ನಿಲೇಕಣಿ ರಾಜಕೀಯ ಪ್ರವೇಶ ದೇಶದ ಅದ್ಭುತ: URA
ಬೆಂಗಳೂರು, ಮಾರ್ಚ್ 13- ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ ಮತ್ತೆ ಸುದ್ದಿ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಘೋಷಿತ ಅಭ್ಯರ್ಥಿ ನಂದನ್ ನಿಲೇಕಣಿ ಬಗ್ಗೆ ಡಾ. ಯುಆರ್ ಮಾತನಾಡಿದ್ದಾರೆ.
ನಂದನ್ ನಿಲೇಕಣಿ ರಾಜಕೀಯ ಪ್ರವೇಶ ಮಾಡಿದ್ದು ದೇಶದ ಅದ್ಭುತಗಳಲ್ಲೊಂದು ಎಂದು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ URA ಅಭಿಪ್ರಾಯಪಟ್ಟಿದ್ದಾರೆ.
81 ವರ್ಷದ ಚಿಂತಕ ಡಾ. ಯುಆರ್ ಅವರು ಪ್ರಸಕ್ತ ಲೋಕಸಭಾ ಚುನಾವಣೆ ಬಗ್ಗೆ ಮಾತಮಾಡಿದ್ದಾರೆ. ನಿಲೇಕಣಿ ಕಣಕ್ಕಿಳಿರುವುದನ್ನು ಉಲ್ಲೇಖಿಸುತ್ತಾ ಭಾರತ ಹೊಸ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಯುವಜನತೆ ಹೆಗಲು ನೀಡಬೇಕಿದೆ. ಯುವಕರು ಏಪ್ರಿಲ್ 17ರಂದು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುವ ಮೂಲಕ ಹೊಸ ಹಾದಿಗೆ ಹೊರಳಬೇಕು ಎಂದು ಡಾ. ಯುಆರ್ ಕರೆ ನೀಡಿದ್ದಾರೆ.

ನಿಲೇಕಣಿ ಸ್ಪರ್ಧಿಸುತ್ತಿರುವುದು ಶುಭ ಸೂಚಕ, wonderful
ಐಟಿ ತಂತ್ರಜ್ಞ, ಜವಾಬ್ದಾರಿಯುತ ಅಧಿಕಾರಿ ನಂದನ್ ನಿಲೇಕಣಿ ಸ್ಪರ್ಧಿಸುತ್ತಿರುವುದು ಶುಭ ಸೂಚಕ, wonderful. ಇತರೆ ರಾಜಕಾರಣಿಗಳಂತೆ ಅವರೇನೂ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ. ಆಡಳಿತಾರೂಢ ಪಕ್ಷವು ಬದಲಾವಣೆಗೆ ಮನಸ್ಸು ಮಾಡಿದೆ. ನಿಲೇಕಣಿ ಅಂತಹ ಅಭ್ಯರ್ಥಿಗಳು ಬದಲಾವಣೆ ತರಬಲ್ಲರು.

ಅನಂತಮೂರ್ತಿ ಹೊಗಳಿಕೆಗೆ ಪಾತ್ರರಾದ ಕೇಜ್ರಿವಾಲ್
ಭವಿಷ್ಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಇನ್ನೂ ಸುಧಾರಣೆ ಕಾಣಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಯೋಗೇಂದ್ರ ಯಾದವ್ ಅವರಂತಹ ನಾಯಕರಿಂದ ದೇಶಕ್ಕೆ ಅನೇಕ ಸಾಧ್ಯತೆಗಳಿವೆ. ಕರ್ನಾಟಕದಲ್ಲಿಯೂ ಒಬ್ಬ ಕೇಜ್ರಿವಾಲ್ ಇದ್ದರು. ಅವರು ಎಂಡಿ ನಂಜುಂಡಸ್ವಾಮಿ. ಆದರೆ ತಮ್ಮ ಅಹಂಕಾರದಿಂದ ಅವರೇ ಹಾಳಾದರು.

ಕೇಜ್ರಿವಾಲಾರಲ್ಲಿ ಗಾಂಧಿ ತತ್ತ್ವಗಳು ತುಂಬಿತುಳುಕುತ್ತಿವೆ
ನನ್ನ ಪ್ರಕಾರ ಆಮ್ ಆದ್ಮಿ ಪಕ್ಷವು ಬಹಳ ಭರವಸೆ ಮೂಡಿಸಿದೆ. ಅರವಿಂದ್ ಕೇಜ್ರಿವಾಲ್ ಅವರು ದೇಶದ ಇಡೀ ರಾಜಕೀಯದ ದಿಕ್ಕನ್ನೇ ಬದಲಿಸಿದ್ದಾರೆ. ಆಮ್ ಆದ್ಮಿ ಪಕ್ಷವು ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನ ಗಾಂಧಿ ಚಿಂತನೆಗಳ ಆಧಾರದ ಮೇಲೆ ಹೊಸ ಜನರ ಗುಂಪು ರಾಜಕೀಯಕ್ಕೆ ಪ್ರವೇಶಿಸುವ ಅಗತ್ಯ ಮತ್ತು ಸಾಧ್ಯತೆಗಳ ಬಗ್ಗೆ ನಾನು ಹೇಳಿದ್ದೆ. ಮಹಾತ್ಮ ಗಾಂಧಿ ಆಟದ ದಿಕ್ಕನ್ನು ಬದಲಿಸಿದವರು. ಆಮ್ ಆದ್ಮಿ ಪಕ್ಷವು ಅವರೂ ಸಹ ಹಾಗೆಯೇ, ಅವರ ಕಾರ್ಯಗಳಲ್ಲಿ ಗಾಂಧಿ ತತ್ತ್ವಗಳು ತುಂಬಿತುಳುಕುತ್ತಿವೆ.

ನಿತೀಶ್ ಕುಮಾರ್ ಪ್ರಧಾನಿಯಾಗಲು ಅರ್ಹರು: ಅನಂತಮೂರ್ತಿ
ಸಾಂಪ್ರದಾಯಿಕ/ ಪಾರಂಪರಿಕ ಪಕ್ಷಗಳು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿವೆ. ಎಎಪಿ ಈಗಷ್ಟೇ ಹುಟ್ಟಿರುವ ಪಕ್ಷ. ಈ ಸಮಯದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲು ಕಾಲ ಪಕ್ವವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಾ. ಯುಆರ್ ಅನಂತಮೂರ್ತಿ ಅವರು
ಯಾವತ್ತಿಗೇ ಆಗಲಿ, ನಿತೀಶ್ ಕುಮಾರ್ ದೇಶದ ಪ್ರಧಾನ ಮಂತ್ರಿಯಾಗಲು ಅರ್ಹರು. ಆದರೆ ಅಡ್ವಾಣಿ ಅವರೂ ಸಹ ಪ್ರಧಾನಿಯಾಗಲು ಅರ್ಹರು. ವಾಜಪೇಯಿ ನಿಜಕ್ಕೂ ದೊಡ್ಡ ಮನುಷ್ಯರು. ಅಯೋಧ್ಯೆಯಲ್ಲಿ ದೇವಸ್ಥಾನವನ್ನು ಕಟ್ಟದೇ ಪಾಕಿಸ್ತಾನಕ್ಕೆ ಟ್ರೈನ್ ಬಿಟ್ಟರು. ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ಕೂಡಿಕೊಂಡು ಮೋದಿಗೆ ಜನ್ಮ ನೀಡಿವೆಯಷ್ಟೇ.












Click it and Unblock the Notifications