ಸುರಂಗ ಕೊರೆದು ಮುಗಿಸಿದ ಊರ್ಜಾ; ಮೆಟ್ರೋ ಮಾರ್ಗದ ವಿವರ

ಬೆಂಗಳೂರು, ಸೆಪ್ಟೆಂಬರ್ 22; ಕಂಟೋನ್ಮೆಂಟ್-ಶಿವಾಜಿನಗರ ನಡುವೆ ಸುರಂಗ ನಿರ್ಮಿಸುವ ಕಾರ್ಯವನ್ನು ಊರ್ಜಾ ಯಂತ್ರವೂ ಬುಧವಾರ ಪೂರ್ಣಗೊಳಿಸಿದೆ. ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ವಿಸ್ತರಿತ ಮಾರ್ಗ ಇದಾಗಿದೆ.

Recommended Video

      ಮೆಟ್ರೋ ಸುರಂಗ ಮಾರ್ಗ ಕೊರೆದು 13 ತಿಂಗಳ ನಂತರ ಹೊರ ಬಂದ ಊರ್ಜಾ ಯಂತ್ರ | Oneindia Kannada

      ಬುಧವಾರ ಊರ್ಜಾ ಯಂತ್ರವೂ ಸುರಂಗ ಮಾರ್ಗ ಕೊರೆದು ಹೊರ ಬರುವ ಕ್ಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕ್ಷಿಯಾದರು. 2020ರ ಜುಲೈ 30ರಂದು ಈ ಯಂತ್ರ ಸುರಂಗ ಕೊರೆಯುವ ಕಾರ್ಯವನ್ನು ಆರಂಭಿಸಿತ್ತು.

      ನಮ್ಮ ಮೆಟ್ರೋ 2ನೇ ಹಂತದ ವಿಸ್ತರಿತ ರೀಚ್-6 ಮಾರ್ಗದ ಮೊದಲ ಸುರಂಗ ಮಾರ್ಗ ಇದಾಗಿದೆ. ಚೀನಾದಿಂದ ಆಮದು ಮಾಡಿಕೊಂಡ ಊರ್ಜಾ ಸುರಂಗ ಕೊರೆಯುವ ಯಂತ್ರ ಒಟ್ಟು 855 ಮೀಟರ್ ಉದ್ದದ ಸುರಂಗ ಕೊರೆದು ಪೂರ್ಣಗೊಳಿಸಿದೆ.

       Namma Metros TBM, Urja Finishes Drilling 855 Metres In 13 Months

      ಗೊಟ್ಟಿಗೆರೆ-ನಾಗವಾರ ನಡುವೆ ರೀಚ್-6 ಮಾರ್ಗ ನಿರ್ಮಾಣವಾಗುತ್ತಿದೆ. ಡೇರಿ ವೃತ್ತದಿಂದ ನಾಗವಾರ ನಡುವೆ 13.9 ಕಿ. ಮೀ. ಸುರಂಗ ಮಾರ್ಗ, ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ತನಕ 9.28 ಕಿ. ಮೀ. ಮಾರ್ಗದ ಸುರಂಗ ಕೊರೆಯುವ ಪ್ರಕ್ರಿಯೆ ಸಹ ಜಾರಿಯಲ್ಲಿದೆ.

      ಸುರಂಗ ಕೊರೆಯುವ ಪ್ರಕ್ರಿಯೆಯಲ್ಲಿ ಊರ್ಜಾ, ವಿಂಧ್ಯ, ಲವಿ, ಅವನಿ, ಭದ್ರಾ ಸೇರಿ 6ಕ್ಕೂ ಹೆಚ್ಚು ಯಂತ್ರಗಳು ತೊಡಗಿವೆ. ರೀಚ್ - 6 ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ವಿಸ್ತರಣೆ ಮಾಡಲಾಗಿದೆ. 2024ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳ್ಳಬೇಕು.

      ವಿವಿಧ ಯಂತ್ರಗಳು; ವಿಂಧ್ಯ ಟಿಬಿಯಂ ಯಂತ್ರ ಊರ್ಜಾಗಿಂತ 50 ಮೀಟರ್ ಹಿಂದಿದೆ. ಮುಂದಿನ ತಿಂಗಳು ಸುರಂಗ ಕೊರೆಯುವ ಕಾರ್ಯವನ್ನು ಇದು ಪೂರ್ಣಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.

      ಶಿವಾಜಿನಗರ-ಎಂ. ಜಿ. ರಸ್ತೆ ನಡುವೆ ಅವನಿ ಮತ್ತು ಲವಿ ಟಿಬಿಎಂ ಯಂತ್ರಗಳು ಸುರಂಗ ಕೊರೆಯುತ್ತಿವೆ. ಆರ್‌ಟಿ 01 ಎಂಬ ಟಿಬಿಎಂ ಯಂತ್ರ ವೆಲ್ಲಾರ ಜಂಕ್ಷನ್-ಲ್ಯಾಂಗ್‌ಫೋರ್ಡ್ ರಸ್ತೆ ನಡುವೆ ಸುರಂಗ ಕೊರೆಯುವ ಕಾರ್ಯ ಮಾಡುತ್ತಿದೆ.

      ಭದ್ರಾ ಟಿಬಿಎಂ ಯಂತ್ರ ಕೆಲವು ದಿನಗಳ ಹಿಂದೆ ಕಾರ್ಯಾರಂಭ ಮಾಡಿದೆ. ಟ್ಯಾನರಿ ರಸ್ತೆ-ನಾಗವಾರ ನಡುವೆ ಈ ಯಂತ್ರ ಸುರಂಗ ಕೊರೆಯಲಿದೆ. ನಮ್ಮ ಮೆಟ್ರೋ 2ನೇ ಹಂತದ ಮಾರ್ಗದಲ್ಲಿ ಸುರಂಗ ಮಾರ್ಗಗಳೇ ಹೆಚ್ಚಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗುವ ಸಾಧ್ಯತೆಯೂ ಇದೆ.

      ನಮ್ಮ ಮೆಟ್ರೋ 2ನೇ ಹಂತ; ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಯೋಜನೆ 75 ಕಿ. ಮೀ. ಮಾರ್ಗವನ್ನು ಒಳಗೊಂಡಿದೆ. 61 ನಿಲ್ದಾಣಗಳು ಇದರಲ್ಲಿ ಸೇರಿವೆ.

      ನಮ್ಮ ಮೆಟ್ರೋ ಯೋಜನೆಯ 1ನೇ ಹಂತದ ನೇರಳೆ ಮತ್ತು ಹಸಿರು ಮಾರ್ಗಗಳು ನಾಲ್ಕು ದಿಕ್ಕುಗಳಲ್ಲಿ ಒಟ್ಟು 34.6 ಕಿ. ಮೀ. ಉದ್ದದ ವಿಸ್ತರಣೆಯನ್ನು ಹೊಂದಿದೆ ಜೊತೆಗೆ ಎರಡು ಹೊಸ ಮಾರ್ಗಗಳನ್ನು ಹೊಂದಿದೆ.

      ಗೊಟ್ಟಿಗೆರೆ-ನಾಗವಾರ 21.25 ಕಿ. ಮೀ. ಮತ್ತು ಆರ್. ವಿ. ರಸ್ತೆ-ಬೊಮ್ಮಸಂದ್ರ 19.15 ಕಿ. ಮೀ. ಉದ್ದದ ಹೊಸ ಮಾರ್ಗ ಈ ಯೋಜನೆಯಲ್ಲಿ ಸೇರಿದೆ. ಈ ಯೋಜನೆಯ ಒಟ್ಟು ವೆಚ್ಚ 30,695 ಕೋಟಿಯಾಗಿದೆ.

      ಮೆಟ್ರೋ 2ನೇ ಹಂತದ ಯೋಜನೆಗಾಗಿ ಫ್ರೆಂಚ್ ಅಭಿವೃದ್ಧಿ ಸಂಸ್ಥೆ, ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳಿಂದ ಕ್ರಮವಾಗಿ ರೂ. 1140 ಕೋಟಿ, ರೂ. 3973 ಕೋಟಿ ಹಾಗೂ ರೂ. 2330 ಕೋಟಿಯನ್ನು ಸಾಲವಾಗಿ ಪಡೆಯಲಾಗಿದೆ.

      2ನೇ ಹಂತದ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಇತರ ಎಲ್ಲಾ ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಹಂತ 2ಎ, ಹಂತ 2 ಬಿ ಹೊರವರ್ತುಲ ರಸ್ತೆ-ಏರ್ ಪೋರ್ಟ್ ಮಾರ್ಗವನ್ನು ಒಳಗೊಂಡಿದೆ. ಇದು 58.19 ಕಿ. ಮೀ. ಮಾರ್ಗವಾಗಿದೆ.

      ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಕಾಮಗಾರಿಯನ್ನು ಹಂತ-ಹಂತವಾಗಿ ಪೂರ್ಣಗೊಳಿಸಿ ಮಾರ್ಚ್ 2025ಕ್ಕೆ ಸಂಪೂರ್ಣವಾಗಿ ವಾಣಿಜ್ಯ ಸಂಚಾರವನ್ನು ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+