ಇನ್ಮುಂದೆ ಬಾಡಿಗೆ ಮನೆ ಬೇಕಂದ್ರೆ ಇದೆಲ್ಲ ಇರಲೇಬೇಕು! ಬಂದಿದೆ ಹೊಸ ರೂಲ್ಸ್‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಒಂದೊಳ್ಳೆ ಬಾಡಿಗೆ ಮನೆ ಪಡೆಯೋದು ಅಂದ್ರೆ ಒಂದು ಯುದ್ಧ ಗೆದ್ದು ಬಂದಂತೆ ಅನ್ನೋ ಮಾತು ಕೇಳಿಬರುತ್ತೆ. ನಗರದಲ್ಲಿ ಎಲ್ಲೆಡೆಯೂ ಬಾಡಿಗೆ ಮನೆಗಳದ್ದೇ ಕಾರುಬಾರು. ವಾಸ್ತವ್ಯಕ್ಕೊಂದು ಅನುಕೂಲಕರವಾದ ಮನೆಯನ್ನು ಬಾಡಿಗೆಗೆ ಪಡೆಯುವಷ್ಟರಲ್ಲಿ ಬಸವಳಿಯೋದು ತಪ್ಪಲ್ಲ. ಆದರೆ, ಇನ್ನು ಮುಂದೆ ಬಾಡಿಗೆ ಮನೆ ಖರೀದಿಯು ಮತ್ತಷ್ಟು ಕಷ್ಟಕರವಾಗಲಿದೆ.

ಹೌದು, ಬೆಂಗಳೂರಿನ ಮನೆ ಮಾಲೀಕರು ಇನ್ನು ಮುಂದೆ ಬಾಡಿಗೆದಾರರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲು ಮುಂದಾಗಿದ್ದಾರೆ. ಮಾಲೀಕರು ಹೇಳುವ ಎಲ್ಲ ನಿಯಮಗಳಿಗೆ ಒಪ್ಪಿದರೆ ಮಾತ್ರವೇ ನಿಮಗೆ ಬಾಡಿಗೆಗೆ ಮನೆ ಸಿಗಲಿದೆ ಎಂದು ಹೇಳಲಾಗಿದೆ.

New Rules Are Coming For Renting Houses In Bengaluru

ಬೆಂಗಳೂರಿನಲ್ಲಿ ಹೆಚ್ಚಾಗಿ ಹೊರ ರಾಜ್ಯದವರು ಹಾಗೂ ಹೊರ ಜಿಲ್ಲೆಯವರು ಹೆಚ್ಚಾಗಿ ಬಾಡಿಗೆಗೆ ಬರುತ್ತಿದ್ದಾರೆ. ಆದರೆ, ಇತ್ತೀಚೆಗೆ ನಗರದಲ್ಲಿ ಹೊರ ರಾಜ್ಯಗಳಿಂದ ಬರುವ ಬಾಡಿಗೆದಾರರಿಂದ ಹಲವು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ದೂರಲಾಗಿದೆ. ಇತ್ತೀಚೆಗೆ ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಸಹ ಹೊರರಾಜ್ಯದ ವ್ಯಕ್ತಿಯೇ ಆರೋಪಿಯಾಗಿದ್ದ.

ಇಂತಹ ಭೀಕರ ಘಟನೆಗಳಿಂದಾಗಿ ಮಾಲೀಕರು ಹೊರರಾಜ್ಯದವರಿಗೆ ಬಾಡಿಗೆಗೆ ಮನೆ ನೀಡಲು ಹಿಂಜರಿಯುತ್ತಿದ್ದಾರೆ ಎಂದು ವರದಿಯಾಗಿದೆ. ಇಲ್ಲಿವರೆಗೆ ಎಷ್ಟೋ ಮನೆ ಮಾಲೀಕರು ಯಾವುದೇ ಸೂಕ್ತ ದಾಖಲೆಗಳನ್ನು ಪಡೆಯದೆ, ಬಾಡಿಗೆಗೆ ಮನೆಗಳನ್ನು ನೀಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರು ಅಪರಾಧ ಕೃತ್ಯಗಳಲ್ಲಿ ತೊಡಗಿ, ಕೊನೆಗೆ ಕಣ್ಮರೆಯಾಗುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚುವುದು ಸಹ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

New Rules Are Coming For Renting Houses In Bengaluru

ಹಾಗಾಗಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂಬ ನಿಟ್ಟಿನಲ್ಲಿ ಮನೆ ಮಾಲೀಕರು ಬಾಡಿಗೆಗೆ ಬರುವವರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರಲು ಮುಂದಾಗಿದ್ದಾರಂತೆ. ಇದರಿಂದ ಬ್ಯಾಚುಲರ್ಸ್‌ ಹಾಗೂ ಇನ್ನಿತರ ಉದ್ದೇಶಗಳಿಗೆ ಬೆಂಗಳೂರಿಗೆ ಬರುವವರಿಗೆ ಸಮಸ್ಯೆ ಎದುರಾಗಲಿದೆ.

ಇಲ್ಲಿವರೆಗೆ ಹಲವರು ತಮ್ಮ ಆಧಾರ್‌ ಕಾರ್ಡ್‌ ಕೊಡದೆ ಮನೆ ಬಾಡಿಗೆ ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಕಡ್ಡಾಯವಾಗಿ ಆಧಾರ್‌ ಮಾಹಿತಿಯನ್ನು ಮನೆ ಮಾಲೀಕರೊಂದಿಗೆ ಹಂಚಿಕೊಳ್ಳಬೇಕು. ಇದಕ್ಕಾಗಿ ಮನೆ ಮಾಲೀಕರು ಒಂದು ಸಹಾಯವಾಣಿ ತೆರೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರಿಂದ ಆಧಾರ್‌ ಅಸಲಿಯೋ? ನಕಲಿಯೋ? ಎಂದು ತಿಳಿಯಲು ಅನುಕೂಲವಾಗಲಿದೆ ಎಂದು ಬೇಡಿಕೆ ಇಟ್ಟಿದ್ದಾರೆ.

New Rules Are Coming For Renting Houses In Bengaluru

ಆಧಾರ್ ಜೊತೆಗೆ ಪಾನ್‌ ಕಾರ್ಡ್‌, ವೋಟರ್ ಐಡಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಒದಗಿಸಬೇಕು. ಪ್ರತಿ ರಸ್ತೆ ಹಾಗೂ ಗಲ್ಲಿಗಳಲ್ಲಿ ಅಲ್ಲಿನ ಸ್ಥಳೀಯ ಆಡಳಿತವು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇನ್ನು ಮನೆಯಲ್ಲಿ ಮೊದಲಿಗೆ ಎಷ್ಟು ಮಂದಿ ಬಾಡಿಗೆಗೆ ಇರುತ್ತಾರೋ ಅಷ್ಟೇ ಇರಬೇಕು. ಬಾಡಿಗೆ ಮನೆಗಳಲ್ಲಿ ಯಾವುದೇ ರೀತಿಯ ಪಾರ್ಟಿ ಆಯೋಜಿಸಿ ಮೋಜು ಮಾಡಲು ಅವಕಾಶ ಕೊಡುವುದಿಲ್ಲ ಎನ್ನುವ ರೂಲ್ಸ್‌ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.

ಭದ್ರತಾ ದೃಷ್ಟಿಯಿಂದ ಇದು ಒಳ್ಳೆಯ ಕ್ರಮ ಎಂದು ಹಲವರು ಸಹಮತ ವ್ಯಕ್ತಪಡಿಸುತ್ತಿದ್ದಾರೆ. ರಾಜಾರೋಷವಾಗಿ ಇಲ್ಲಿಗೆ ಬಂದು ಅಪರಾಧ ಹಾಗೂ ಇನ್ನಿತರ ಕೃತ್ಯ ಎಸಗುವವರಿಗೆ ಬ್ರೇಕ್‌ ಕೂಡ ಹಾಕಬಹುದು ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+