ಬೆಂಗಳೂರಿನಲ್ಲಿ ಹೊಸ ಬೆಲೆ ಏರಿಕೆಯ ಶಾಕ್‌: ಮನೆಗಳ ಬಾಡಿಗೆ ಶೇ 10% ಜಾಸ್ತಿ!

ಬೆಂಗಳೂರಿನಲ್ಲಿ ಮನೆ ಬಾಡಿಗೆ ರೇಟ್‌ ಏಕಾಏಕಿ ದುಪ್ಪಟ್ಟು ಆಗುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಈಗಾಗಲೇ ಮನೆ ಬಾಡಿಗೆ ರೇಟ್‌ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿರ್ಧಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಧಾರಗಳಿಂದಾಗಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ರೇಟ್‌ ಇನ್ನಷ್ಟು ಜಾಸ್ತಿ ಆಗುವ ಮುನ್ಸೂಚನೆ ಸಿಕ್ಕಿದೆ. ಇದೀಗ ನಗರದಲ್ಲಿ ಕಂಪನಿಗಳ ವಾರ್ಷಿಕ ಸ್ಯಾಲರಿ ಹೆಚ್ಚಳಕ್ಕಿಂತಲೂ ಮನೆ ಬಾಡಿಗೆ ರೇಟ್‌ ಜಾಸ್ತಿ ಆಗಿದೆ ಎಂದು ಐಟಿ ಉದ್ಯೋಗಿಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು ಈ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆ ನಿರಂತರವಾಗಿ ಆಗುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರನಲ್ಲಿ ಮನೆಗಳ ಬಾಡಿಗೆ ಹೆಚ್ಚಳವು ಶುರುವಾಗಿದೆ. ಸಾಮಾನ್ಯವಾಗಿ ಮನೆ ಬಾಡಿಗೆ ಪ್ರಮಾಣವು ಶೇ 5ರಷ್ಟು ಹೆಚ್ಚಳವಾಗುತ್ತದೆ. ಆದರೆ ಇದೀಗ ಬೆಂಗಳೂರಿನ ವಿವಿಧ ಭಾಗದಲ್ಲಿ ಮನೆಗಳ ಬಾಡಿಗೆ ಪ್ರಮಾಣವು ಶೇ 10ರಷ್ಟು ಹೆಚ್ಚಳವಾಗುತ್ತಿದೆ.

New Price Hike Shock for Bengaluru Residents House Rents Increase By 10 Percentage

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಎಷ್ಟು ಸಂಬಳ ಬಂದರೂ ಸಾಕಾಗಲ್ಲ ಎನ್ನುವ ಪರಿಸ್ಥಿತಿ ಇದೆ. ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ನಿತ್ಯವೂ ಒಂದಿಲ್ಲೊಂದು ಶಾಕ್‌ ಕೊಡುತ್ತಲ್ಲೇ ಇದೆ. ಈಗ ಬೆಂಗಳೂರಿನಲ್ಲಿ ಕಸ ಸಂಗ್ರಹಕ್ಕೂ ಶುಲ್ಕ ವಿಧಿಸುವುದಕ್ಕೆ ನಿರ್ಧರಿಸಿರುವಾಗಲೇ ಬಾಡಿಗೆ ಬೆಲೆಯೂ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಆಸ್ತಿದಾರರು ನಗರದ ಬಾಡಿಗೆದಾರರಿಗೆ ಬಿಗ್‌ ಶಾಕ್‌ ಕೊಟ್ಟಿದ್ದಾರೆ.

ಐಟಿ ಉದ್ಯೋಗಿಗಳಿಗೆ ಬೆಂಗಳೂರಿನಲ್ಲಿ ಬೇರೆ ಕೆಲಸಗಾರರಿಗೆ ಹೋಲಿಕೆ ಮಾಡಿದರೆ ಹೆಚ್ಚು ಸಂಬಳವಿದೆ. ಆದರೆ, ಐಟಿ ಉದ್ಯೋಗಿಗಳಿಂದಲೇ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಹೆಚ್ಚಳ ಭರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ರೀತಿಯಾದರೆ ಇನ್ನುಳಿದ ಉದ್ಯೋಗದಲ್ಲಿ ಇರುವ ಉದ್ಯೋಗಿಗಳ ಪರಿಸ್ಥಿತಿ ಏನು ಎನ್ನುವ ಪ್ರಶ್ನೆ ಎದುರಾಗಿದೆ.

ನಗರದಲ್ಲಿ ಮಿತಿ ಮೀರಿ ಕೆಲವು ಮನೆ ಮಾಲೀಕರು ಬಾಡಿಗೆ ರೇಟ್‌ ಹೆಚ್ಚಳ ಮಾಡುತ್ತಿರುವ ಬಗ್ಗೆ ಸಾಫ್ಟವೇರ್‌ ಎಂಜಿನಿಯರ್‌ವೊಬ್ಬರು ಅಚ್ಚರಿಯ ಹಾಗೂ ಶಾಕಿಂಗ್ ಮಾಹಿತಿಯನ್ನು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. "ನನಗೆ ಈಚೆಗೆ ಕಂಪನಿಯಲ್ಲಿ ಸ್ಯಾಲರಿ ಶೇ 7.5ರಷ್ಟು ಹೆಚ್ಚಳವಾಗಿದೆ. ಆದರೆ, ಮನೆ ಮಾಲೀಕರು ಮನೆಯ ಬಾಡಿಗೆ ಮೊತ್ತವನ್ನು ಶೇ 10ರಷ್ಟು ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಈ ರೀತಿ ನೋಡಿದರೆ ಮುಂದೊಂದಿ ದಿನ ಬೆಂಗಳೂರಿನಲ್ಲಿ ಸ್ಯಾಲರಿಗಿಂತ ಮನೆಯ ಬಾಡಿಗೆಯೇ ಹೆಚ್ಚಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಮತ್ತು ಬಾಡಿಗೆಗೆ ಸಾಕಾಗುತ್ತಿಲ್ಲ: ಬೆಂಗಳೂರು ಸೇರಿದಂತೆ ಪ್ರಮುಖ ಐಟಿ ನಗರಗಳಲ್ಲಿ ಬರುವ ಸಂಬಳವು ತೆರಿಗೆ ಪಾವತಿ ಹಾಗೂ ಬಾಡಿಗೆ ಸೇರಿದಂತೆ ಖರ್ಚುಗಳಿಗೇ ಸಾಕಾಗುತ್ತಿಲ್ಲ ಎಂದು ಹಲವರು ಈ ಟ್ವೀಟ್‌ಗೆ ರಿಪ್ಲೈ ಮಾಡಿದ್ದಾರೆ. ಬೆಂಗಳೂರು ಮಾತ್ರವಲ್ಲ ಹೈದರಾಬಾದ್‌ ಸೇರಿದಂತೆ ಪ್ರಮುಖ ನಗರಗಳ ಪರಿಸ್ಥಿತಿ ಇದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ Ray ಎನ್ನುವವರು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಇದು ನಿಜ ಬೆಂಗಳೂರಿನಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+