ಸಂಚಾರ ದಟ್ಟಣೆ ಮಾಹಿತಿಯುಳ್ಳ ನೂತನ ಆ್ಯಪ್ 'ಟ್ರಾಫಿಕ್ ಅನಲೈಸರ್'
ಬೆಂಗಳೂರು, ಜನವರಿ20: ನಗರದಲ್ಲಿ ಉಂಟಾಗುವ ಸಂಚಾರ ದಟ್ಟಣೆಯ ಬಗ್ಗೆ ಮಾಹಿತಿ ಒದಗಿಸುವ ದೃಷ್ಟಿಯಿಂದ 'ಟ್ರಾಫಿಕ್ ಅನಲೈಸರ್' ಎನ್ನುವ ನೂತನ ಅಪ್ಲಿಕೇಷನ್ ನ್ನು ಅಭಿವೃದ್ಧಿಪಡಿಸಲಾಗಿದೆ.
ಗೂಗಲ್ ಸಂಸ್ಥೆ ಹಾಗೂ ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಯೋಗದಲ್ಲಿ ಈ ಆಪ್ ಸಿದ್ಧಪಡಿಸಲಾಗಿದೆ. ಸದ್ಯ ಎಸಿಪಿಗಳು ಆಪ್ ಬಳಕೆ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲ ಸಿಬ್ಬಂದಿಗೂ ಆ್ಯಪ್ ಲಭ್ಯವಾಗಲಿದೆ. ನಗರದ ಯಾವ ರಸ್ತೆಯಲ್ಲಿ ದಟ್ಟಣೆ ಇದೆ ಎಂಬ ಮಾಹಿತಿಯನ್ನು ಅಪ್ಲಿಕೇಷನ್ ತೋರಿಸಲಿದೆ.
ಅದು ದಟ್ಟಣೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳಿಗೆ ನೆರವಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಗೂಗಲ್ ಮ್ಯಾಪ್ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸಲಿದೆ. ಮೂರು ಬಣ್ಣಗಳ ಮೂಲಕ ದಟ್ಟಣೆಯ ಪ್ರಮಾಣ ಗೋಚರಿಸಲಿದೆ.

ವಿರಳ ಸಂಚಾರ ದಟ್ಟಣೆಗೆ, ಹಳದಿ, ಹೆಚ್ಚಿನ ಸಂಚಾರ ದಟ್ಟಣೆ ಇದ್ದರೆ ಕೆಂಪು ಹಾಗೂ ವಾಹನಗಳ ಸಂಚಾರ ಸುಗಮವಾಗಿದ್ದರೆ ಹಸಿರು ಬಣ್ಣವನ್ನು ತೋರಿಸಲಿದೆ. ಸಂಚಾರ ಪೊಲೀಸರು ಇದನ್ನು ನೋಡಿ ವಾಹನ ಸವಾರರಿಗೆ ಬದಲಿ ಮಾರ್ಗವನ್ನು ಸೂಚಿಸಬಹುದು. ಸಂಚಾರ ದಟ್ಟಣೆ ಇರುವ ಕಡೆ ಹೋಗದಂತೆ ತಡೆಯಬಹುದಾಗಿದೆ












Click it and Unblock the Notifications