Namma Metro: ಮೆಟ್ರೋ ರೈಲಿನಲ್ಲಿ ಮದ್ಯ ಸಾಗಾಣೆಗೆ ಚಿಂತನೆಗೆ ವಿರೋಧ, ಪ್ರಯಾಣಿಕ ಸ್ನೇಹಿ ಸೌಲಭ್ಯಗಳಿಗೆ ಆಗ್ರಹ
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ನಮ್ಮ ಮೆಟ್ರೋ (Namma Metro) ರೈಲಿನಲ್ಲೂ ಆಲ್ಕೋಹಾಲ್ ಅನ್ನು ಸಾಗಾಣೆ ಮಾಡಲು ಅವಕಾಶ ನೀಡುವ ಚಿಂತನೆಯಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮದ್ಯಪ್ರಿಯ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಿದೆ. ಆದರೆ ಮೆಟ್ರೋ ಅಧಿಕಾರಿಗಳ ಈ ನಿರ್ಧಾರಕ್ಕೆ ಒಂದಷ್ಟು ವಿರೋಧ ಸಹ ವ್ಯಕ್ತವಾಗುತ್ತಿದೆ.
ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ತಮ್ಮೊಂದಿಗೆ ಮದ್ಯದ ಬಾಟಲಿ ಒಯ್ಯಲು ಅವಕಾಶ ಈವರೆಗೂ ಇರಲಿಲ್ಲ. ಇದಕ್ಕೆ ಅವಕಾಶ ನೀಡಬೇಕೆಂಬ ಚಿಂತನೆ ಚರ್ಚೆಗಳು ವರ್ಷಗಳಿಂದಲೂ ಕೇಳಿ ಬರುತ್ತಿದ್ದವು. ಆದರೆ ಈವರೆಗೂ ನಿರ್ಧಾರ ಕೈಗೊಳ್ಳದ ಬಿಎಂಆರ್‌ಸಿಎಲ್ ಇದೀಗ ಆ ಬಗ್ಗೆ ಚಿಂತನೆ ನಡೆಸಿದೆ. ಈ ಬಗ್ಗೆ ಅಂತಿಮ ನಿರ್ಧಾರ ಹೊರ ಬಿದ್ದಿಲ್ಲ. ಅಷ್ಟರಲ್ಲಾಗಲೇ ಮೆಟ್ರೋ ಪ್ರಯಾಣಿಕರ ವೇದಿಕೆ ನಿರ್ಧಾರವನ್ನು ಖಂಡಿಸಿದೆ.

ಮೆಟ್ರೋದಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ನೀಡುವ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ನಿರ್ಧಾರ ಸರಿಯಲ್ಲ, ಇದು ಹಾಸ್ಯಾಸ್ಪದ ಎಂದು ಮೆಟ್ರೋ ಪ್ರಯಾಣಿಕರ ವೇದಿಕೆ ಟೀಕಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ದರ ಇಳಿಕೆ ಮಾಡಬೇಕು. ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಟ್ರಿಪ್ ಸೇವೆ ಹೆಚ್ಚಿಸಬೇಕು. ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ವಾಹನಗಳ ಉಚಿತ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕು. ಇನ್ನೂ ಆರಂಭಗೊಳ್ಳಬೇಕಿರುವ ಹೊಸ ಮಾರ್ಗಗಳನ್ನು ತ್ವರಿತವಾಗಿ ಸಾರ್ವಜನಿಕರಿಗೆ ಮುಕ್ತೊಳಿಸುವ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳಬೇಕು. ಮೆಟ್ರೋದಲ್ಲಿ ಮದ್ಯ ಸಾಗಾಣೆಗೆ ಅವಕಾಶ ನೀಡುವುದು ಸರಿಯಲ್ಲ ಎಂದು ವೇದಿಕೆ ತನ್ನ ಅಭಿಪ್ರಾಯ ಹೊರ ಹಾಕಿದೆ. ಜೊತೆಗೆ ಪ್ರಯಾಣಿಕರಿಗೆ ಅಗತ್ಯ ಇರುವ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.
ಮೆಟ್ರೋದಲ್ಲಿ 58 ವಸ್ತುಗಳ ಸಾಗಾಣೆಗೆ ನಿಷೇಧ
ನಮ್ಮ ಮೆಟ್ರೋದಲ್ಲಿ ಸುಮಾರು 58 ವಸ್ತುಗಳ ಸಾಗಾಣೆಗೆ ನಿಷೇಧವಿದೆ. ಅದರಲ್ಲಿ ಮದ್ಯ ಸಾಗಾಣೆಯು ಒಂದು. ಮುಂದಿನ ವರ್ಷ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಏರ್‌ಪೋರ್ಟ್‌ಗೆ ಹೊಸ ನೀಲಿ ಮಾರ್ಗ ತೆರೆಯಲಾಗುತ್ತಿದೆ. ಈ ಮಾರ್ಗ ಆರಂಭದ ಬಳಿಕ ಮೆಟ್ರೋದಲ್ಲಿ ಆಲ್ಕೋಹಾಲ್ ಕೊಂಡೊಯ್ಯಲು ಅವಕಾಶ ನೀಡಲು ಚಿಂತನೆ ನಡೆಸಿದೆ. ಇದನ್ನು ಪ್ರಯಾಣಿಕರ ವೇದಿಕೆ, ಸೇರಿ ಕೆಲವರು ಆಕ್ಷೇಪಿಸಿದ್ದಾರೆ.
ಪಿಂಕ್ ಲೈನ್ ಕಾರ್ಯಾಚರಣೆ ಗುಡ್‌ನ್ಯೂಸ್
ನಮ್ಮ ಮೆಟ್ರೋ ಗುಲಾಬಿ ಮಾರ್ಗವನ್ನು ಈ ವರ್ಷ ಎರಡು ಹಂತಗಳಲ್ಲಿ ತೆರೆಯಲು ನಮ್ಮ ಮೆಟ್ರೋ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಒಟ್ಟು ಸುಮಾರು 21 ಕಿಲೋ ಮೀಟರ್ ಇರುವ ಈ ಮಾರ್ಗದ ಪೈಕಿ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕರೆ ವರೆಗೆ 7.5 ಕಿಮೀ ಲೈನ್ ಅನ್ನು 2026 ಮೇ ತಿಂಗಳಲ್ಲಿ ತೆರೆಯಲಾಗುತ್ತದೆ. ನಂತರ ಡಿಸೆಂಬರ್ 2026ರ ಹೊತ್ತಿಗೆ ಬಾಕಿ 13.5 ಕಿಲೋ ಮೀಟರ್ ತೆರೆಯಲು ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮಾರ್ಗವು ಸುರಂಗ ಹಾಗೂ ಎತ್ತರಿಸಿದ ಮಾರ್ಗವನ್ನು ಹೊಂದಿದೆ. ಈ ಸಂಬಂಧ ಮೆಟ್ರೋ ಸುರಕ್ಷತಾ ಆಯುಕ್ತರು ಪ್ರೊಟೋಟೈಪ್ ಮಾದರಿಯ ರೈಲಿನ ತಪಾಸಣೆ, ಪರೀಕ್ಷೆಗಳನ್ನು ನಡೆಸಿತ್ತಿದ್ದು, ಅದು ಏಪ್ರಿಲ್ ಅಂತ್ಯಕ್ಕೆ ಕೊನೆಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications