• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಶ್ಚಿಮ ಬಂಗಾಳದ ವ್ಯಕ್ತಿಯಿಂದ ಬೆಂಗಳೂರಿನಲ್ಲಿ ಡ್ರಗ್‌ ದಂಧೆ: 27 ಮಂದಿ ಬಂಧನ

|
Google Oneindia Kannada News

ಬೆಂಗಳೂರು, ಡಿ. 06: ವಿವಿಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಡ್ರಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಒಟ್ಟು 27 ಜನರನ್ನು ಬಂಧಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಂಧಿತ 27 ಜನರಲ್ಲಿ ಪೆಡ್ಲರ್‌ಗಳು ಮತ್ತು ನಿಷೇಧಿತ ಮಾದಕ ವಸ್ತುಗಳ ಬಳಕೆದಾರರೂ ಸೇರಿದ್ದಾರೆ.

ವೋಟರ್ ಐಡಿ ಮಿಸ್ಸಿಂಗ್ ಕೇಸ್: ಎಸ್‌ಐಟಿ ರಚನೆಗೆ ಹೈಕೋರ್ಟ್ ಸಿಜೆಗೆ ಮೊರೆವೋಟರ್ ಐಡಿ ಮಿಸ್ಸಿಂಗ್ ಕೇಸ್: ಎಸ್‌ಐಟಿ ರಚನೆಗೆ ಹೈಕೋರ್ಟ್ ಸಿಜೆಗೆ ಮೊರೆ

ವರದಿಯ ಪ್ರಕಾರ, ಈ ಡ್ರಗ್‌ ದಂಧೆ ಹಿಂದೆ ವ್ಯಕ್ತಿ ಪಶ್ಚಿಮ ಬಂಗಾಳದ ವ್ಯಕ್ತಿಯಿದ್ದು, ಆತನೇ ಸಂಪೂರ್ಣ ದಂಧೆ ಅನ್ನು ನಿರ್ವಹಿಸುತ್ತಿದ್ದಾನೆ ಎಂದು ಎನ್‌ಸಿಬಿ ಕಂಡುಹಿಡಿದಿದೆ.

ಹೈಡ್ರೋಪೋನಿಕ್ ಗಾಂಜಾ, ಕೊಕೇನ್ ಮತ್ತು ಎಲ್‌ಎಸ್‌ಡಿಯಂತಹ ಮಾದಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಇದನ್ನು ಡಾರ್ಕ್ ವೆಬ್, ಟೆಲಿಗ್ರಾಮ್ ಮತ್ತು ವಾಟ್ಸಾಪ್‌ನಂತಹ ವೇದಿಕೆಗಳ ಬಳಕೆದಾರರಿಗೆ ನೀಡುವ ವ್ಯಾಪಾರ ನಡೆಸಲಾಗುತ್ತಿತ್ತು.

ಇನ್ನು, ಈ ಮಾದಕ ವಸ್ತುಗಳನ್ನು ದೇಶದೊಳಗೆ ಆಮದು ಮಾಡಿಕೊಳ್ಳಲು ಮತ್ತು ಮಾದಕವಸ್ತು ಬಳಕೆದಾರರಿಗೆ ಕಳುಹಿಸಲು ಕೆಲವು ಅಂತರರಾಷ್ಟ್ರೀಯ ಕೊರಿಯರ್ ಸೇವೆಗಳನ್ನು ಸಹ ಬಳಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತಿಳಿಸಿದೆ.

ಬಂಧಿತರಲ್ಲಿ ಹೆಚ್ಚಿನವರು 20 ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು ಎಂದು ವರದಿ ಹೇಳಿದೆ. ಈ ಕಾರ್ಯಾಚರಣೆಯಲ್ಲಿ ಎನ್‌ಸಿಬಿಯಿಂದ ಬಂಧಿಸಲ್ಪಟ್ಟವರ ಪಟ್ಟಿಯಲ್ಲಿ ಕೆಲವು ಕಲಾವಿದರು ಮತ್ತು ಒಬ್ಬ ಇರಾನ್ ಪ್ರಜೆಯೂ ಇದ್ದಾರೆ.

ಎನ್‌ಸಿಬಿ ಬೆಂಗಳೂರು ಘಟಕದ ನಿರ್ದೇಶಕ ಪಿ ಅರವಿಂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಅಕ್ರಮ ವ್ಯಾಪಾರದಲ್ಲಿನ ಬೇಡಿಕೆ ಮತ್ತು ಹಣವನ್ನು ನೋಡಿದ ನಂತರ ಅನೇಕ ಬಳಕೆದಾರರು ಪೆಡ್ಲರ್‌ಗಳಾಗಿ ಬದಲಾಗಿದ್ದಾರೆ ಎಂದು ವರದಿಯಾಗಿದೆ.

English summary
Narcotics Control Bureau (NCB) in Bengaluru arrested 27 people in connection with a drug racket through various messaging platforms. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X