ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಲಾಂಚ್ ಆಗದ ‘ನಮ್ಮ ಯಾತ್ರಿ’ ಆ್ಯಪ್: ಕಾರಣ ಏನು ಗೊತ್ತಾ?

|
Google Oneindia Kannada News

ಬೆಂಗಳೂರು ನವೆಂಬರ್ 1: ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಒದಗಿಸುವ ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಟಕ್ಕರ್ ಕೊಡಲು ಬೆಂಗಳೂರು ಆಟೋ ಚಾಲಕರ ಒಕ್ಕೂಟ (ಎಆರ್​​ಡಿಯು-ARDU) ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಹೊಸ ಆ್ಯಪ್ ಆರಂಭಿಸಿಲು ಎಆರ್​ಡಿಯೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ 'ನಮ್ಮ ಯಾತ್ರಿ' ಆ್ಯಪ್ ಲಾಂಚ್ ಆಗುತ್ತಿಲ್ಲ.

ಉದ್ಯಮಿ ನಂದನ್ ನಿಲೇಕಣಿ ಅವರ ಬೆಂಬಲಿತ ಬೈಕ್ ಪ್ರತಿಷ್ಠಾನದ ತಾಂತ್ರಿಕ ಸಹಾಯದೊಂದಿಗೆ ಹೊಸ ಆ್ಯಪ್ ಕರ್ನಾಟಕ ರಾಜ್ಯೋತ್ಸವಕ್ಕೆ ಬಿಡುಗಡೆ ಆಗಲಿದೆ ಎಂದು ಎಆರ್​ಡಿಯು ಮಾಹಿತಿ ನೀಡಿತ್ತು. ಈ ಹೊಸ ಆ್ಯಪ್​ಗೆ 'ನಮ್ಮ ಯಾತ್ರಿ' ಎಂದೂ ಹೆಸರಿಡಲಾಗಿತ್ತು. ಆದರೆ 'ನಮ್ಮ ಯಾತ್ರಿ' ಆ್ಯಪ್ ಇಂದು ಲಾಂಚ್ ಆಗುತ್ತಿಲ್ಲ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ನಮ್ಮ ಮೆಟ್ರೋ : ಆನ್‌ಲೈನ್‌ನಲ್ಲೇ ಮೆಟ್ರೋ QR ಟಿಕೆಟ್ ಪಡೆಯಿರಿನಮ್ಮ ಮೆಟ್ರೋ : ಆನ್‌ಲೈನ್‌ನಲ್ಲೇ ಮೆಟ್ರೋ QR ಟಿಕೆಟ್ ಪಡೆಯಿರಿ

ನಮ್ಮ ಯಾತ್ರಿ, ಆಟೋ-ರಿಕ್ಷಾ ಚಾಲಕರು ಒಟ್ಟುಗೂಡಿಸಿರುವ ರೈಡ್-ಹೇಲಿಂಗ್ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್ ಅನ್ನು ಅಕ್ಟೋಬರ್ ಆರಂಭದಲ್ಲಿ Google Play ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಪರೀಕ್ಷಾ ಹಂತದಲ್ಲಿ 10,000 ಕ್ಕೂ ಹೆಚ್ಚು ಡೌನ್‌ಲೋಡ್‌ಗಳಾಗಿವೆ. ಡ್ರೈವರ್‌ಗಳಿಗಾಗಿ ಪ್ರತ್ಯೇಕ ಅಪ್ಲಿಕೇಶನ್ ಸಹ ಇದ್ದು 10,000 ಕ್ಕೂ ಹೆಚ್ಚು ಡೌನ್‌ಲೋಡ್‌ ಮಾಡಲಾಗಿದೆ.

‘ನಮ್ಮ ಯಾತ್ರಿ’ ಆ್ಯಪ್ ಬಿಡುಗಡೆಗೆ ತಡೆ

‘ನಮ್ಮ ಯಾತ್ರಿ’ ಆ್ಯಪ್ ಬಿಡುಗಡೆಗೆ ತಡೆ

ಒಪನ್‌ (ಬೆಕ್ನ್) ಪ್ರೋಟೋಕಾಲ್ ಅನ್ನು ಬಳಸಿಕೊಂಡು ಖಾಸಗಿ ಕಂಪನಿಯಿಂದ ನಮ್ಮ ಯಾತ್ರಿ ಆಪ್ ರಚಿಸಲ್ಪಟ್ಟಿದೆ. ಇದು ಖಾಸಗಿ ಅಗ್ರಿಗೇಟರ್‌ಗಳ ಏಕಸ್ವಾಮ್ಯವನ್ನು ಅಂತ್ಯಗೊಳಿಸಲು ಮತ್ತು ರೈಡ್ ಹೇಲಿಂಗ್ ಅನ್ನು ಸಾರ್ವಜನಿಕ ಸ್ನೇಹಿಗೊಳಿಸಲು ಪ್ರಯತ್ನಿಸುತ್ತದೆ. ಇದು ಸರ್ಕಾರ ಸೂಚಿಸಿದ ದರದಲ್ಲಿ ಮಾತ್ರ ಜನರಿಂದ ಹಣ ಪಡೆಯಲಿದೆ.

ಆದರೆ ರೈಡ್-ಹೇಲಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸಲು ಪರವಾನಗಿ ಹೊಂದಿಲ್ಲ ಎಂದು ಸಾರಿಗೆ ಇಲಾಖೆ ಹೇಳುತ್ತದೆ. ಹೀಗಾಗಿ ಈ ಪ್ರಕರಣ ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿದೆ. ಇದರಿಂದಾಗಿ ಆಪ್ ಡೌನ್‌ಲೋಡ್ ಆಧಾರದ ಮೇಲೆ ಹಾಗೂ ಕೋರ್ಟ್ ತೀರ್ಪು ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಮಂಜುನಾಥ್ ಅವರು ತಿಳಿಸಿದ್ದಾರೆ.

ಪ್ರಯಾಣಿಕರಿಗೆ 10 ರೂ.ಗಳ ಬುಕಿಂಗ್ ಶುಲ್ಕ

ಪ್ರಯಾಣಿಕರಿಗೆ 10 ರೂ.ಗಳ ಬುಕಿಂಗ್ ಶುಲ್ಕ

ARDU ನ ಪ್ರಧಾನ ಕಾರ್ಯದರ್ಶಿ ಡಿ ರುದ್ರಮೂರ್ತಿ ಪ್ರಕಾರ, "ನಮ್ಮ ಯಾತ್ರಿ ಚಾಲಕರು ಅಥವಾ ಪ್ರಯಾಣಿಕರಿಗೆ ಕನಿಷ್ಠ ಮೂರು ತಿಂಗಳವರೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಪ್ರಯಾಣಿಕರಿಗೆ 10 ರೂ.ಗಳ ಬುಕಿಂಗ್ ಶುಲ್ಕವನ್ನು ವಿಧಿಸಲಾಗುವುದು, ಇದನ್ನು ಪಿಕ್-ಅಪ್ ಪಾಯಿಂಟ್‌ಗೆ ಚಾಲನೆ ಮಾಡಲು ಚಾಲಕನಿಗೆ ಪಾವತಿಸಲಾಗುತ್ತದೆ," ಎಂದು ಹೇಳಿದರು.

ಪ್ರಯಾಣಿಕರು ಪಾವತಿಸಲು ಸಿದ್ಧರಿದ್ದರೆ ಚಾಲಕರು ಮೀಟರ್ ದರಕ್ಕಿಂತ 30 ರೂ.ವರೆಗೆ ಕೇಳಬಹುದು. ಹೆಚ್ಚುವರಿ ಹಣ ಪಾವತಿಸಲು ಇಷ್ಟವಿಲ್ಲದ ಪ್ರಯಾಣಿಕರು ಬುಕ್ಕಿಂಗ್ ಕ್ಯಾನ್ಸಲ್ ಮಾಡಬಹುದು. ಅಂದರೆ ಅವರು ಹೆಚ್ಚು ಸೂಕ್ತವಾದದನ್ನು ಆಯ್ಕೆ ಮಾಡಬಹುದು. ಪಾವತಿಗಳು ನಗದು ರೂಪದಲ್ಲಿರುತ್ತವೆ ಮತ್ತು ಯಾವುದೇ ರದ್ದತಿ ಶುಲ್ಕವಿರುವುದಿಲ್ಲ.

ಪ್ರಯಾಣಿಕ ಹಾಗೂ ಚಾಲಕ ಸ್ನೇಹಿ ಆಪ್

ಪ್ರಯಾಣಿಕ ಹಾಗೂ ಚಾಲಕ ಸ್ನೇಹಿ ಆಪ್

ಅಪ್ಲಿಕೇಶನ್ ಅನ್ನು ಸುಮಾರು 14,000 ಚಾಲಕರು ಮತ್ತು ಸುಮಾರು 20,000 ಪ್ರಯಾಣಿಕರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ದೈನಂದಿನ ಬುಕಿಂಗ್‌ಗಳು 500-1,000 ವ್ಯಾಪ್ತಿಯಲ್ಲಿ ಇರುತ್ತವೆ. "ನಮ್ಮದು ಆಟೋ ಚಾಲಕರ ಒಕ್ಕೂಟವಾಗಿದ್ದು, ಎಲ್ಲರಿಗೂ ಉತ್ತಮ ಸೇವೆಯನ್ನು ನೀಡಲು ಒಟ್ಟಾಗಿ ಬಂದಿದ್ದೇವೆ. ಇಲ್ಲಿ ಚಾಲಕರು ಅಥವಾ ಪ್ರಯಾಣಿಕರು ಯಾರೇ ಆಗಲಿ ಮೋಸ ಹೋಗಬಾರದು ಎಂಬುದು ನಮ್ಮ ಉದ್ದೇಶ'' ಎಂದು ರುದ್ರಮೂರ್ತಿ ಹೇಳುತ್ತಾರೆ.

ಕಮಿಷನ್ ರೂಪದಲ್ಲಿ ಹಣ ಮಾಡುವ ಕಂಪನಿಗಳು

ಕಮಿಷನ್ ರೂಪದಲ್ಲಿ ಹಣ ಮಾಡುವ ಕಂಪನಿಗಳು

ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ನೀಡುವ ಕಂಪನಿಗಳು ಗ್ರಾಹಕರಿಂದ ಕನಿಷ್ಠ 100 ರೂಪಾಯಿ ಪಡೆದುಕೊಂಡು, ಆಟೋ ಚಾಲಕರಿಗೆ 60 ರೂಪಾಯಿ ನೀಡುತ್ತವೆ. ಇನ್ನುಳಿದ 40 ರೂಪಾಯಿಯನ್ನು ಕಮಿಷನ್ ರೂಪದಲ್ಲಿ ಇರಿಸಿಕೊಳ್ಳುತ್ತವೆ. ಇತ್ತೀಚೆಗೆ ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಸಂಸ್ಥೆಗಳು ಬೆಲೆ ಏರಿಕೆ ಮಾಡಿದ್ದರಿಂದ ಗ್ರಾಹಕರ ಸಂಖ್ಯೆ ಇಳಿಮುಖವಾಗ್ತಿದೆ. ಬೆಲೆ ಏರಿಕೆ ಹಿನ್ನೆಲೆ ಪ್ರಯಾಣಿಕರು ಸಾರಿಗೆ ಸಂಸ್ಥೆ ಮತ್ತು ಮೆಟ್ರೋಗಳತ್ತ ಮುಖ ಮಾಡುತ್ತಿದ್ದಾರೆ.

English summary
Auto Drivers Association President Manjunath said that ARDU's 'Namma Yatri' app is not being launched today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X