Namma metro: ಈ ಎರಡು ಪ್ರಮುಖ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಯಾವಾಗ?-ಮಾಹಿತಿ ಇಲ್ಲಿದೆ

ಬೆಂಗಳೂರು, ಫೆಬ್ರವರಿ, 09: ಜನದಟ್ಟಣೆ ಹೆಚ್ಚಾದಂತೆಲ್ಲ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಆಗುತ್ತಲೇ ಇದೆ. ಇನ್ನು ಇದೀಗ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಎರಡು ಶುಭಸುದ್ದಿ ನೀಡಲಿದೆ. ಹಾಗಾದರೆ ಆ ಶುಭಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನ ಬಹುನಿರೀಕ್ಷಿತ ಎರಡು ಮಾರ್ಗಗಳ ವಿಸ್ತರಣೆ ಇದೇ ವರ್ಷದೊಳಗೆ ಸಂಚಾರ ಮುಕ್ತ ಮಾಡುವ ನಿಟ್ಟಿನಲ್ಲಿ ಈ ಸೂಚನೆ ನೀಡಿದೆ. ಅನೇಕ ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ನಗರದ ಎರಡನೇ ಹಂತದ ಎರಡು ಪ್ರಮುಖ ಮೆಟ್ರೋ ಮಾರ್ಗಗಳ ಸಂಚಾರಕ್ಕೆ ಕೊನೆಗೂ ಮೂಹೂರ್ತ ಕೂಡಿ ಬಂದಿದೆ. ಮಾದಾವರ-ನಾಗಸಂದ್ರ ಹಾಗೂ ಆರ್‌​​​ವಿ ರಸ್ತೆ-ಬೊಮ್ಮಸಂದ್ರ ನಡುವಿನ ಸಂಚಾರವನ್ನು ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ವೇಳೆಗೆ ಈ ಎರಡು ಮಾರ್ಗಗಳನ್ನು ಪ್ರಾರಂಭಿಸುವ ಹಿನ್ನೆಲೆ ಕೆಲಸವನ್ನು ಆರಂಭ ಮಾಡಿದೆ.

Namma metro: When will be metro service on these two major routes?, know details

ಈ ಎರಡು ಲೇನ್‌​​ಗಳು ಎರಡು ವರ್ಷದ ಹಿಂದೆಯೇ ಆರಂಭ ಆಗಬೇಕಿತ್ತು. ಮಹಾಮಾರಿ ಕೊರೊನಾ, ತಾಂತ್ರಿಕ ಸಮಸ್ಯೆ, ಲ್ಯಾಂಡ್ ಸಮಸ್ಯೆ ಕಾರಣ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಇದೀಗ ಸಮಸ್ಯೆಗಳಿಲ್ಲದ ಹಿನ್ನೆಲೆ ಇದೇ ವರ್ಷದಲ್ಲಿ ಸಂಚಾರ ಮುಕ್ತಗೊಳಿಸುವ ತಯಾರಿ ಭರದಿಂದ ಸಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತುಮಕೂರು ರಸ್ತೆಯ ನಾಗಸಂದ್ರ ಹಾಗೂ ಮಾದಾವರವರೆಗಿನ ಮೆಟ್ರೋ ಸೆಪ್ಟೆಂಬರ್ ವೇಳೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಈಗಾಗಲೇ 3 ಕಿ‌ಲೋ ಮೀಟರ್ ಮಾರ್ಗದಲ್ಲಿ 95ರಷ್ಟು ಕಾಮಗಾರಿ ಮುತ್ಕಾಯವಾಗಿದೆ. ನಾಗಸಂದ್ರ-ಮಾದಾವರಾ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ, ನೆಲಮಂಗಲ ಹಾಗೂ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದತ್ತ ಸಾಗುವರರಿಗೆ ಅನುಕೂಲ ಆಗಲಿದೆ. ಜೊತೆಗೆ ತುಮಕೂರು ರಸ್ತೆಯಲ್ಲಿ ಕೊಂಚಮಟ್ಟಿಗೆ ಸಂಚಾರ ದಟ್ಟಣೆ ಸಹ ಕಡಿಮೆಯಾಗಲಿದೆ.

ಎರಡನೇ ಮೆಟ್ರೋ ಮಾರ್ಗ: ಮತ್ತೊಂದು ಮಾರ್ಗವಾದ ಆರ್‌ವಿ ರಸ್ತೆ-ಬೊಮ್ಮಸಂದ್ರವರಿಗೆ ಮೆಟ್ರೋ 19 ಕಿಲೋ ಮೀಟರ್‌ ಮಾರ್ಗಕ್ಕೆ 4,255 ಕೋಟಿ ಖರ್ಚು ಮಾಡಲಾಗಿದ್ದು, ಮಾರ್ಗ ಆರಂಭವಾದ ನಂತರ ನಿತ್ಯ ಈ ಮಾರ್ಗದಲ್ಲಿ ಮೂರುವರೆ ಲಕ್ಷ ಜನ ಮೆಟ್ರೋ ಬಳಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಈಗಾಗಲೇ ಶೇಕಡಾ 90ರಷ್ಟು ಕಾಮಗಾರಿ ಪೂರ್ಣಗೊಳಿಸಿರುವ ಬಿಎಂಆರ್‌​​​ಸಿಎಲ್ ಜುಲೈ ಅಥವಾ ಆಗಸ್ಟ್‌ನಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲು ಯೋಜನೆ ರೂಪಿಸಿದೆ. ಈ ಮಾರ್ಗದಲ್ಲಿ ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ ಹುಸೂರು ರಸ್ತೆ, ಸೇರಿ ಬೊಮ್ಮಸಂದ್ರ ನಿಲ್ದಾಣಗಳು ಬರಲಿವೆ.

ಇನ್ನು ಈ ಮಾರ್ಗದಲ್ಲಿ ಮೊದಲ ಬಾರಿಗೆ ಚಾಲಕ ರಹಿತ ರೈಲು ಸಂಚರಿಸಲಿದೆ. ಇದಕ್ಲೆ ಇದೀಗ ವಿಶೇಷ ಟ್ರ್ಯಾಕ್‌​​ಗಳ ಜೋಡಣೆ ಕೂಡ ಆಗುತ್ತಿದೆ. ಅಲ್ಲದೆ ಚೀನಾದಿಂದ ಆಗಮಿಸಿರುವ ಚಾಲಕ ರಹಿತ ರೈಲು ಬೋಗಿಗಳು ಕೂಡ ಇದೇ ಫೆಬ್ರವರಿ 18ಕ್ಕೆ ಬೆಂಗಳೂರಿಗೆ ಬಂದಿಳಿಯಲಿವೆ ಎಂದು ತಿಳಿದುಬಂದಿದೆ.

ಹೆಬ್ಬಗೋಡಿ‌ ನಿಲ್ದಾಣಕ್ಕೆ ಆಗಮಿಸಲಿರುವ ಈ ಬೋಗಿಗಳು‌, ರಾಜ್ಯಕ್ಕೆ ಬಂದ ಬಳಿಕ ಹೆಬ್ಬಗೋಡಿ‌ ನಿಲ್ದಾಣದಲ್ಲೇ 32 ರೀತಿಯ ತಾಂತ್ರಿಕ ಟೆಸ್ಟ್‌ಗಳಿಗೆ ಒಳಪಡಿಸಲಾಗುತ್ತೆ. ಈ ತಾಂತ್ರಿಕ ಪರೀಕ್ಷೆಗಳನ್ನು ಮುಗಿಸಲು 5 ತಿಂಗಳ ಕಾಲಾವಕಾಶ ಬೇಕಾಗಲಿದೆ. ಇದರ ತಾಂತ್ರಿಕ ಕೆಲಸಕ್ಕಾಗಿ ಚೀನಾ ತಂಡ ಆಗಮಿಸಿಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+