ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಚಾರ ಸಂಕಿರಣ: ವಿದ್ಯುತ್‌ ವಿತರಣಾ ಕಂಪನಿ ಖಾಸಗೀಕರಣ ಎಷ್ಟು ಸರಿ?

|
Google Oneindia Kannada News

ಬೆಂಗಳೂರು ಡಿಸೆಂಬರ್‌ 21: ಭಾರತೀಯ ವಿದ್ಯುತ್‌ ಕಾಯ್ದೆ -2003 ಕ್ಕೆ ತಿದ್ದುಪಡಿ ಹಾಗೂ ವಿದ್ಯುತ್‌ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯನ್ನು ವಿರೋಧಿಸುವ ಬಗ್ಗೆ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಕರ್ನಾಟಕ ವಿದ್ಯುತ್‌ ಮಂಡಳಿ ನೌಕರರ ಸಂಘಗಳ ಒಕ್ಕೂಟ ಡಿಸೆಂಬರ್‌ 23 ರಂದು ಬೆಂಗಳೂರಿನಲ್ಲಿ ಆಯೋಜಿಸಿದೆ.

ಈಗಾಗಲೇ ಹಲವಾರು ಹಂತಗಳಲ್ಲಿ ಈ ಪ್ರಸ್ತಾವನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸುವುದು ಈ ವಿಚಾರ ಸಂಕಿರಣದ ಪ್ರಮುಖ ಉದ್ದೇಶವಾಗಿದೆ.

National level Debate on Privatization of KPTCL

ನಗರದ ಕೆಇಬಿ ಇಂಜಿನಿಯರ್ಸ್‌ ಅಸೋಷಿಯೇಷನ್‌ನ ರಜತ ಮಹೋತ್ಸವ ಸಭಾಂಗದಣದಲ್ಲಿ 11 ಗಂಟೆಗೆ ಪ್ರಾರಂಭವಾಗುವ ಈ ವಿಚಾರ ಸಂಕಿರಣದಲ್ಲಿ ಅಖಿಲ ಭಾರತ ವಿದ್ಯುತ್‌ ನೌಕರರ ಹಾಗೂ ಅಧಿಕಾರಿಗಳ ಸಮನ್ವಯ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ಅಖಿಲ ಭಾರತ ವಿದ್ಯುತ್‌ ಇಂಜಿನೀಯರುಗಳ ಓಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ವಿದ್ಯುತ್‌ ಮಂಡಳಿ ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರೈತ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ದಲಿತ ಸಂಘಗಳ ಒಕ್ಕೂಟದ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು, ಕಾಸಿಯಾ, ಕರ್ನಾಟಕ ವಿದ್ಯುತ್‌ ನಿಗಮ ಇಂಜಿನೀಯರಿಂಗ್‌ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಸಂಘಟನೆಗಳು ಒಂದೇ ವೇದಿಕೆಯ ಅಡಿಯಲ್ಲಿ ಚರ್ಚೆ ನಡೆಸಲಿದ್ದು. ಮುಂದಿನ ಹೋರಾಟ ರೂಪು ರೇಷೆಗಳನ್ನು ರೂಪಿಸಲಿದ್ದಾರೆ.

English summary
National Debate on Privatization of Karnataka Power Transfer Corporation Limited on Dec 23 at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X