Bengaluru 2nd Airport: ಆಸ್ತಿ ಖರೀದಿದಾರರ ನೆಚ್ಚಿನ ಪ್ರದೇಶವಾಗಿ ಬದಲಾದ ನೆಲಮಂಗಲ
ಬೆಂಗಳೂರು, ಡಿಸೆಂಬರ್ 16: ಉದ್ಯಾನ ನಗರಿ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಆದರೆ ವಿಮಾನ ನಿಲ್ದಾಣದ ಸ್ಥಳ ಯಾವುದು? ಎಂಬ ಗುಟ್ಟನ್ನು ಸರ್ಕಾರ ಬಿಟ್ಟುಕೊಟ್ಟಿಲ್ಲ. ನೆಲಮಂಗಲ ಬಳಿ ನಿರ್ಮಾಣ ಮಾಡಲಾಗುತ್ತದೆ ಎಂಬ ವರದಿಗಳಿವೆ. ವಿಮಾನ ನಿಲ್ದಾಣ ಯೋಜನೆ ಘೋಷಣೆ ಮಾತ್ರವಲ್ಲ ವಿವಿಧ ಕಾರಣಗಳಿಗೆ ನೆಲಮಂಗಲದಲ್ಲಿ ಆಸ್ತಿ ಮೌಲ್ಯ ಹೆಚ್ಚಳವಾಗುತ್ತಿದೆ, ಆಸ್ತಿ ಖರೀದಿದಾರರು, ಹೊಡಿಕೆದಾರರಿಗೆ ಈ ಪ್ರದೇಶ ಈಗ ಹಾಟ್ ಸ್ಪಾಟ್ ಆಗುತ್ತಿದೆ.
ಹೆಚ್ಚಿನ ವಾಹನ ದಟ್ಟಣೆ ಇಲ್ಲ, ಹಸಿರು ವಾತಾವರಣ ಸೇರಿದಂತೆ ಹಲವು ಕಾರಣಗಳಿಗೆ ನೆಲಮಂಗಲದಲ್ಲಿ ಭೂಮಿ ಖರೀದಿ ಮಾಡುವವರು, ಮನೆಗಳನ್ನು ಹುಡುಕುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ನೆಲಮಂಗಲದ ಮೇಲೆ ಬೆಂಗಳೂರು ನಗರದ ಜನರ ಕಣ್ಣು ಬಿದ್ದಿದೆ.

ಮೂಲ ಸೌಕರ್ಯ ಅಭಿವೃದ್ಧಿಗೊಳ್ಳುತ್ತಿದ್ದಂತೆಯೇ ನೆಲಮಂಗಲ ಜನರ ನೆಚ್ಚಿನ ತಾಣವಾಗುತ್ತಿದೆ. ಇದರ ಮೂಲಕ ಬೆಂಗಳೂರು-ಹಾಸನ ಮತ್ತು ಬೆಂಗಳೂರು-ಪುಣೆ ಹೆದ್ದಾರಿ ಹಾದು ಹೋಗುತ್ತದೆ. ನೆಲಮಂಗಲದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ತಲುಪುವುದು ಸಹ ಸುಲಭವಾಗಿದೆ. ಆದ್ದರಿಂದ ಈ ಕಡೆ ಹೆಚ್ಚಿನ ಜನರು ಮನೆಗಳನ್ನು ಹುಡುಕುತ್ತಿದ್ದಾರೆ. ಆಸ್ತಿ ಖರೀದಿ, ಹೂಡಿಕೆಗೆ ಗಮನ ಹರಿಸುತ್ತಿದ್ದಾರೆ.
ನೆಲಮಂಗಲ ಈಗ ಹಾಟ್ ಸ್ಟಾಟ್: 2023ರಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾದ ಬಳಿಕ ಆ ಮಾರ್ಗದಲ್ಲಿ ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸಂಪರ್ಕ ಸಿಕ್ಕ ಮೇಲೆ ಕನಕಪುರ ರಸ್ತಯ ಕಡೆಯ ಆಸ್ತಿ ಮೌಲ್ಯದಲ್ಲಿಯೂ ಏರಿಕೆ ಕಂಡುಬಂದಿದೆ. ಆದ್ದರಿಂದ ಈಗ ಜನರು ನೆಲಮಂಗಲ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಗಳು ಬೇಡಿಕೆ ಆಧರಿಸಿ, ಫ್ಲಾಟ್, ಮನೆ, ಬಡಾವಣೆಗಳನ್ನು ನಿರ್ಮಾಣ ಮಾಡುವತ್ತಲೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಬೆಂಗಳೂರಿನ ಒತ್ತಡದಿಂದ ತಪ್ಪಿಸಿಕೊಳ್ಳಲು ನೆಲಮಂಗಲ ಜನರ ಆಯ್ಕೆಯಾಗುತ್ತಿದೆ. ಇಲ್ಲಿಂದ ರಸ್ತೆ, ರೈಲು ಸಂಪರ್ಕ ಸುಲಭವಾಗಿದೆ. ಆದ್ದರಿಂದ ಈ ಭಾಗದಲ್ಲಿ ಹೂಡಿಕೆಗೆ, ಆಸ್ತಿ ಖರೀದಿಗೆ ಜನರು ಹೆಚ್ಚಿನ ಆಸಕ್ತಿವಹಿಸಿದ್ದಾರೆ ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ಹೇಳುತ್ತಿದ್ದಾರೆ. ಅಲ್ಲದೇ ಈಗ ನೆಲಮಂಗಲದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ಸುದ್ದಿಯೂ ಸಹ ಜನರ ಆಸ್ತಿ ಖರೀದಿ ಆಸಕ್ತಿಯನ್ನು ಹೆಚ್ಚಳ ಮಾಡಿದೆ.
ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ಯೋಜನೆ ತುಮಕೂರಿಗೆ ವಿಸ್ತರಣೆಯಾಗುತ್ತಿದೆ. ನೆಲಮಂಗಲಕ್ಕೆ ಹೊಂದಿಕೊಂಡಂತೆ ಮೂಲ ಸೌಕರ್ಯಗಳು ಹೆಚ್ಚಾಗುತ್ತಿವೆ, ಈ ಭಾಗದಲ್ಲಿ ಕಾರ್ಖಾನೆಗಳು ಹೆಚ್ಚಾಗಿ ಇಲ್ಲ, ಹಸಿರು ವಾತಾವರಣವಿದೆ. ಈ ಎಲ್ಲಾ ಕಾರಣಕ್ಕೆ ಜನರು ಈ ಭಾಗದಲ್ಲಿ ಮನೆ, ಫ್ಲಾಟ್‌ಗಳನ್ನು ನೋಡುತ್ತಿದ್ದಾರೆ. ವಾರಾಂತ್ಯದಲ್ಲಿ ಸೈಟುಗಳನ್ನು ವೀಕ್ಷಣೆ ಮಾಡಲು, ನಿರ್ಮಾಣಗೊಂಡಿರುವ ಬಡಾವಣೆಗಳನ್ನು ವೀಕ್ಷಣೆ ಮಾಡಲು ನೂರಾರು ಜನರು ಆಗಮಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಬೆಂಗಳೂರು ನಗರದ ಕೇಂದ್ರ ಭಾಗಕ್ಕೆ ಹೋಲಿಕೆ ಮಾಡಿದರೆ ನೆಲಮಂಗಲದಲ್ಲಿ ಮನೆ ಖರೀದಿ ಬಹಳ ಸುಲಭವಾಗಿದೆ. ಇಲ್ಲಿ ಶಾಂತಿಯುತ ವಾತಾವರಣವಿದೆ. ಮೊದಲು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಪ್ರದೇಶವನ್ನು ಜನರು ಆಯ್ಕೆ ಮಾಡುತ್ತಿದ್ದರು. ಆದರೆ ಈಗ ನೆಲಮಂಗಲದಂತಹ ಪ್ರದೇಶವನ್ನು ಜನರು ನಗರ ಜಂಜಾಟದಿಂದ ತಪ್ಪಿಸಿಕೊಳ್ಳಲು ಆಯ್ಕೆ ಮಾಡುತ್ತಿದ್ದಾರೆ.
ಕೌಟುಂಬಿಕ ವಾತಾವರಣಕ್ಕೆ ಇಷ್ಟವಾಗುವ ಮಾದರಿಯ ಫ್ಲಾಟ್, ಮನೆಗಳು ನೆಲಮಂಗಲದಲ್ಲಿವೆ. ಭವಿಷ್ಯದ ದೃಷ್ಟಿಯಿಂದ ಜನರು ಇಲ್ಲಿ ನೆಲೆಸಲು ಬಯಸುತ್ತಿದ್ದಾರೆ. ಆದ್ದರಿಂದ ಬೇಡಿಕೆ ಹೆಚ್ಚುತ್ತಿದ್ದು, ಆಸ್ತಿಗಳ ಮೌಲ್ಯ ಸಹ ಏರಿಕೆಯಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.












Click it and Unblock the Notifications