ಬೆಂಗಳೂರಿನಲ್ಲಿ ಮರ ಬಿದ್ದು ವ್ಯಕ್ತಿ ಸಾ* ಬೆನ್ನಲ್ಲೇ ಹೊಸ ಬದಲಾವಣೆ!
ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಮರಗಳ ರಕ್ಷಣೆಯಲ್ಲಿ ಹೊಸ ನಿಯಮನ್ನು ಜಾರಿ ಮಾಡಲಾಗಿದೆ. ನಗರದಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಬೆನ್ನಲ್ಲೇ ಈ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ನಗರದಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ 1 ಮೀಟರ್ ಸುತ್ತಳತೆಯಲ್ಲಿ ಹಾಕಲಾಗಿರುವ ಕಾಂಕ್ರೀಟ್, ಕಲ್ಲು ಹಾಗೂ ಸಿಮೆಂಟ್ ಬ್ಲಾಕ್ ತೆರವು ಮಾಡಬೇಕು ಎನ್ನುವುದು ಸೇರಿದಂತೆ ಹಲವು ಹೊಸ ಬದಲಾವಣೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾಡಿದೆ. ಈ ಸಂಬಂಧ ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತಮತ್ತು ಕನಿಷ್ಠ 1 ಮೀಟರ್ ಸುತ್ತಳತೆಯಲ್ಲಿ ಹಾಕಲಾಗಿರುವ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್‌ಗಳನ್ನು ತೆರವು ಮಾಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಆದೇಶಿಸಿದ್ದಾರೆ.

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅವರ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಹಸಿರೀಕರಣಗೊಳಿಸುವ ಸಂದರ್ಭದಲ್ಲಿ ಹೆಚ್ಚಿನ ಮರಗಳ ಬುಡಗಳು ಕಾಂಕ್ರೀಟ್, ಟಾರ್ ಅಥವಾ ಇಂಟರ್‌ಲಾಕ್ ಪೇವರ್‌ಗಳಿಂದ ಮಾಡಿದ ಪಾದಚಾರಿ ಮಾರ್ಗಗಳಿಂದ ಮುಚ್ಚಲ್ಪಟ್ಟಿವೆ. ಇದರಿಂದಾಗಿ, ಮರಗಳ ಆರೋಗ್ಯ, ಬೆಳವಣಿಗೆ, ಬದುಕುಳಿಯುವಿಕೆಯ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಅಸಮರ್ಪಕ ಗಾಳಿ ಮತ್ತು ನೀರಿನ ಒಳಹರಿವಿನಿಂದ ಅವುಗಳ ಬೇರುಗಳ ಪೋಷಣೆಯ ದುಷ್ಪರಿಣಾಮ ಬೀರಲಿದೆ. ಅದರಿಂದ, ರಸ್ತೆ ಬದಿಯಲ್ಲಿ ನೆಡಲಾಗಿರುವ ವೃಕ್ಷಗಳ ಬೇರು ಆಳಕ್ಕೆ ಇಳಿಯದೆ ಮಳೆ, ಗಾಳಿಯಲ್ಲಿ ಬಿದ್ದು, ಆಗುತ್ತಿರುವ ಪ್ರಾಣಹಾನಿ ಮತ್ತು ಆಸ್ತಿ ಹಾನಿ ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮರಗಳ ಬೇರಿನ ವ್ಯವಸ್ಥೆಗೆ ಹಾನಿಯಾಗದಂತೆ ತಡೆಯಲು, ಪಾದಚಾರಿ ಮಾರ್ಗಗಳು ಅಥವಾ ರಸ್ತೆಗಳನ್ನು ನಿರ್ಮಿಸುವಾಗ, ಬೇರುಗಳಿಗೆ ನೀರು ಸೋರುವಂತೆ ಮಾಡಲು ಮರಗಳ ಬುಡದ ಸುತ್ತಲೂ ಸಾಧ್ಯವಾದಲ್ಲೆಲ್ಲಾ 1 ಮೀಟರ್ ಪ್ರದೇಶವನ್ನು ಕಾಂಕ್ರೀಟ್ ತೆಗೆಯಲು ಬಿಡಬೇಕು. ಆ ಪ್ರದೇಶವನ್ನು ಮಣ್ಣಿನಿಂದ ಸಮತಟ್ಟು ಮಾಡಬೇಕು ಮತ್ತು ಸಾಧ್ಯವಾದಲ್ಲೆಲ್ಲಾ ಹುಲ್ಲನ್ನು ನೆಡಬಹುದು. ರಸ್ತೆಗಳು ಅಥವಾ ಮಾರ್ಗಗಳ ಮಧ್ಯದ ಅಂಚಿನಲ್ಲಿ ಕಾಂಕ್ರೀಟ್ ಹಾಕುವುದು ಹಾಕುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶವನ್ನು ಅನುಸರಿಸುತ್ತಿರುವುದಾಗಿ ಹೇಳಲಾಗಿದೆ. ಈ ಆದೇಶದ ಅನ್ವಯ ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿನ ಪಾದಚಾರಿ ಮಾರ್ಗಗಳು ಅಥವಾ ರಸ್ತೆಗಳಲ್ಲಿ ಇರುವಂತಹ ಮರಗಳ ಸುತ್ತ ಕನಿಷ್ಠ 1 ಮೀಟರ್ ಸುತ್ತಳತೆಯಲ್ಲಿ ಹಾಕಲಾಗಿರುವ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೂಡಲೇ ತೆರವುಗೊಳಿಸಬೇಕು. ಜೊತೆಗೆ ಕಿರಿದಾದ ರಸ್ತೆಗಳು ಮತ್ತು ಮಾರ್ಗಗಳಲ್ಲಿ, ಸಾಧ್ಯವಾದಷ್ಟು, ಮರಗಳ ಸುತ್ತಲೂ ಕನಿಷ್ಠ 1 ಚದರ ಮೀಟರ್‌ನಷ್ಟು ಟಾಕು ಹಾಕದ ಅಥವಾ ಕಚ್ಚಾ ಪರಿಣಾಮಕಾರಿ ಪ್ರದೇಶವನ್ನು ಬಿಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications