Namma Metro: ಮೆಟ್ರೋ ನಿಲ್ದಾಣಗಳ ಚಿಲ್ಲರೆ ವ್ಯಾಪಾರಿಗಳಿಗೆ ನಷ್ಟ, ಸಂಕಷ್ಟ! ಕಾರಣವೇನು?
ಬೆಂಗಳೂರು, ಏಪ್ರಿಲ್ 28: ಬೆಂಗಳೂರು ನಮ್ಮ ಮೆಟ್ರೋ ದರವು ಗರಿಷ್ಠ 100 ರೂಪಾಯಿಗೆ ಏರಿಕೆ ಆದ ಬಳಿಕ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಕಡಿಮೆ ಆಗುತ್ತಾ ಸಾಗಿದೆ. ಇದರಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬಾಡಿಗೆ ಪಡೆ ಅಂಗಡಿ ಮುಂಗಟ್ಟುಗಳ ಪರಿಸ್ಥಿತಿ ಹೇಳತೀರದಾಗಿದೆ. ಕಾರಣ ಅವರ ಆದಾಯ, ವ್ಯಾಪಾರ ವಹೀವಾಟಿನಲ್ಲಿ ಕುಸಿತವಾಗಿದೆ. ಶಾಪ್‌ಗಳಿಗೆ ಬೀಗ್ ಹಾಕುವ ಸ್ಥಿತಿ ಬಂದರೂ ಬರಬಹುದು ಎನ್ನಲಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರವಾಗಿ ಇಳಿಕೆ ಆಗಿದೆ. ಇತ್ತೀಚೆಗೆ ಏಪ್ರಿಲ್ 17ರಂದು ಒಂದೇ ದಿನ ವಿವಿಧ ಕಾರಣಗಳಿಂದ 9.20 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಅಂದು ಪರೀಕ್ಷೆ, ವಾರಾಂತ್ಯ, ರಜೆಗಳ ಹಿನ್ನೆಲೆ ಹೆಚ್ಚಿನ ಜನರ ಓಡಾಡಿದ್ದಾರೆ. ಅದರ ಹೊರತು ಬೆಲೆ ಏರಿಕೆ ಬಳಿಕ ಲಕ್ಷಗಟ್ಟಲೇ ಜನರು ಮೆಟ್ರೋ ಸಂಚಾರ ತಿರಸ್ಕೃರಿಸಿದ್ದಾರೆ. ಪರಿಣಾಮ ಮೆಟ್ರೋ ನಿಲ್ದಾಣಗಳಲ್ಲಿ ಇರುವ ತಿಂಡಿ, ದೇಶಿ ಫುಡ್, ಇತರ ವಸ್ತುಗಳ ಮಾರಾಟ ಮಳಿಗೆಗಳ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿ ಬೃಹತ್ ಮಳಿಗೆಗಳ ಬದಲಾಗಿ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಿದೆ. ಪ್ರಯಾಣಿಕರ ಕುಸಿತದಿಂದ ವ್ಯಾಪರವೂ ಕುಸಿದಿದೆ. ಇತ್ತ ಆದಾಯ ಕಡಿಮೆ ಆಗಿದ್ದಲ್ಲದೇ, ಮಳಿಗೆಯ ದುಬಾರಿ ಬಾಡಿಗೆ ಕಟ್ಟಲಾಗದೇ ವ್ಯಾಪಾರಿಗಳು ನಲುಗಿದ್ದಾರೆ. ಅನೇಕ ಅಂಗಡಿಗಳು ಕಾರ್ಯಾಚರಣೆ ಕಡಿಮೆ ಮಾಡಿವೆ. ಕೆಲವೆಡೆ ಮಳಿಗೆ ಮುಚ್ಚಲಾಗಿದೆ. ಇದರು ಬಿಎಂಆರ್‌ಸಿಎಲ್ ವಾರ್ಷಿಕ ಆದಾಯದ ಮೇಲೂ ಹೊಡೆತ ಬೀಳುವ ನಿರೀಕ್ಷೆ ಇದೆ.
ಪ್ರಯಾಣಿಕರಿಲ್ಲ, ವ್ಯಾಪಾರ- ಆದಾಯ ಕುಸಿತ
ಇಂದಿರಾನಗರ ಹಾಗೂ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಸೇರಿದಂತೆ ಐದು ನಿಲ್ದಾಣಗಳಲ್ಲಿ ಕೈಯಿಂದ ತಯಾರಿಸಿದ ತಿಂಡಿಗಳ ಬ್ರಾಂಡ್ ಆಗಿರುವ 'ಗೋ ದೇಶಿ' ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಸುಮಾರು ಶೇಕಡಾ 20 ರಷ್ಟು ವಹೀವಾಟು ಕುಸಿತಿದೆ ಎಂದು ಶಾಪ್ ವ್ಯವಸ್ಥಾಪಕರು ತಿಳಿಸಿದ್ದಾರೆ.
'ಗೋ ದೇಶಿ'ಯ ನಾಗಸಂದ್ರ ಮೆಟ್ರೋ ನಿಲ್ದಾಣದ ಶಾಖೆಯು ಸುಮಾರು ಶೇ.40 ರಷ್ಟು ನಷ್ಟ ಅನುಭವಿಸುತ್ತಿದ್ದಂತೆ ಬಾಗಿಲು ಹಾಕಿತು. ಹೀಗೆ ಅನೇಕ ವ್ಯಾಪಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಆಭರಣ ಶಾಪ್ ಮಾಲೀಕರು, ದುಡಿಮೆಯ ಮುಕ್ಕಾಲು ಭಾಗ ಶಾಪ್ ಬಾಡಿಗೆ ಹೋಗುತ್ತಿದೆ. ಹೀಗಾಗಿ ಬದುಕು ಹೇಗೆ. ತೆರಿಗೆ, ಬಾಡಿಗೆ ಹೆಚ್ಚಿದ ಸಂದರ್ಭದಲ್ಲಿ ಪ್ರಯಾಣಿಕ ಸಂಖ್ಯೆ ಕ್ಷೀಣಿಸಿದ್ದು, ವ್ಯಾಪಾರ 20 ರಷ್ಟು ಇಳಿಕೆ ಆಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ನಗರದ ಬೇರೆ ಬೇರೆ ಮೆಟ್ರೋ ನಿಲ್ದಾಣಗಳಲ್ಲಿ ಇದೇ ಸಮಸ್ಯೆ ಇದೆ. ಮದ್ರಾಸ್ ಕಾಫಿ ಹೌಸ್ ಮಾಲೀಕರು ಸಹ ನಿಯಮಿತ ಗ್ರಾಹಕರು ಮೊದಲು ಬರುತ್ತಿದ್ದರು. ಈ ಬೆಲೆ ಏರಿಕೆ ಬಳಿಕ ಅವರಲ್ಲೆ ನಮ್ಮ ಮೆಟ್ರೋ ಸಾರಿಗೆಯಿಂದ ವಿಮುಖ ರಾಗಿದ್ದಾರೆ. ಇದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಹೀಗೆ ಮುಂದುವರಿದರೆ ಇನ್ನಷ್ಟು ಕಷ್ಟವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ BMRCL ಮೆಟ್ರೋ ನಿಲ್ದಾಣಗಳಲ್ಲಿನ ಬಾಡಿಗೆ ದರ ಇಳಿಸಿದರೆ ಈ ಸಮಯದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಬಾಡಿಗೆ ದರ ಹೆಚ್ಚಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯೆ
ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ನಮ್ಮ ಮೆಟ್ರೋ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಎ.ಎಸ್ ಅವರು, ಪರಿಸ್ಥಿತಿ ಹೀಗೆ ಮುಂದುವರಿಯುವುದಿಲ್ಲ. ನಮ್ಮ ಮೆಟ್ರೋ ಪ್ರಯಾಣಿಕರ ಹೆಚ್ಚಳವಾಗಲಿದೆ. ಪ್ರಯಾಣ ದರ ಏರಿಕೆ ವೇಳೆ ಕುಸಿತದಂತೆ ಕಂಡು ಬಂದರೂ ಸಹಿತ ಸದ್ಯ ಸ್ಥಿರವಾಗಿದೆ. ಮುಂದಿನ ದಿನಗಳಲ್ಲಿ ಮರಳಿ ಜನ ಮೆಟ್ರೋಗೆ ಬರುತ್ತಾರೆ. ನಿಲ್ದಾಣದಲ್ಲಿರುವ ಸಣ್ಣ ಸಣ್ಣ ವ್ಯಾಪಾರಗಳಲ್ಲಿ ಮತ್ತೆ ಸುಧಾರಣೆ ಆಗಲಿದೆ. ವ್ಯಾಪಾರಿಗಳು ತಮ್ಮನ್ನು ತಾವು ಉಳಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications