ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಸಮಾವೇಶದಿಂದ ಹೈಕೋರ್ಟ್ ನಿಯಮ ಉಲ್ಲಂಘನೆ?

By Mahesh
|
Google Oneindia Kannada News

ಬೆಂಗಳೂರು, ನ.6: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಜನರಿಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಮೋದಿ ಅವರ ಸಮಾವೇಶ ಹೈಕೋರ್ಟ್ ಆದೇಶದ ಉಲ್ಲಂಘನೆ ಮಾಡುತ್ತಿದೆ ಎಂದು ನಗರದ ಸರ್ಕಾರೇತರ ಸಂಸ್ಥೆ ಜನಾಗ್ರಹ ಹೇಳಿದೆ.

ನವೆಂಬರ್ 17, 2008ರಂದು ನಗರದ ಅರಮನೆ ಮೈದಾನದಲ್ಲಿ ಜನತಾ ದಳ(ಸೆಕ್ಯುಲರ್) ನಡೆಸಿದ ಸಮಾವೇಶದಿಂದ ಏಳೆಂಟು ಗಂಟೆಗಳ ಟ್ರಾಫಿಕ್ ಜಾಮ್ ಏರ್ಪಟ್ಟಿತ್ತು. ಸಾರ್ವಜನಿಕರಿಗೆ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸಾರ್ವಜನಿಕ ಸಭೆಗಳನ್ನು ನಡೆಸುವವರಿಗೆ ಹೊಸ ನೀತಿ, ನಿರ್ದೇಶನಗಳನ್ನು ನೀಡುವಂತೆ ಆದೇಶಿಸಿತ್ತು.

ಜನಾಗ್ರಹ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ 25,000ಕ್ಕೂ ಅಧಿಕ ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಹೇಳಲಾಗಿದೆ. ಈ ಬಗ್ಗೆ ಹೈಕೋರ್ಟ್ ನಿರ್ದೇಶನವಿದ್ದರೂ ಸರ್ಕಾರ ತನ್ನ ಹೊಸ ನೀತಿಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆ ಮಿತಿ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.

Modi's Bangalore Rally flouts High Court Norms

ಸರ್ಕಾರ ಈ ಬಗ್ಗೆ ನಮ್ಮ ಇಲಾಖೆಗೆ ಏನು ಸೂಚನೆ ನೀಡಿಲ್ಲ. ಬದಲಿಗೆ ಸಮಾವೇಶದ ಸಂದರ್ಭದಲ್ಲಿ ಏನಾದರೂ ಅವಘಢ ಸಂಭವಿಸಿದರೆ ಪೊಲೀಸ್ ಇಲಾಖೆ ಅಧಿಕಾರಿಗಳೆ ಜವಾಬ್ದಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.

ಜೆಡಿಎಸ್ ಸಮಾವೇಶವನ್ನು ಹಿಂತಿರುಗಿ ನೋಡಿದರೆ ಸಾವಿರಾರು ವಿದ್ಯಾರ್ಥಿಗಳು ಗಂಟೆಗಟ್ಟಲೇ ರಸ್ತೆಯಲ್ಲೇ ಉಳಿದಿದ್ದರು. ಐದಾರು ಆಂಬ್ಯುಲೆನ್ಸ್ ದಾರಿಗಾಣದೆ ಶಬ್ದ ಮಾಡುತ್ತಾ ನಿಂತಲ್ಲೇ ನಿಲ್ಲಬೇಕಾಯಿತು. ಹಲವಾರು ಮಂದಿ ತಮ್ಮ ವಿಮಾನಯಾನ ತಪ್ಪಿಸಿಕೊಂಡಿದ್ದರು. ಈಗ ಮೋದಿ ಸಮಾವೇಶಕ್ಕೆ ಸುಮಾರು 3-5 ಲಕ್ಷ ಜನ ಬರುವ ನಿರೀಕ್ಷೆಯಿದೆ.

ರಾಜ್ಯದ ವಿವಿಧೆಡೆಗಳಿಂದ 14 ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಸಮಾವೇಶ ಯಶಸ್ಸುಗೊಳಿಸಲು ಶಾಸಕರು, ಪದಾಧಿಕಾರಿಗಳು ಜವಾಬ್ದಾರಿ ಹೊತ್ತಿದ್ದಾರೆ. ಆರ್ ಆಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಐಟಿ ಬಿಟಿ ಉದ್ಯೋಗಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಮೋದಿ ಸಮಾವೇಶದ ದಿನ (ನ.17) ರಮಣ ಮಹರ್ಷಿ ರಸ್ತೆಯ ಸದಾಶಿವ ನಗರ ಜಂಕ್ಷನ್ ನಿಂದ ಮೇಖ್ರಿ ವೃತ್ತದವರೆಗೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಯಲಹಂಕ, ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.

English summary
Gujarat Chief Minister Narendra Modi set to address a mammoth three-lakh strong gathering at 'Krishna Vihar' in the heart of the City. Bangalore-based 'Janaagraha,' in a public interest litigation stated that no more than 25,000 people should be allowed to attend a rally in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X