Namma Metro: ಟೋಕನ್ ಖರೀದಿ ಕುಸಿತ, QR ಕೋಡ್ ಬಳಕೆದಾರರ ಗಮನಾರ್ಹ ಏರಿಕೆ

ಬೆಂಗಳೂರು, ಸೆಪ್ಟಂಬರ್ 24: ಬೆಂಗಳೂರು ನಮ್ಮ ಮೆಟ್ರೋ ಎರಡು ವರ್ಷಗಳ ಹಿಂದೆ ವಿಶ್ವದಲ್ಲೇ ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಪರಿಚಯಿಸಿತು. ನಮ್ಮ ಮೆಟ್ರೋ ಆಪ್ ಮೂಲಕವು ನೀವು ಟಿಕೆಟ್ ಪಡೆದು ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಬಹುದಾಗಿದೆ. ಹೀಗೆ ಕ್ಯೂಆರ್ ಕೋಡ್ ಟಿಕೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಮೆಟ್ರೋ ಪ್ರಯಾಣಕ್ಕೆ ಟೋಕನ್ ಪಡೆಯುವ ಪ್ರವೃತ್ತಿ ಕುಸಿದಿದೆ ಎಂದು ವರದಿ ಆಗಿದೆ.

ನಮ್ಮ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆ 08 ಲಕ್ಷಕ್ಕೆ ಏರಿಕೆ ಆಗಿದೆ. ಸಾಮಾನ್ಯ ಟಿಕೆಟ್ ಆದ ಟೋಕನ್‌ ಬದಲಾಗಿ ಕ್ಯೂಆರ್ ಕೋಡ್ ಬಳಕೆ ಮಾಡಿ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. 2022ರ ನವೆಂಬರ್‌ ರಾಜ್ಯೋತ್ಸವದಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) QR ಕೋಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿತು.

Namma Metro QR Code Ticket Users Travel Increased in Between January to July of 2024

ಲಭ್ಯ ಮಾಹಿತಿ ಪ್ರಕಾರ, ಬೆಂಗಳೂರು ನಮ್ಮ ಮೆಟ್ರೋದಲ್ಲಿ 2024ರ ಜನವರಿ ತಿಂಗಳಿಂದ ಜುಲೈ ತಿಂಗಳವರೆಗೆ ಬರೋಬ್ಬರಿ 25 ಲಕ್ಷಕ್ಕೂ ಹೆಚ್ಚು ಮಂದಿ ಕ್ಯೂಆರ್ ಕೋಡ್ ಬಳಸಿ ಓಡಾಡಿದ್ದಾರೆ. ಈ ಮೂಲಕ ಟೋಕನ್ ಬಳಕೆ ಇಳಿಕೆ ಮುಖ ಆಗಿದೆ ಎಂದು 'ದಿ ಹಿಂದು' ವರದಿ ಮಾಡಿದೆ.

ಕ್ಯೂಆರ್ ಕೋಡ್, ಸ್ಮಾರ್ಟ್ ಕಾರ್ಡ್ ಬಳಕೆದಾರರ ವಿವರ

ನಮ್ಮ ಮೆಟ್ರೋ ನೇರಳೆ ಮಾರ್ಗವು ವೈಟ್‌ಫಿಲ್ಡ್‌ನಿಂದ ಚಲಘಟ್ಟವರೆಗೆ ಸಂಪೂರ್ಣವಾಗಿ ಸಾರ್ವಜನಿಕರಿಗೆ ತೆರೆದುಕೊಂಡ ನಂತರ ಪ್ರಯಾಣಿಕರ ಸಂಖ್ಯೆ ಏರಿಗತಿಯಲ್ಲಿದೆ. ಇದೇ ವರ್ಷ ಜುಲೈ ವೇಳೆಗೆ ದೈನಂದಿನ ಪ್ರಯಾಣಿಕ ಸಂಖ್ಯೆ 08 ಲಕ್ಷಕ್ಕೆ ತಲುಪಿದೆ. ಇದರಿಂದಲೇ ಸಹ ಕ್ಯೂಆರ್ ಕೋಡ್ ಬಳಕೆದಾರರು ಹೆಚ್ಚಾಗಿರುವುದು ಗೊತ್ತಾಗಿದೆ.

Namma Metro QR Code Ticket Users Travel Increased in Between January to July of 2024

ಒಟ್ಟು ಎಂಟು ಲಕ್ಷ ದೈನಂದಿನ ಮೆಟ್ರೋ ಪ್ರಯಾಣಿಕರ ಪೈಕಿ ಶೇಕಡಾ 52.27ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ ಬಳಸಿದರೆ, ಶೇಕಡಾ 20.7ರಷ್ಟು ಮಂದಿ QR ಕೋಡ್‌ ಬಳಕೆ ಮಾಡುತ್ತಾರೆ ಎಂದು ವರದಿ ಆಗಿದೆ.

ಟೋಕನ್ ಟಿಕೆಟ್ ಖರೀದಿ ಶೇ.27 ಕುಸಿತ

ಈ ಮೊದಲು ಶೇಕಡಾ 15.9 ರಷ್ಟಿದ್ದ QR ಕೋಡ್ ಬಳಕೆದಾರರ ಸಂಖ್ಯೆ ಇದೇ ವರ್ಷ 2024ರ ಜನವರಿಯಿಂದ ಜಲೈವರೆಗಿನ ಅವಧಿಯಲ್ಲಿ ಶೇಖಡಾ 20ರಷ್ಟಕ್ಕೆ ಏರಿಕೆ ಆಗಿದೆ. ಇನ್ನೂ ಇದೇ ಅವಧಿಯಲ್ಲಿ ಟೋಕನ್ ಬಳಕೆಯು ಶೇಕಡಾ 32ರಿಂದ ಶೇಕಡಾ 27ಕ್ಕೆ ಇಳಿಕೆ ಆಗಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರ ಸಂಖ್ಯೆ ಕೊಂಚ (ಶೇಕಡಾ 53 ರಿಂದ 52.27ಕ್ಕೆ) ಇಳಿಕೆ ಆಗಿದೆ ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.

ಈ ಕ್ಯೂಆರ್ ಕೋಡ್‌ ಅನ್ನು ನೀವು ವಾಟ್ಸಾಪ್, ನಮ್ಮ ಮೆಟ್ರೋ ಆಪ್ ಬಳಸಿ ನಿರ್ಗಮಿಸುವಾಗ ಪೋನ್‌ಪೆ, ಗೂಗಲ್ ಪೇ ನಂತರ ಯುಪಿಐ ಆಧಾರದಲ್ಲಿ ಹಣ ಪಾವತಿಸಬಹುದು. ಇದರಲ್ಲಿ ಒಂದಷ್ಟು ರಿಯಾಯಿತಿ. ಇದೆ ಸದ್ಯ ಸ್ಮಾರ್ಟ್‌ ಕಾರ್ಡ್, ಟೋಕನ್, ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಚಾಲ್ತಿಯಲ್ಲಿದೆ. ವಿಶೇಷ ಸಂದರ್ಭಗಳಲ್ಲಿ ಪೇಪರ್ ಟಿಕೆಟ್ ಅನ್ನು ಸಹ ನಮ್ಮ ಮೆಟ್ರೋ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+