Namma metro: ಹೊಸ ಮೆಟ್ರೋ ಫೀಡರ್ ಬಸ್‌ಗಳ ಸೇವೆ ಆರಂಭ, ಮಾರ್ಗ, ವೇಳಾಪಟ್ಟಿ ಮಾಹಿತಿ

ಬೆಂಗಳೂರು, ಜನವರಿ 20: ಬೆಂಗಳೂರು ನಮ್ಮ ಮೆಟ್ರೋ ಜಾಲ (Namma metro) ವಿಸ್ತರಣೆ ಆಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ಬಿಎಂಟಿಸಿ ಹಾಗೂ ಬಿಎಂಆರ್‌ಸಿಎಲ್ ಒಪ್ಪಂದಂತೆ ನಮ್ಮ ಮೆಟ್ರೋ ಫೀಡರ್ ಬಸ್‌ ಗಳ (Namma metro feeder bus) ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ.

ಒಟ್ಟು ಬಸ್‌ಗಳ ಪೈಕಿ ಹೊಸದಾಗಿ ಮತ್ತೆ ಎರಡು ಬಿಎಂಟಿಸಿ ಮೆಟ್ರೋ ಫಿಡರ್ ಬಸ್‌ಗಳು ಸೋಮವಾರ ಜನವರಿ 22ರಿಂದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Namma Metro:Two New Metro Feeder Bus Service Start From Jan 22 Monday Check Route,Timings

ನಗರದ ಭಟ್ಟರಹಳ್ಳಿ, ಸೀಗೇಹಳ್ಳಿ ಸರ್ಕಲ್, ಕುದುರೆಸೊನ್ನೆನಹಳ್ಳಿ ಮತ್ತು ಬೆಲ್ತೂರು ಮೂಲಕ ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಟಿನ್ ಫ್ಯಾಕ್ಟರಿವರೆಗೆ ಒಂದು ಮೆಟ್ರೋ ಫಿಡರ್ ಬಸ್ (MF10) ಪ್ರತಿದಿನ ಮೂರು ಟ್ರಿಪ್‌ಗಳನ್ನು ಏಕಮುಖವಾಗಿ ಮಾಡಲಿದೆ.

ಇದೇ ಬಸ್ ಟಿನ್ ಫ್ಯಾಕ್ಟರಿಯಿಂದ ಬೆಳಗ್ಗೆ 7.10, 9.30 ಮತ್ತು ಸಂಜೆ 6.40 ಕ್ಕೆ ಮತ್ತು ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 8.30, ಸಂಜೆ 5.20 ಮತ್ತು ರಾತ್ರಿ 8 ಗಂಟೆಗೆ ಹೊರಡಲಿದೆ ಸಂಚರಿಲಿದೆ ಎಂದು ನಮ್ಮ ಮೆಟ್ರೋ ಮಾಹಿತಿ ನೀಡಿದೆ.

ಎರಡನೇ ಬಸ್ ಸಂಚಾರ ಮಾಹಿತಿ

ಮತ್ತೊಂದು ಮೆಟ್ರೋ ಫೀಡರ್ ಬಸ್ (MF-46) ನಗರದ ಕೆಂಗೇರಿ ಟಿಟಿಎಂಸಿ ನಿಲ್ದಾಣದಿಂದ ಕೆಂಗೇರಿ ಆರ್‌ಡಬ್ಲ್ಯೂಎಸ್ ಗೇಟ್, ದೊಡ್ಡಬೆಲೆ, ಪ್ರಾವಿಡೆಂಟ್ ಸನ್‌ವರ್ತ್ ಅಪಾರ್ಟ್‌ಮೆಂಟ್, ಸೇಂಟ್ ಬೆನೆಡಿಕ್ಟ್ ಚರ್ಚ್, ಅಂಚೆಪಾಳ್ಯ ಮತ್ತು ಕೆಂಗೇರಿ ಮೂಲಕ ಕೆಂಗೇರಿ ಟಿಟಿಎಂಸಿಗೆ ಸೇವೆ ನೀಡಲಿದೆ.

ಈ ಮಾರ್ಗದಲ್ಲಿ ದಿನಕ್ಕೆ ಎರಡು ಬಸ್‌ಗಳು 21 ಟ್ರಿಪ್‌ಗಳನ್ನು ಹೊಡೆಯುತ್ತವೆ. ಮೊದಲ ಬಸ್ ಬೆಳಗ್ಗೆ 8.10ಕ್ಕೆ ಮತ್ತು ಕೊನೆಯದು ಸಂಜೆ 7.45ಕ್ಕೆ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ಬೆಂಗಳೂರು ಮಟ್ರೋ ರೈಲು ನಿಗಮ (BMRCL) ತಿಳಿಸಿದೆ.

ಎಂಎಫ್ ಬಸ್ ಸೇವೆ ಶಾಲಾ-ಕಾಲೇಜಿಗೂ ವಿಸ್ತರಣೆ

ನಮ್ಮ ಮೆಟ್ರೋ ವ್ಯಾಪ್ತಿಯ ನಿಲ್ದಾಣ ಹಾಗೂ ಪ್ರಯಾಣಿಕರ ಕೊನೆ ಮೈಲಿವರೆಗೆ ಮೆಟ್ರೋ ಫಿಡರ್ ಬಸ್‌ಗಳು ಸೇವೆ ಸಲ್ಲಿಸುತ್ತಿವೆ. ಈ ಸಂಬಂಧ ಬಿಎಂಟಿಸಿ ನಿಗಮದ ಜತೆಗೆ ಒಪ್ಪಂದ ಏರ್ಪಟ್ಟಿದೆ. ಸದ್ಯ 121ಕ್ಕೂ ಹೆಚ್ಚು ಮೆಟ್ರೋ ಫೀಡರ್ ಬಸ್‌ಗಳು ಸೇವೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಒಟ್ಟು 300ವರೆಗೆ ಹೆಚ್ಚಿಸಲು ನಮ್ಮ ಮೆಟ್ರೋ ಗುರಿ ಹಾಕಿಕೊಂಡಿದೆ.

ಇದಷ್ಟೇ ಅಲ್ಲದೇ ನಮ್ಮ ಮೆಟ್ರೋಗೆ ಸೀಮಿತವಾಗಿರುವ ಈ ಬಿಎಂಟಿಸಿ ಫೀಡರ್ ಬಸ್‌ಗಳು ಶಾಲೆ, ಕಾಲೇಜು ಮತ್ತು ಕಾರ್ಖಾನೆಗಳಿಗೆ ರಿಯಾಯಿತಿ ಆಧಾರದಲ್ಲಿ ಒದಗಿಸಲು ಬಿಎಂಟಿಸಿ ತೀರ್ಮಾನಿಸಿದೆ. ಕಿಲೋ ಮೀಟರ್‌ ಲೆಕ್ಕದಲ್ಲಿ ನೀವು ಸಾಮಾನ್ಯ ಬಸ್, ಎಸಿ, ಇನ್ನಿತರ ಬಸ್‌ಗಳ ಸೇವೆ ಪಡೆಯಬಹುದು ಎಂದು ನಿಗಮ ತಿಳಿಸಿದೆ.

ಇಂದಿನಿಂದ ನಮ್ಮ ಮೆಟ್ರೋ ವಿವಿಧ ನಿಲ್ದಾಣಗಳಲ್ಲಿ ಹೊಸ ಫೀಡರ್ ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+