• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ: ಏಪ್ರಿಲ್ ಮೂರನೇ ವಾರದಲ್ಲಿ 6 ಬೋಗಿ ರೈಲು

|

ಬೆಂಗಳೂರು, ಮಾರ್ಚ್ 10: ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮೆಟ್ರೋ ಮಾರ್ಗದಲ್ಲಿ ಆರು ಬೋಗಿಯ ಮೊದಲ ರೈಲನ್ನು ಏ.15ರಂದು ಪ್ರಯಾಣಿಕರ ಸೇವೆಗೆ ಒದಗಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ.

ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ನಿಂದ ಫೆ.14ರಂದು ಪಡೆದಿದ್ದ ಮೂರು ಬೋಗಿಗಳನ್ನು ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಇರಿಸಿ, ಮೂರು ಬೋಗಿಯ ರೈಲಿಗೆ ಅಳವಡಿಸಲಾಗಿತ್ತು. ಬಳಿಕ ರೈಲಿನ ಮುಂಭಾಗದಲ್ಲಿ ಲೋಕೊ ಪೈಲೆಟ್ ಕೂರುವ ಕ್ಯಾಬಿನ್ ನ ಉಪಕರಣಗಳಲ್ಲಿ ಸುಮಾರು 80 ತಂತ್ರಾಂಶಗಳನ್ನು ಇನ್ ಸ್ಟಾಲ್ ಮಾಡಲಾಗಿತ್ತು.

ಇದಾದ ಬಳಿಕ ರೈಲಿನ ಆಸನಗಳು ಹಾಗೂ ಎಸಿ ಸೇರಿದಂತೆ ಹಲವು ಸಾಧನಗಳ ಪರಿಶೀಲನೆ ನಡೆದಿದೆ. ನಂತರ ಡಿಪೊದಲ್ಲಿರುವ ಹಳಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. ನಂತರ ಸಿಗ್ನಲಿಂಗ್ , ವಿದ್ಯುತ್ ಸಂಪರ್ಕದ ಕಾರ್ಯಗಳು ಪೂರ್ಣಗೊಂಡಿದ್ದು, ರಾತ್ರಿಯ ವೇಳೆ ನೇರಳೆ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲು ಸಿದ್ಧತೆ ಮಾಡಿಕೊಡಲಾಗಿದೆ.

ಇಂದು, ನಾಳೆ ಮೆಟ್ರೋ ಸಮಯದಲ್ಲಿ ಬದಲಾವಣೆ

ಏಪ್ರಿಲ್ ಆರಂಭದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆಯುವ ನಿರೀಕ್ಷೆ ಇದ್ದು, ಬಳಿಕ ವಾಣಿಜ್ಯ ಸಂಚಾರಕ್ಕೆ ಅನುಮತಿ ದೊರೆಯಲಿದೆ.

ಬಿಎಂಆರ್ ಸಿಎಲ್ ಗೆ 1,400 ಕೋಟಿ ರೂ. ವೆಚ್ಚದಲ್ಲಿ 150 ಮೆಟ್ರೋ ಬೋಗಿ ಪೂರೈಸುವ ಗುತ್ತಿಗೆಯನ್ನು ಬಿಇಎಂಎಲ್ ಪಡೆದುಕೊಂಡಿದೆ. ಮೊದಲ ಹಂತದಲ್ಲಿ ಫೆ.14ರಂದು ಬಿಎಂಆರ್ ಸಿಎಲ್ ಗೆ 3 ಇಂಟರ್ ಮೀಡಿಯೆಟ್ ಮೆಟ್ರೋ ಬೋಗಿಗಳನ್ನು ಬಿಇಎಂಎಲ್ ಹಸ್ತಾಂತರಿಸಿತ್ತು.

ಬೈಯಪ್ಪನಹಳ್ಳಿ ಡಿಪೋದಲ್ಲಿ 3ಬೋಗಿಯ ರೈಲಿಗೆ ಹೊಸ 3 ಇಂಟರ್ ಮೀಡಿಯೇಟ್ ಬೋಗಿ ಜೋಡಿಸಿ ಅಲ್ಲಿನ ಹಳಿಯಲ್ಲೇ ಪರೀಕ್ಷಾರ್ಥ ಸಂಚಾರ ನಡೆಸಲಾಗಿದ್ದು, ಶೀಘ್ರ ಮುಖ್ಯ ಹಳಿಯಲ್ಲೇ ರಾತ್ರಿ ವೇಳೆ 6 ಬೋಗಿಗಳ ಸಂಚಾರ ನಡೆಯಲಿದೆ.

ಅಂದಾಜು 1 ತಿಂಗಳು ನಡೆಯುವ ಈ ಪರೀಕ್ಷೆಯಲ್ಲಿ , ರೈಲಿನ ಬ್ರೇಕ್ ವ್ಯವಸ್ಥೆ, ಸಿಸಿ ಕ್ಯಾಮರಾ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ರೈಲಿಗೆ ವಿದ್ಯುತ್ ಸರಬರಾಜು ಮಾಡುವ ಉಪಕರಣ ತಪಾಸಣೆ,ಸಿಗ್ನಲಿಂಗ್ ಮಾಡುವ ಉಪಕರಣ ತಪಾಸಣೆ, ಸಿಗ್ನಲಿಂಗ್ ಡೈನಾಮಿಕ್ ಪರೀಕ್ಷೆಗೊಳಪಡಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Namma metro trains will get six coaches od service by end of April. The BMRCL has already started experimental run of six coaches train and expected that the railway safety commissioner will soon certify the same.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more