ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರ್ಶ್ವವಾಯುಪೀಡಿತ 102 ವರ್ಷದ ವ್ಯಕ್ತಿ ರಕ್ಷಿಸಿದ ನಾರಾಯಣ ಆಸ್ಪತ್ರೆ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 1: ಪಾರ್ಶ್ವವಾಯು ಪೀಡಿತರಾಗಿದ್ದ 102 ವರ್ಷ ವಯಸ್ಸಿನ ರೋಗಿಗೆ ವೈಟ್‍ಫೀಲ್ಡ್ ನಲ್ಲಿ ಇರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆನೀಡಿದ್ದಾರೆ. ಥ್ರೊಂಬೊಲೈಸಿಸ್ ನೀಡುವ ಮೂಲಕ ಜೀವರಕ್ಷಣೆ ಮಾಡಿದ್ದಾರೆ.

ರಾಮಸ್ವಾಮಿ ಅವರು ವೈಟ್‍ಫೀಲ್ಡ್‍ನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಒಮ್ಮೆ ಏಕಾಏಕಿ ತಮ್ಮ ಎಡಗೈ ಮತ್ತು ಕಾಲಿನಲ್ಲಿ ದುರ್ಬಲತೆ ಕಾಣಿಸಿಕೊಂಡಿತು. ಕುಟುಂಬ ಸದಸ್ಯರು ಇದು ಸಾಮಾನ್ಯ ದೌರ್ಬಲ್ಯವಲ್ಲ ಎಂದು ಅರಿತುಕೊಂಡರು, ತಕ್ಷಣವೇ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಿದರು.
ರೋಗದ ಲಕ್ಷಣಗಳು ಇದು ಪಾರ್ಶ್ವವಾಯುವಿಗೆ ಹೋಲಿಕೆ ಆಗುತ್ತಿತ್ತು.

ಗ್ರೀನ್ ಕಾರಿಡಾರ್ ಮೂಲಕ ಜೀವಂತ ಹೃದಯ ರವಾನೆ, ಶಸ್ತ್ರಚಿಕಿತ್ಸೆ ಯಶಸ್ವಿಗ್ರೀನ್ ಕಾರಿಡಾರ್ ಮೂಲಕ ಜೀವಂತ ಹೃದಯ ರವಾನೆ, ಶಸ್ತ್ರಚಿಕಿತ್ಸೆ ಯಶಸ್ವಿ

ಡಾ.ಎನ್.ದೀಪಕ್, ಅಸೋಸಿಯೇಟ್ ಕನ್ಸಲ್ಟಂಟ್, ನ್ಯೂರಾಲಾಜಿಸ್ಟ್, ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ವೈಟ್‍ಫೀಲ್ಡ್ ಮತ್ತು ತಂಡ ಮಿದುಳಿನ ಎಂಆರ್‍ಐ ಸ್ಕ್ಯಾನ್ ಮಾಡಿಸಿತು. ಡಯಾಗ್ನೋಸಿಸ್‍ನಲ್ಲಿ ರಾಮಸ್ವಾಮಿ ಅವರ ಮಿದುಳಿನ ಬಲಭಾಗದಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದು, ಸಮರ್ಪಕವಾಗಿ ರಕ್ತಪೂರೈಕೆಯಾಗುತ್ತಿಲ್ಲ ಎಂಬುದು ಕಂಡುಬಂತು.

Narayana Multispeciality Hospital saves a 102 year old patient from paralysis

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ತನ್ನ ಸುದೀರ್ಘ ಅನುಭವವನ್ನು ಆಧರಿಸಿ ರೋಗಿ ಪರಿಸ್ಥಿತಿಯ ವಿಶ್ಲೇಷಣೆಯ ನಂತರ ಥ್ರೊಂಬೊಲೈಸಿಸ್‍ಗೆ ಶಿಫಾರಸು ಮಾಡಿತು.

ಥ್ರೋಂಬೊಲೈಸಿಸ್ ಎಂಬುದು ಒಂದು ಚಿಕಿತ್ಸಾಕ್ರಮವಾಗಿದ್ದು, ರಕ್ತನಾಳಗಳಲ್ಲಿ ಹೆಪ್ಪುಗಟ್ಟಿರುವ ಅಪಾಯಕಾರಿ ಅಂಶವನ್ನು ತೆಗೆದು, ಸರಾಗಾವಾಗಿ ರಕ್ತದ ಚಲನೆಗೆ ಅವಕಾಶ ಮಾಡಿಕೊಡುವುದಾಗಿದೆ. ಥ್ರೊಂಬೊಲೈಸಿಸ್ ಅನ್ನು ಇಂಟ್ರಾವೆನಸ್ (ಐವಿ)ಲೈನ್ ಇಂಜೆಕ್ಷನ್ ಮೂಲಕ ಔಷಧ ನೀಡಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆಯುವುದೇ ಆಗಿದೆ. ರೋಗಿಯನ್ನು ಈ ಮೂಲಕ ಪಾರ್ಶ್ವವಾಯುವಿನಿಂದ ಮೂರು ದಿನದಲ್ಲಿಯೇ ರಕ್ಷಿಸಲು ಸಾಧ್ಯವಾಗಿದೆ. ಇಂದು ರೋಗಿಯು ಸಾಮಾನ್ಯವಾದ ನಿವೃತ್ತ ಜೀವನವನ್ನು ಅನುಭವಿಸುತ್ತಿದ್ದಾರೆ.

ಪ್ರಕರಣದ ವಿವರ ನೀಡಿದ ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‍ನ ಅಸೋಸಿಯೇಟ್ ಕನ್ಸಲ್ಟಂಟ್ (ನ್ಯೂರಾಲಾಜಿಸ್ಟ್) ಡಾ.ದೀಪಕ್ ಎನ್ ಅವರು, 'ಥ್ರೊಂಬೊಲೈಸಿಸ್ ಚಿಕಿತ್ಸೆಯನ್ನು ಹಿರಿಯ ನಾಗರಿಕರಿಗೆ ನೆರವೇರಿಸುವುದು ಸವಾಲಿನ ಕೆಲಸ. ವಯಸ್ಸಿಗೆ ಅನುಗುಣವಾಗಿ ಮಿದುಳು ದುರ್ಬಲವಾಗಲಿದೆ. ಥ್ರೊಂಬೊಲೈಸಿಸ್‍ನಂಥ ಶಕ್ತಿಯುತವಾದ ಚಿಕಿತ್ಸೆಯು ಮಿದುಳಿನಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು. ರಾಮಸ್ವಾಮಿ ಅವರು ಇಂಥ ಚಿಕಿತ್ಸೆಗೆ ಒಳಗಾದ ಅತಿ ಹಿರಿಯ ನಾಗರಿಕರಾಗಿದ್ದಾರೆ' ಎಂದು ತಿಳಿಸಿದರು.

Narayana Multispeciality Hospital saves a 102 year old patient from paralysis

ಚಿಕಿತ್ಸೆಗೆ ಸಂತಸವನ್ನು ವ್ಯಕ್ತಪಡಿಸಿದ ರಾಮಸ್ವಾಮಿ ಅವರು, 'ಡಾ. ದೀಪಕ್ ಮತ್ತು ಅವರ ತಂಡವು ನಮ್ಮ ಕುಟುಂಬಕ್ಕೆ ಪೂರ್ಣಬೆಂಬಲ ನೀಡಿತು. ಈ ವಯಸ್ಸಿನಲ್ಲಿ ಪಾಶ್ರ್ವವಾಯು ಪೀಡಿತನಾಗುವುದು ಕುಟುಂಬದ ಮೇಲೆ ಖಂಡಿತವಾಗಿ ಹೆಚ್ಚಿನ ಒತ್ತಡ ಬೀಳುತ್ತಿತ್ತು. ಆದರೆ, ಸೂಕ್ತ ಚಿಕಿತ್ಸೆಯ ಮೂಲಕ ಆಸ್ಪತ್ರೆ ನನಗೆ ಬದುಕು ನೀಡಿದೆ. ಈ ಚಿಕಿತ್ಸೆ ಕೊಡಿಸಿದ್ದಕ್ಕಾಗಿ ನಾನು ಕುಟುಂಬ ಸದಸ್ಯರಿಗೂ ಆಭಾರಿಯಾಗಿದ್ದೇನೆ' ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‍ಒ) ಪ್ರಕಾರ, ದೀರ್ಘಕಾಲದ ಅಸ್ವಸ್ಥತೆಗೆ ಕಾರಣವಾಗುವ ನರರೋಗ ಸಮಸ್ಯೆಗಳಲ್ಲಿ ಪಾಶ್ರ್ವವಾಯು ಸಾಮಾನ್ಯವಾದುದು. ವಾಸ್ತವವಾಗಿ, ಭಾರತದಲಿ ಇದು ಸಾವಿಗೆ ಕಾರಣವಾಗುವ ಎರಡನೇ ಸಾಮಾನ್ಯ ಸಮಸ್ಯೆಯೂ ಆಗಿದೆ.

ನಾರಾಯಣ ಹೆಲ್ತ್ ನೆಟ್‍ವರ್ಕ್: ನಾರಾಯಣ ಹೆಲ್ತ್ ಬೆಂಗಳೂರಿನ ಜನರಿಗೆ ತನ್ನ ಏಳು ನೆಟ್‍ವರ್ಕ್ ಆಸ್ಪತ್ರೆ ಮೂಲಕ ಸೇವೆ ಒದಗಿಸುತ್ತಿದೆ. ಬೊಮ್ಮಸಂದ್ರ, ಎಚ್‍ಎಸ್‍ಆರ್ ಲೇಔಟ್, ವೈಟ್‍ಫೀಲ್ಡ್, ಇಂದಿರಾನಗರ, ನೃಪತುಂಗ ರಸ್ತೆ, ಮತ್ತಿಕೆರೆಯಲ್ಲಿ ಆಸ್ಪತ್ರೆಗಳಿವೆ.

English summary
Narayana Multispeciality Hospital saves a 102 year old patient from being paralysed for the rest of his life
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X