Namma Metro: ಪಿಂಕ್ ಲೈನ್ ಸುರಂಗ ಮಾರ್ಗದ ಮಹತ್ವದ ಅಪ್ಡೇಟ್

ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ವಿಸ್ತರಣೆ ಹಾಗೂ ನೂತನ ಕಾಮಗಾರಿಗಳು ನಡೆಯುತ್ತಿವೆ. ಈ ಪೈಕಿ ಸುರಂಗ ಕೊರೆಯುತ್ತಿದ್ದ ಟನಲ್ ಬೋರಿಂಗ್ ಮಷಿನ್ (TBM) 'ರುದ್ರ' 718ಮೀ ರಂಧ್ರವನ್ನು ಯಶಸ್ವಿಯಾಗಿ ಕೊರೆದು ಹೊರ ಬಂದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗುರುವಾರ ತಿಳಿಸಿದೆ.

ನಮ್ಮ ಮೆಟ್ರೋ ಪಿಂಕ್ ಮಾರ್ಗದ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಈ ಮಾರ್ಗದಲ್ಲಿ ರುದ್ರ ಬೋರಿಂಗ್ ಯತ್ರವು ಲಕ್ಕಸಂದ್ರ ನಿಲ್ದಾಣದಿಂದ ಲ್ಯಾಂಗ್‌ಫೋರ್ಡ್‌ಟೌನ್ ನಿಲ್ದಾಣವರೆಗೆ 718ಮೀ ಸುರಂಗ ಕೊರೆಯುವಲ್ಲಿ ಯಶಸ್ವಿಯಾಗಿದೆ.

Namma Metro TBM Rudra Complete Tunneling 718m Pink line Out in Langford Town Station

ಈ ಟನಲ್ ಬೋರಿಂಗ್ ಮಷಿನ್ (TBM) ಯಂತ್ರ ರುದ್ರ ಇದೇ ವರ್ಷ ಜುಲೈ 14ರದು ಕೆಲಸ ಆರಂಭಿಸಿತ್ತು. ಈ ಪೈಕಿ ಮೊದಲ ಮೊದಲು ಹಂತದ ಶಾಶ್ವತ ರಿಂಗ್‌ ಅನ್ನು ಜುಲೈ 17ರಂದು ಅಳವಡಿಸಲಾಯಿತು. ನಂತರ ಅರ್ಧ ಕಿಲೋ ಮೀಟರ್‌ಗೂ ಹೆಚ್ಚು ಸುರಂಗ ಕೊರೆದು ಲ್ಯಾಂಗ್‌ಫೋರ್ಡ್ ಟೌನ್‌ ನಿಲ್ದಾಣ ಬಳಿ ಇಂದು (26.10.2023) ಯಂತ್ರವು ಯಾವುದೇ ಅಡೆತಡೆ ಒಟ್ಟು 100 ದಿನ ಪೂರೈಸಿ ಹೊರ ಬಂದಿದೆ.

ಈ ಹಿಂದೆ ಇದೇ ಮಾರ್ಗದಲ್ಲಿ ಸುರಂಗವನ್ನು ಬಿಎಂಆರ್‌ಸಿಲ್ ಎಲ್ ಯಶ್ವಸ್ವಿಯಾಗಿ ಕೊರೆದಿತ್ತು. ಯಂತ್ರವು ಸೌತ್ ರ್ಯಾಂಪ್ ಮತ್ತು ಡೈರಿ ಸರ್ಕಲ್ ನಿಲ್ದಾಣದ ಮಧ್ಯೆ ಒಟ್ಟು 613.2 ಮೀಟರ್ ಸುರಂಗ ಕೊರೆದಿತ್ತು. ನಂತರ ಡೇರಿ ವೃತ್ತದ ನಿಲ್ದಾಣದಿಂದ ಲಕ್ಕಸಂದ್ರ ಮೆಟ್ರೋ ನಿಲ್ದಾಣದ ಮಧ್ಯದವರೆಗಿನ 746.2 ಮೀಟರ್‌ ಉದ್ದದ ಸುರಂಗ ಕೊರೆಯುವಲ್ಲಿ ಟಿಬಿಎಂ ಯಶಸ್ವಿಯಾಗಿತ್ತು.

Namma Metro TBM Rudra Complete Tunneling 718m Pink line Out in Langford Town Station

ಸದ್ಯ ರುದ್ರ ಟಿಬಿಎಂ ಶೇಕಡಾ 100ರಷ್ಟು ಸುರಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಾರ್ಯಚರಣೆಗೆ ಬಳಸಿಕೊಳ್ಳಲಾದ ಯಂತ್ರಗಳ ಪೈಕಿ ಈ ರುದ್ರ ಏಳನೇ ಟನಲ್ ಬೋರಿಂಗ್ ಮಷಿನ್ ಎನ್ನಲಾಗಿದೆ.

ಪಿಂಕ್‌ ಲೈನ್‌ ಎಲ್ಲಿಂದ ಎಲ್ಲಿಗೆ?

ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಡಿ ಪಿಂಕ್‌ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದು ನಾಗರವಾದಿಂದ ಕಾಳೇನ ಅಗ್ರಹವರೆಗೆ (ನೈಸ್‌ ರೋಡ್‌) ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಮಾರ್ಗವು ಕಾಡಗೊಂಡನಹಳ್ಳಿ, ವೆಂಟೇಶಪುರ, ಟ್ಯಾನರಿ ರಸ್ತೆ, ಪಾಟರಿ ಟೌನ್, ಕಂಟೋನ್ಮೆಂಟ್ ರೈಲು ನಿಲ್ದಾಣ (ಭೂಗತ) ಹಾದು ಶಿವಾಜಿನಗರ, ಎಂಜಿ ರಸ್ತೆ ಮೂಲಕ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಮಾರ್ಗವಾಗಿ ಲ್ಯಾಂಗ್‌ಫೋರ್ಡ್ ಟೌನ್, ಲಕ್ಕಸಂದ್ರ ದಿಂದ ಮುಂದೆ ಸಾಗಿ ಡೈರಿ ವೃತ್ತ, ತಾವರೆಕೆರೆ, ಜಯದೇವ ಆಸ್ಪತ್ರೆ, ಜೆಪಿನಗರ 4ನೇ ಬ್ಲಾಕ್, ಐಐಎಂಬಿ ಮೂಲಕ ಹುಳಿಮಾವು ತಲುಪಿ ಅಲ್ಲಿಂದ ಕಾಳೇನ ಅಗ್ರಹಾರಕ್ಕೆ ಕೊನೆಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+