Namma Metro: WPL ಕ್ರಿಕೆಟ್ 2025 ಪಂದ್ಯಾವಳಿ: ಮೆಟ್ರೋ ರೈಲು ಸಮಯದಲ್ಲಿ ಬದಲಾವಣೆ, ವೇಳಾಪಟ್ಟಿ

ಬೆಂಗಳೂರು, ಫೆಬ್ರವರಿ 20: ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ 2025 ಪಂದ್ಯವಾಳಿಗಳು ನಡೆಯಲಿವೆ. ಈ ಕಾರಣದಿಂದ ಯಾವ ಯಾವ ದಿನಗಳು WPL ಕ್ರಿಕೆಟ್ ಪಂದ್ಯವಾಳಿ ನಡೆಯುತ್ತೋ ಅಂದು ನಮ್ಮ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ಕ್ರಿಕೆಟ್ ಪ್ರೇಮಿಗಳು ಸಮಯ, ವೇಳಾಪಟ್ಟಿ ಗಮನಿಸಿ ಓಡಾಡುವಂತೆ BMRCL ತಿಳಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿರುವ ಮಾಹಿತಿ ಪ್ರಕಾರ, ಟಾಟಾ ಮಹಿಳಾ ಪ್ರೀಮಿಯರ್ ಲೀಗ್ (WPL) T-20 ಕ್ರಿಕೆಟ್ ಪಂದ್ಯಗಳು ಬೆಂಗಳೂರಿನಲ್ಲಿ ಇದೇ ತಿಂಗಳ ಫೆಬ್ರವರಿ 21, 22, 24, 25, 26, 27, 28 ಮತ್ತು ಮಾರ್ಚ್ 01, 2025 ರಂದು ನಡೆಯಲಿವೆ. ಈ ಸಂಬಂಧ ಮೆಟ್ರೋ ಸಂಚಾರ ಸಮಯದಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ ಎಂದು ಗುರುವಾರ ಹೇಳಿದೆ.

Namma Metro Service Timings Extended for WPL 2025 in Bengaluru Match

ಕ್ರಿಕೆಟ್ ಪಂದ್ಯಗಳಿಗೆ ಪ್ರಯಾಣಿಸಲು ಮತ್ತು ಹಿಂತಿರುಗಲು ಅನುಕೂಲವಾಗುವಂತೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ಮೇಲೆ ದಿನಾಂಕಗಳಲ್ಲಿ ನಮ್ಮ ಮೆಟ್ರೋ ನೇರಳೆ ಮತ್ತು ಮೆಟ್ರೋ ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ಸೇವೆಗಳನ್ನು ವಿಸ್ತರಣೆ ಮಾಡಿ ಆದೇಶಿಸಲಾಗಿದೆ.

ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಲ್ಲಿನ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಾದ ಚಲ್ಲಘಟ್ಟ, ವೈಟ್‌ ಫೀಲ್ಡ್ ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು ಸೇವೆ ರಾತ್ರಿ 11.20 ರವರೆಗೆ ಮತ್ತು ಮೆಜೆಸ್ಟಿಕ್‌ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ರಾತ್ರಿ 11:55 ಕ್ಕೆ ಹೊರಡುತ್ತವೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ ಗಳು (ಎನ್‌ಸಿಎಂಸಿ) ಮತ್ತು ಟೋಕನ್‌ಗಳನ್ನು ಬಳಸಿ ಪ್ರಯಾಣಿಸಬಹುದು ಎಂದು ಗುರುವಾರ ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ಹೇಳಿದೆ.

ನಮ್ಮ ಮೆಟ್ರೋ ದರ ಏರಿಕೆ ಮಧ್ಯೆ ಕ್ರಿಕೆಟ್ ಪ್ರಿಯರಿಗಾಗಿ ನಮ್ಮ ಮೆಟ್ರೋದಲ್ಲಿ ತಡರಾತ್ರಿವರೆಗೆ ಸೇವೆ ವಿಸ್ತರಣೆ ಮಾಡಿದೆ. ಪ್ರತಿ ಭಾರಿ ಕ್ರಿಕೆಟ್, ವಿಶೇಷ ಸಂದರ್ಭಗಳಲ್ಲಿ ಹೀಗೆ ಮೆಟ್ರೋ ಸೇವೆ ವಿಸ್ತರಣೆ ಆಗುತ್ತದೆ. ಆದರೆ ಯಾವ ಕಾರಣಕ್ಕೆ ಬೆಳಗ್ಗೆ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಎಂದಿನಂತೆ ಮೆಟ್ರೋ ಸಂಚರಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+