ಬೆಂಗಳೂರಿಗೆ ಮೋದಿ, ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು, ಏ.2 : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಕಾರಣ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡಿದ್ದಾರೆ. ಏ.3ರಂದು ಬಸವನಗುಡಿಯಲ್ಲಿ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಏ.3ರ ಶುಕ್ರವಾರ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಲಿದ್ದಾರೆ. ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿನ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.[ಬೆಂಗಳೂರಲ್ಲಿ ಬಿಜೆಪಿ ಕಾರ್ಯಕಾರಣಿ, ವಿವರಗಳು]

Traffic diversions

ಈ ರಸ್ತೆಯಲ್ಲಿ ಏಕ ಮುಖ ಸಂಚಾರ : ಪಂಪಮಹಾಕವಿ ರಸ್ತೆ, ವಾಣಿ ವಿಲಾಸ್‌ ರಸ್ತೆ ಜಂಕ್ಷನ್‌ನಿಂದ ಉತ್ತರಾಧಿಮಠ ರಸ್ತೆ ಮತ್ತು ವಾಣಿ ವಿಲಾಸ್‌ ರಸ್ತೆ ಜಂಕ್ಷನ್‌ವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. [ಬೆಂಗಳೂರಿಗೆ ಮೋದಿ : ಕಾರ್ಯಕ್ರಮಗಳು, ಭದ್ರತೆ]

ಮಾರ್ಗ ಬದಲಾವಣೆ : ಕೆ.ಆರ್.ರೋಡ್, ನ್ಯಾಷನಲ್‌ ಕಾಲೇಜು ಜಂಕ್ಷನ್‌ನಿಂದ ಪ್ರೊ.ಶಿವಶಂಕರ್‌ ವೃತ್ತದ ಕಡೆಗೆ ಸಾಗುವ ಬಿಎಂಟಿಸಿ ಬಸ್ಸುಗಳು ಡಯಾಗ್ನಲ್ ರಸ್ತೆ, ಸಜ್ಜನರಾವ್‌ ವೃತ್ತದಲ್ಲಿ ಸಾಗಿ ಕೊಂಡಜ್ಜಿ ಬಸಪ್ಪ ವೃತ್ತದಲ್ಲಿ ಎಡ ತಿರುವುದು ಪಡೆದು ಪ್ರೊ.ಶಿವಶಂಕರ್‌ ವೃತ್ತದ ಕಡೆ ತೆರಳಬೇಕು. [ಆಟೋ ಚಾಲಕನ ಪ್ರಾಮಾಣಿಕತೆಗೆ ಬೆಲೆಕಟ್ಟಲು ಸಾಧ್ಯವೆ?]

ಕೆ.ಆರ್.ರೋಡ್, ಶಿವಶಂಕರ್‌ ವೃತ್ತದಿಂದ ನ್ಯಾಷನಲ್ ಕಾಲೇಜು ವೃತ್ತದ ಕಡೆಗೆ ಸಂಚರಿಸುವ ಬಸ್ಸು ಶಿವಶಂಕರ್‌ ವೃತ್ತದಲ್ಲಿ ಎಡ ತಿರುವು ಪಡೆದು ಕೊಂಡಜ್ಜಿ ಬಸಪ್ಪ ವೃತ್ತದಲ್ಲಿ ಬಲ ತಿರುವು ಪಡೆದು ಸಜ್ಜನ್‌ ರಾವ್‌ ವೃತ್ತ, ವಾಣಿ ವಿಲಾಸ್‌ ರಸ್ತೆ, ಶೇಷ್‌ ಮಹಲ್‌ ಜಂಕ್ಷನ್‌, ಹೋಮ್ ಸ್ಕೂಲ್‌ ಜಂಕ್ಷನ್‌ನಲ್ಲಿ ಸಾಗಿ ಆರ್ಮುಗಂ ವೃತ್ತದಲ್ಲಿ ಬಲ ತಿರುವು ಪಡೆದು ಡಿ.ಎಂ.ಜಂಕ್ಷನ್‌ ಮೂಲಕ ಕೆ.ಆರ್.ರೋಡ್ ತಲುಪಬೇಕು.

ಎಲ್ಲಿ ವಾಹನ ನಿಲುಡೆ : ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ಬುಲ್‌ ಟೆಂಪಲ್‌ ರಸ್ತೆಯ ಮರಾಠ ಹಾಸ್ಟೆಲ್ ಆವರಣ, ಉದಯಭಾನು ಆಟದ ಮೈದಾನ, ಹಯವದನರಾವ್‌ ರಸ್ತೆಯ ಕೊಹಿನೂರ್‌ ಆಟದ ಮೈದಾನ ಮತ್ತು ಜಯನಗರ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಿಲುಗಡೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+