Metro Feeder Bus: ಈ ಮಾರ್ಗದಲ್ಲಿ ನಾಳೆ ಜ.6ರಿಂದ ಹೊಸ ಮೆಟ್ರೋ ಫೀಡರ್ ಬಸ್ ಸೇವೆ ಶುರು

ಬೆಂಗಳೂರು, ಜನವರಿ 05: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಶನಿವಾರ ಜನವರಿ 6 ರಂದು ಈ ಎರಡು ಹೊಸ ಮೆಟ್ರೋ ಫೀಡರ್ ಬಸ್ ಮಾರ್ಗಗಳನ್ನು ಪರಿಚಯಿಸಲಿದೆ. ಇವುಗಳು ಯಾವ ಮಾರ್ಗದಲ್ಲಿ ಓಡಲಿವೆ ಎಂಬೆಲ್ಲ ಮಾಹಿತಿ ಇಲ್ಲಿದೆ.

ಬಿಎಂಟಿಸಿಯು ಕಡಿಮೆ ದರದಲ್ಲಿ ಮಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹವಾ ನಿಯಂತ್ರಿತ (ಎಸಿ) ಬಸ್‌ಗಳ ಸೇವೆ ನೀಡಲಿದೆ ಎಂದು ನಮ್ಮ ಮೆಟ್ರೋ ಮಾಹಿತಿ ನೀಡಿದೆ. ಈ ಬಸ್‌ಗಳು ನಾಳೆ ಶನಿವಾರದಿಂದ ಕಾಡುಗೊಡಿ ಮೆಟ್ರೋ ನಿಲ್ದಾಣದಿಂದ ಓಡಾಡಲಿವೆ.

Namma Metro Two New Feeder Bus Service Start on Tomorrow Jan 6 From Kadugodi Bus Stop

ಮೆಟ್ರೋ ಫೀಡರ್ ಬಸ್-3A ಈ ಬಸ್ 'ಹೋಪ್ ಫಾರ್ಮ್, ಐಟಿಪಿಎಲ್, ವೈಟ್‌ಫೀಲ್ಡ್ ಟಿಟಿಎಂಸಿ, ಕುಂದಲಹಳ್ಳಿ ಗೇಟ್, ಗ್ರಾಫೈಟ್ ಇಂಡಿಯಾ, ವರ್ತೂರು ಕೋಡಿ ಮತ್ತು ವೈಟ್‌ಫೀಲ್ಡ್ ಪೋಸ್ಟ್ ಆಫೀಸ್ ಮೂಲಕ ಕಾಡುಗೋಡಿ ಬಸ್ ನಿಲ್ದಾಣದಿಂದ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಸೇವೆ ನೀಡಲಿದೆ. ಈ ಮಾರ್ಗದಲ್ಲಿ ಎರಡು ಬಸ್‌ಗಳನ್ನು ನಿಯೋಜನೆಗೊಂಡಿವೆ.

ಕಾಡುಗೋಡಿ ಬಸ್ ನಿಲ್ದಾಣದ ಸಂಖ್ಯೆ ನೋಡುವುದಾದರೆ, ಬೆಳಗ್ಗೆ 5:45 ಗಂಟೆಗೆ ಅದೇ ರೀತಿ, 6:45, 8, 8:30, 9:25ಕ್ಕೆ, 10:20, 11:45, ಮಧ್ಯಾಹ್ನ 1:10ಗಂಟೆಗೆ, 3:05, 3:30, ಸಂಜೆ 4:25, 6:15, 7:90 ಮತ್ತು 7:40ಕ್ಕೆ ಬಸ್ ಹೊರಡಲಿದೆ.

ಮೆಟ್ರೋ ಫೀಡರ್ 2ನೇ ಬಸ್ ಮಾಹಿತಿ

ಮೆಟ್ರೋ ಫೀಡರ್ ಬಸ್ (4A) ಬಸ್ ಹೋಪ್ ಫಾರ್ಮ್, ವೈಟ್‌ಫೀಲ್ಡ್ ಪೋಸ್ಟ್ ಆಫೀಸ್, ಗ್ರಾಫೈಟ್ ಇಂಡಿಯಾ, ವರ್ತೂರು ಕೋಡಿ, ಕುಂದಲಹಳ್ಳಿ ಗೇಟ್ ವೈಟ್‌ಫೀಲ್ಡ್ ಟಿಟಿಎಂಸಿ ಮತ್ತು ಐಟಿಪಿಎಲ್ ಮೂಲಕ ಕಾಡುಗೋಡಿ ಬಸ್ ನಿಲ್ದಾಣದಿಂದ ಕಾಡುಗೋಡಿ ಬಸ್ ನಿಲ್ದಾಣವರೆಗೆ ಓಡಾಟಲಿದೆ. ಈ ಮಾರ್ಗದಲ್ಲಿ ಸಹ ಎರಡು ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಫಿಡರ್ ಬಸ್ ಸಹ ಬೆಳಗ್ಗೆ 6ಗಂಟೆಯಿಂದ ಕ್ರಮವಾಗಿ 7, 8:15, 8:45, 9:40, 10:35, 11:30, ಮಧ್ಯಾಹ್ನ, 1:25, ಮಧ್ಯಾಹ್ನ 3:20, 3:45, 4:40, 6:30, 7:55 ಮತ್ತು 7:55ಕ್ಕೆ ಪ್ರಯಾಣ ಆರಂಭಿಸಲಿದೆ.

ಫೀಡರ್ ಬಸ್ ಸೇವೆ ವಿಸ್ತರಣೆ

ಇತ್ತೀಚೆಗಷ್ಟೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಒಟ್ಟು 121 ಮೆಟ್ರೋ ಫೀಡರ್ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಈ ಸೇವೆನಯನ್ನು ರಿಯಾಯಿತಿ ದರದಲ್ಲಿ ಬಿಎಂಟಿಸಿಯು ಶಾಲಾ ಕಾಲೇಜು, ಕಾರ್ಖಾನೆಗಳಿಗೂ ವಿಸ್ತರಣೆ ಮಾಡಿದೆ. ರಿಯಾಯಿತಿ ದರದಲ್ಲಿ ನೀವು ಸಹ ಮೆಟ್ರೋ ಫೀಡರ್ ಬಸ್ ಸೇವೆ ಪಡೆಯಬಹುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+