ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿನಿ ಮೊಸರಿನ ಪಾಕೀಟಿನ ಮೇಲೆ ಇಂದಿನ ದಿನಾಂಕ 29-02-2019

|
Google Oneindia Kannada News

ಬೆಂಗಳೂರು, ಮಾರ್ಚ್ 01: ನಂದಿನಿಯು ತಾಜಾ ಹಾಲು, ತಾಜಾ ಮೊಸರು ದೊರೆಯುತ್ತದೆ ಎಂದು ಫಲಕ ಹಾಕಿದರಷ್ಟೇ ಸಾಲೊಲ್ಲ ಅದರಂತೆ ನಡೆದುಕೊಳ್ಳಬೇಕು ಕೂಡ.

2019ರಲ್ಲಿ ಇಲ್ಲದ ದಿನಾಂಕವನ್ನು ಮೊಸರಿನ ಪ್ಯಾಕೇಟ್ ಮೇಲೆ ನಮೂದಿಸಿ ಹಾಸ್ಯಕ್ಕೆ ಗುರಿಯಾಗಿದೆ. ಫೆಬ್ರವರಿ 29ನ್ನು ನಂದಿನಿಯೇ ಸೃಷ್ಟಿಸಿದೆ. ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿ 29 ಬರುತ್ತದೆ ಎಂದೂ ಎಲ್ಲರಿಗೂ ತಿಳಿದಿದೆ. ಆದರೆ ಅದಕ್ಕೂ ಮೊದಲೇ ನಂದಿನಿ ಫೆ.29ನ್ನು ಬರಮಾಡಿಕೊಂಡಿದೆ.

ಅವಧಿ ಮುಗಿದ ನಂದಿನಿ ಹಾಲು, ಮೊಸರು ಮಾರಾಟ ಮಾಡಿದ್ದನ್ನು ನೋಡಿದ್ದೇವೆ, ಕೆಲವೊಮ್ಮೆ ಪ್ಯಾಕೇಟ್‌ ಮೇಲೆ ದಿನಾಂಕ ನಮೂದು ಮಾಡದೇ ಇರುವುದನ್ನು ನೋಡಿದ್ದೇವೆ, ನಾಳೆಯ ದಿನಾಂಕವನ್ನು ಕಣ್ತಪ್ಪಿನಿಂದ ನಮೂದಿಸಿರುವುದನ್ನೂ ಕಂಡಿದ್ದೇವೆ.

Nandini printed February 29th in their curd pack

ಆದರೆ ಇದೇ ಮೊದಲ ಬಾರಿಗೆ 2019ರಲ್ಲಿಇಲ್ಲದ ದಿನಾಂಕವನ್ನು ನಮೂದಿಸಿ ಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ.ನಿತ್ಯದಂತೆ ಮೊಸರನ್ನು ಕೊಳ್ಳಲು ಹೋದ ಗ್ರಾಹಕರಿಗೆ ಕಾಣಿಸಿದ ಅಚ್ಚರಿಯಿದು. ಮೊಸರನ್ನು ಕೊಂಡು ಮನೆಗೆ ಬಂದು ನೋಡುವಾಗ ಫೆಬ್ರವರಿ 29 ಎಂದು ನಮೂದಾಗಿರುವುದು ಕಂಡು ಬಂದಿದೆ.

ಸಂಸ್ಥೆಯ ಈ ಬೇಜವಾಬ್ದಾರಿ ತನಕ್ಕೆ ಸಾಕಷ್ಟು ಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಿನ್ನುವ ಆಹಾರ ಯಾವಾಗಲೂ ಶುದ್ಧವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಇಂತಹ ಘಟನೆಗಳು ನಡೆದಾಗ ಮೊಸರು ಅಥವಾ ಹಾಲು ಯಾವತ್ತು ಪ್ಯಾಕ್ ಆಗಿದ್ದು ಎನ್ನುವುದರ ಮೇಲೂ ಸಂದೇಹ ಬರುತ್ತದೆ. ಕೇವಲ ಒಂದು ನಂದಿನಿ ಮಳಿಗೆಯಲ್ಲಿ ಈ ರೀತಿಯ ತೊಂದರೆಯಾಗಿದೆಯೇ ಅಥವಾ ಎಲ್ಲಾ ನಂದಿನಿ ಮೊಸರಿನ ಪ್ಯಾಕ್ ಮೇಲೂ ಕೂಡ ಇದೇ ದಿನಾಂಕ ನಮೂದಾಗಿದೆಯೇ ಎನ್ನುವುದು ಬೆಳಕಿಗೆ ಬರಬೇಕಿದೆ.

English summary
KMF Nandini has printed February 29 as in curd packet. We didnot have 29th this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X