• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜುಲೈ 20ರ ನಂತರ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರಿ ದಂಡ

|

ಬೆಂಗಳೂರು, ಜುಲೈ 4: ಸಂಚಾರ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ವಿಧಿಸಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದರೂ ಕೂಡ ಯಾವತ್ತಿನಿಂದ ಜಾರಿಗೆ ಬರುತ್ತದೆ ಎನ್ನುವುದು ತಿಳಿದಿರಲಿಲ್ಲ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಜುಲೈ 20ರ ನಂತರ ಸಂಚಾರ ನಿಯಮ ಪಾಲಿಸದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ ಎಂದು ಹೆಚ್ಚುವರಿ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.ಬಾತಿವೇಗದ ಚಾಲನೆ, ಮೊಬೈಲ್‌ನಲ್ಲಿ ಸಂಭಾಷಣೆ ನಿರತ ವಾಹನ ಚಾಲನೆ, ವಿಮೆ ಇಲ್ಲದೆ ವಾಹನಗಳ ಚಾಲನೆ ಹಾಗೂ ನಿಲುಗಡೆ ನಿಷೇಧಿತ ಪ್ರದೇಶಗಳಲ್ಲಿ ವಾಹನ ನಿಲುಗಡೆ ಪ್ರಕರಣಗಳ ದಂಡ ಮೊತ್ತವನ್ನು ರಾಜ್ಯ ಸಾರಿಗೆ ಆದೇಶ ಹೊರಡಿಸಿತ್ತು. ಈ ಪರಿಷ್ಕೃತ ದಂಡ ಪ್ರಯೋಗವು ಶನಿವಾರದಿಂದ ನಗರ ವ್ಯಾಪ್ತಿ ಜಾರಿಗೆ ಬರಲಿದೆ.

ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?

ಪರಿಷ್ಕೃತ ದಂಡದನ್ವಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ದಂಡ ವಿಧಿಸಲು ಪೊಲೀಸರು ಬಳಸುವ ಡಿವೈಸ್‌ಗಳ ಸಾಫ್ಟ್‌ವೇರ್‌ಗಳನ್ನು ಉನ್ನತೀಕರಿಸಲಾಗಿದ್ದು, ಈ ಪ್ರಕ್ರಿಯೆ ಮುಗಿದ ಬಳಿಕ ಹೊಸ ನಿಯಮ ಅನ್ವಯವಾಗಲಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಮೊದಲ ಹಂತವಾಗಿ ಪರಿಷ್ಕೃತ ದಂಡ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಈಗಾಗಲೇ ಠಾಣೆಗಳ ಮಟ್ಟದಲ್ಲಿ ಆಟೋ, ಕ್ಯಾಬ್, ಬಸ್, ಶಾಲಾ ವಾಹನಗಳು, ಸರಕು ಸಾಗಾಣಿಕೆ ವಾಹನ ಚಶಲಕರು, ನಾಗರಿಕ ಹಿತರಕ್ಷಣಾ ಸಮಿತಿಗಳ ಹಾಗೂ ಜನ ಸಂಪರ್ಕ ಸಭೆ ಕರೆದು ಮಾಹಿತಿ ನೀಡಲಾಗಿದೆ.

ಅತಿ ವೇಗದ ಚಾಲನೆಗೆ 1000 ರೂ ದಂಡ, ಮೊಬೈಲ್ ಬಳಕೆಗೆ 2 ಸಾವಿರ ರೂ, ವಿಮೆ ಇಲ್ಲದ ವಾಹನ ಚಾಲನೆಗೆ 1 ಸಾವಿರ ರೂ, ನೋ ಪಾರ್ಕಿಂಗ್ನಲ್ಲಿ ಗಾಡಿ ನಿಲ್ಲಿಸಿದರೆ 1 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ.

English summary
In Bengaluru traffic department made a new rule. New rules and penalty for traffic violation is enacting from July 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X