ಕುಮಾರಸ್ವಾಮಿಯಿಂದ ನವರಾತ್ರಿ ಗಿಫ್ಟ್, 'ನಮ್ಮ ಟೈಗರ್‌' ಆ್ಯಪ್‌ ಬಿಡುಗಡೆ

ಬೆಂಗಳೂರು, ಸೆಪ್ಟೆಂಬರ್ 22: ಕೊನೆಗೂ 'ನಮ್ಮ ಟೈಗರ್‌' ಆ್ಯಪ್‌ ಪ್ಲೇಸ್ಟೋರ್ ಗೆ ಬಂದಿದೆ. ಇದೇ ಸೋಮವಾರದಿಂದ (ಸೆ.25) ಚಾಲಕರ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, 20 ದಿನಗಳಲ್ಲಿ ಕ್ಯಾಬ್ ಸೇವೆ ಆರಂಭವಾಗಲಿದೆ.

ಗುರುವಾರ ಕುಮಾರಸ್ವಾಮಿ ಅವರ ಜೆ.ಪಿ. ನಗರದ ನಿವಾಸದಲ್ಲಿ 'ನಮ್ಮ ಟೈಗರ್‌' ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಯಿತು.

Navaratri gift from Kumaraswamy, 'Namma Tiger' app landed in Play Store

ಹಲವು ತಿಂಗಳ ಹಿಂದೆ ಓಲಾ ಮತ್ತು ಉಬರ್‌ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ಕ್ಯಾಬ್ ಚಾಲಕರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಯಾಬ್ ಸೇವೆ ಆರಂಭಿಸುವ ಪಣತೊಟ್ಟಿದ್ದರು.

ಅಂದುಕೊಂಡಂತೆ ನಡೆದಿದ್ದರೆ ಕಳೆದ ಯುಗಾದಿಗೇ ಕ್ಯಾಬ್ ಸೇವೆ ಆರಂಭಗೊಳ್ಳಬೇಕಿತ್ತು. ಆದರೆ, ಹಲವು ಎಡರು ತೊಡರುಗಳಿಂದಾಗಿ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಯೋಜನೆ ವಿಳಂಬವಾಗಿತ್ತು. ಇದೀಗ ನಿಧಾನವಾಗಿಯಾದರೂ 'ನಮ್ಮ ಟೈಗರ್‌' ಆ್ಯಪ್‌ ಗೆ ಚಾಲನೆ ಸಿಕ್ಕಿದೆ.

Navaratri gift from Kumaraswamy, 'Namma Tiger' app landed in Play Store

ಚಾಲಕರಿಗೆ ಮಾತ್ರ, ಗ್ರಾಹಕರಿಗೆ ಇನ್ನೂ ಲೇಟ್

ಟೈಗರ್ ಡ್ರೈವರ್ (Tygr Driver) ಹೆಸರಿನಲ್ಲಿ ಈ ಆ್ಯಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಈ ಆ್ಯಪ್ ಮೂಲಕ ಸೋಮವಾರದಿಂದ ಚಾಲಕರು ನೋಂದಣಿ ಮಾಡಿಕೊಳ್ಳಬಹುದು. 20 ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ. 20 ದಿನಗಳಲ್ಲಿ 10 ಸಾವಿರ ಚಾಲಕರ ನೋಂದಣಿ ಗುರಿ ಹೊಂದಲಾಗಿದೆ.

ಚಾಲಕರ ನೋಂದಣಿ ಮುಗಿದ ನಂತರ ಗ್ರಾಹಕರಿಗೆ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಆ ನಂತರ ಕ್ಯಾಬ್ ಸೇವೆ ಆರಂಭಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+