿ ಶುಲ್ಕ (ಕಸ ಉತ್ಪಾದಕರಿಂದ ಬಳಕೆದಾರ ಶುಲ್ಕ)ವನ್ನು ಸಂಗ್ರಹಿಸುವುದಕ್ಕೆ ಅನುಮೋದನೆ ನೀಡಿದ್ದು. ಆಸ್ತಿದಾರರಿಗೆ ದೊಡ್ಡ ಶಾಕ್‌ ಕೊಡುವುದಕ್ಕೆ ರಾಜ್ಯದ ಪ್ರಮುಖ ಸ್ಥಳೀಯ ಸಂಸ್ಥೆ ಮುಂದಾಗಿದೆ.

ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿನಿಂದ ಒಂದಿಲ್ಲೊಂದು ಸೇವೆಗಳ ಬೆಲೆ ಏರಿಕೆ ಆಗುತ್ತಲ್ಲೇ ಇದೆ. ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವಕಾಲ ಅಂತಲೇ ಹೇಳಲಾಗುತ್ತಿದೆ. ಸಂಚಾರದಲ್ಲಿ ಬಸ್‌, ಮೆಟ್ರೋ ಹಾಗೂ ಆಟೋ ಬೆಲೆ ಏರಿಕೆಯಾಗಿದ್ದರೆ. ಹಾಲಿನ ಬೆಲೆ, ಕಾಫಿ, ಟೀ ಹಾಗೂ ಹೋಟೆಲ್ ತಿನಿಸುಗಳ ಬೆಲೆಯೂ ಏರಿಕೆಯಾಗಿದೆ. ಸಾರಿಗೆ ಸೇವೆ ಬೆಲೆ ಏರಿಕೆಯಾಗಿರುವುದರಿಂದ ಸಹಜವಾಗಿಯೇ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಆಸ್ತಿದಾರರಿಗೆ ಆಸ್ತಿ ತೆರಿಗೆ ಶಾಕ್‌ ಕೊಡುವುದಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನ ಬಾಡಿಗೆ ಮನೆಗಳ ಹಾಗೂ ಭೋಗ್ಯದ ಬೆಲೆಯೂ ಹೆಚ್ಚಳವಾಗುವ ಆತಂಕ ಶುರುವಾಗಿದೆ.

New Shock For Bengaluru Property Owners Property Tax Hike From April 1

ಆಸ್ತಿ ತೆರಿಗೆಯಲ್ಲಿ ಕಸ ಸಂಗ್ರಹಕ್ಕೂ ಶುಲ್ಕ ವಿಧಿಸಲಾಗುತ್ತದೆ. ಈಗಾಗಲೇ ಕಳೆದ ವರ್ಷದಿಂದಲೇ ಈ ಪ್ರಸ್ತಾವನೆಯ ಬಗ್ಗೆ ಚರ್ಚೆಯಾಗುತ್ತಿದ್ದು. ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದಕ್ಕೆ ಅನುಮೋದನೆ ನೀಡಿದೆ. ಆಸ್ತಿ ತೆರಿಗೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಬೆಂಗಳೂರಿನ ಆಸ್ತಿದಾರರಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಯಾಕೆಂದರೆ ಈಚೆಗಷ್ಟೇ ಬೆಂಗಳೂರಿನ ಮೆಟ್ರೋ ಪ್ರಯಾಣ ದರವನ್ನು ಶೇ 45ರಿಂದ 50ರಷ್ಟು ಹೆಚ್ಚಳ ಮಾಡಲಾಗಿದೆ. ಮೆಟ್ರೋ ಪ್ರಯಾಣ ದರ ಹೆಚ್ಚಳವಾದ ಒಂದೇ ವಾರದಲ್ಲಿ ಮತ್ತೊಂದು ಬೆಲೆ ಏರಿಕೆಯ ಶಾಕ್‌ ಎದುರಾಗಿದೆ.

ಬೆಂಗಳೂರಿನಲ್ಲಿ ಈಗ ಕಸ ಸಂಗ್ರಹ ಹಾಗೂ ವಿಲೇವಾರಿ ಜವಾಬ್ದಾರಿಯನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿ.(BSWML) ನಿರ್ವಹಿಸುತ್ತಿದೆ. ಕಸ ಸಂಗ್ರಹಕ್ಕೂ ಸೆಸ್ ವಿಧಿಸುವ ಸಂಬಂಧ ಕಳೆದ ವರ್ಷ ನವೆಂಬರ್‌ನಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಗರಾಭಿವೃದ್ಧಿ ಇಲಾಖೆಯು ಕಸ ಸಂಗ್ರಹ ಮಾಡಲು ಶುಲ್ಕವನ್ನು ವಿಧಿಸಲು ಒಪ್ಪಿಗೆ ನೀಡಿದೆ. ಇನ್ನು BSWML ಶುಲ್ಕ ವಿಧಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಷ್ಟು ಕೆಜಿ ಕಸ ಸಂಗ್ರಹವಾಗುತ್ತದೆ ಎನ್ನುವ ಆಧಾರದ ಮೇಲೆ ಶುಲ್ಕ‌ ವಿಧಿಸಲಾಗುತ್ತದೆ ಎಂದು DH ವರದಿ ಮಾಡಿದೆ.

ಆಸ್ತಿ ಮಾಲೀಕರಿಗೆ ಆರು ಮಾದರಿಯ ಸ್ಲ್ಯಾಬ್‌ಗಳ ಮೂಲಕ ಟ್ಯಾಕ್ಸ್‌ ವಿಧಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಟ್ಟಡದ ಪ್ರದೇಶ ಎಷ್ಟಿದೆ ಎನ್ನುವ ಆಧಾರದ ಮೇಲೂ ಆಸ್ತಿ ಮಾಲೀಕರಿಗೆ ಬಳಕೆದಾರ ಶುಲ್ಕವನ್ನು ವಿಧಿಸಲಾಗುತ್ತದೆ. ಒಟ್ಟಾರೆಯಾಗಿ 6 ವಿಭಿನ್ನ ಸ್ಲ್ಯಾಬ್‌ಗಳಿರಲಿವೆ. 600 ಚದರ ಅಡಿಯ ವರೆಗೆ ಇರುವ ಕಟ್ಟಡಗಳಿಗೆ ತಿಂಗಳಿಗೆ ಕನಿಷ್ಠ 10 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಮೂಲಕ ವರ್ಷಕ್ಕೆ ಒಟ್ಟು 120 ರೂಪಾಯಿ, 4,000 ಚದರ ಅಡಿಗಿಂತ ದೊಡ್ಡದಾಗಿರುವ ಕಟ್ಟಡಗಳಿಗೆ ತಿಂಗಳಿಗೆ ಗರಿಷ್ಠ ಮೊತ್ತ 400 ರೂಪಾಯಿ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಈ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+