Namma Metro: ನಾಗಸಂದ್ರ-ಮಾಧವರ ನಡುವೆ ಮೆಟ್ರೋ ಕಾರ್ಯಾಚರಣೆ ಆರಂಭ ಯಾವಾಗ?-ಇಲ್ಲಿದೆ ಮಹತ್ವದ ಅಪ್ಡೇಟ್‌

Bengaluru Metro: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡ ಬಿಎಂಆರ್‌ಸಿಎಲ್ ಈಗಾಗಲೇ ಹಲವೆಡೆ ‌ಮೆಟ್ರೋ ವಿಸ್ತರಣೆಗೆ ಮುಂದಾಗಿದೆ. ಅಲ್ಲದೆ ಕಾಮಗಾರಿಯನ್ನು ಕೂಡ ಕೈಗೆತ್ತಿಕೊಂಡಿದೆ. ಹಾಗೆಯೇ ನಾಗಸಂದ್ರ ಮತ್ತು ಮಾಧವರ ನಡುವಿನ ಮೆಟ್ರೋ ಕಾರ್ಯಾಚರಣೆ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದೆ.

ನಾಗಸಂದ್ರ ಮತ್ತು ಮಾಧವರ ನಡುವಿನ ಮೆಟ್ರೋ 2024ರ ಜುಲೈ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಸಿರುವ ಮಾರ್ಗದಲ್ಲಿ 3.7 ಕಿಲೋಮೀಟರ್ ವಿಸ್ತರಣೆಯು 2019ರಿಂದ ವಿಳಂಬವಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎಂದು ಇಲ್ಲಿ ತಿಳಿಯೋಣ ಬನ್ನಿ.

Namma Metro When will metro operation start between Nagasandra-Madhava

ವೆಚ್ಚ ಎಷ್ಟು ಕೋಟಿ?: ಪ್ರಕಾರ, ಈ ವಿಸ್ತರಣೆ ಮಾರ್ಗವು ಮೂರು ನಿಲ್ದಾಣಗಳನ್ನು ಹೊಂದಿದೆ. ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾಧವರ ಮಾರ್ಗಗಳನ್ನು ಹೊಂದಿದ್ದು, ಇದಕ್ಕೆ ₹298 ಕೋಟಿ ವೆಚ್ಚವಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, "ಈಗಾಗಲೇ ಟ್ರ್ಯಾಕ್ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಪ್ರಾಯೋಗಿಕ ಪರಿಶೀಲನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಜುಲೈ ಅಂತ್ಯದ ವೇಳೆಗೆ ಮೆಟ್ರೋ ಕಾರ್ಯಾಚರಣೆ: ಇನ್ನು ಜುಲೈ ಅಂತ್ಯದ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ. ಈ ಹೊಸ ವಿಸ್ತರಣೆಯು ಪ್ರಯಾಣಿಕರಿಗೆ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ಅನ್ನು ಸಂಪರ್ಕಿಸಲು ಸಹಾಯ ಆದಂತಾಗುತ್ತದೆ.

ಈ ವರ್ಷದ ಫೆಬ್ರವರಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, 2025ರ ವೇಳೆಗೆ ನಮ್ಮ ಮೆಟ್ರೋ ನಿರ್ಮಾಣದ 2ನೇ ಹಂತವನ್ನು ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದರು. ಅಲ್ಲದೆ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಮಾರ್ಗದ ನಿರ್ಮಾಣವನ್ನು ವೇಗಗೊಳಿಸಲು BMRCL ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

"ಬೆಂಗಳೂರು ಮೆಟ್ರೋ ಜಾಗತಿಗುಕ ದರ್ಜೆಯನ್ನು ಹೊಂದಿದ್ದು, ಇದು ನವದೆಹಲಿ ಮೆಟ್ರೋಗಿಂತ ಉತ್ತಮವಾಗಿದೆ. ಅಲ್ಲದೆ, ಮೆಟ್ರೋ ಬೆಂಗಳೂರಿನ ಭವಿಷ್ಯವಾಗಿದೆ," ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+